ಚಿಕನ್ ಜೊತೆ ಬೇಯಿಸಿದ ಆಹಾರವನ್ನು ಯಾರು ಇಷ್ಟಪಡುವುದಿಲ್ಲ. ಬಿರಿಯಾನಿಯಿಂದ ಹಿಡಿದು ತಂದೂರಿಯವರೆಗೆ ಹಲವು ಬಗೆಯ ಆಹಾರಗಳನ್ನು ಅತಿಯಾಗಿ ಬೇಯಿಸಲಾಗುತ್ತದೆ. ಇದರ ರುಚಿ ಮತ್ತು ಸುವಾಸನೆಯು ನಮಗೆ ತುಂಬಾ ಇಷ್ಟವಾಗುವಂತೆ ಮಾಡುತ್ತದೆ. ಅದರಲ್ಲೂ ರಾತ್ರಿ ವೇಳೆ ಕೋಳಿ ಖಾದ್ಯಗಳನ್ನು ತಿನ್ನಲು ಹೊರಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೆಚ್ಚಿನ ರೆಸ್ಟೊರೆಂಟ್ಗಳು ಚಿಕನ್ ಅನ್ನು ಫ್ರಿಜ್ನಲ್ಲಿಟ್ಟು ಮರುದಿನದ ಬಳಕೆಗಾಗಿ ಉಪಯೋಗಿಸುತ್ತಾರೆ. ಇದು ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಅಂತ ನಿಮಗೆ ತಿಳಿದಿದ್ಯಾ?
ಆಹಾರದ ಗುಣಮಟ್ಟದ ನಿಯಮಗಳ ಪ್ರಕಾರ, ಈ ರೀತಿ ಬೇಯಿಸಿದ ಚಿಕನ್ ಅನ್ನು ಫ್ರಿಜ್ನಲ್ಲಿ ಸಂಗ್ರಹಿಸಿ ನಂತರ ಅದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾವಿನ ಅಪಾಯವೂ ಇದೆ ಎಂದು ಆರೋಗ್ಯ ಆರೋಗ್ಯ ತಜ್ಞರು ಹೇಳುತ್ತಾರೆ. ಆದ್ದರಿಂದ, ನೀವು ತಿನ್ನುವ ಕೋಳಿ ಮಾಂಸ ಉತ್ತಮವಾಗಿದೆಯೇ ಅಥವಾ ಹಾಳಾಗಿದೆಯೇ ಎಂದು ತಿಳಿಯಲು ಕೆಲವು ಮಾರ್ಗಗಳಿವೆ. ಅದರ ಬಗ್ಗೆ ತಿಳಿದುಕೊಳ್ಳಿ.