ಸೌಂಡ್ ಸಿಸ್ಟಂ, ಡಿಜೆ ಸೌಂಡ್ ನಂತಹ ಕರ್ಕಶ ಶಬ್ದ ಮಾರಕವಾಗಿ ಬೀರುತ್ತಾ ಇದೆ. ಬಿಹಾರದ ಸೀತಾಮರ್ಹಿಯಲ್ಲಿ ವೇದಿಕೆಯಲ್ಲಿ ಡಿಜೆ ಜೋರಾಗಿ ಕೇಳಿದ ಕಾರಣ ಮದು ಮಗನಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವರ ಅತೀ ಶಬ್ದ ಕಿರಿಕಿರಿಯಾಗ್ತಿದೆ ಎಂದು ಹೇಳಿದ್ದ. ಆದ್ರೂ ಡಿಜೆ ಧ್ವನಿ ಕಡಿಮೆ ಮಾಡಲಿಲ್ಲ. ಅದಾದ ನಂತರ ಮದುಮಗ ತೀರಿದ್ದಾನೆ. ಹೀಗೆ ಜೋರಾಗಿ ವಾಲ್ಯೂಮ್ ಇಟ್ಕೊಂಡ್ರೆ ಕೇವಲ ಕಿವಿಗೆ ಮಾತ್ರ ಸಮಸ್ಯೆ ಅಲ್ಲದೇ ಮೈಂಡ್ ಮತ್ತು ಹೃದಯಕ್ಕೂ ಹಾನಿ ಉಂಟಾಗುತ್ತದೆ.