ಆದರೆ ಇಷ್ಟೆಲ್ಲಾ ಸಹಾಯ ಮಾಡುವ ಅಲ್ಯೂಮಿನಿಯಂ ಫಾಯಿಲ್ ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದ್ಯಾ? ಹಾಗಂತ ನಿಮ್ಮ ಅಡುಗೆ ಮನೆಯಲ್ಲಿರುವ ಎಲ್ಲಾ ಅಲ್ಯೂಮಿನಿಯಂ ಫಾಯಿಲ್ ಹೊರಗೆ ಹಾಕಿ ಎಂದು ಅರ್ಥವಲ್ಲ. ಅವುಗಳನ್ನು ಬಳಸುವಾಗ ಕೆಲವು ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ತಿಳಿಸುತ್ತಾರೆ. ಅಷ್ಟಕ್ಕೂ ಅವು ಏನು? ಅಲ್ಯೂಮಿನಿಯಂ ಫಾಯಿಲ್ ಬಳಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶಗಳ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.
ಅಡುಗೆ ಮಾಡುವಾಗ ಅಲ್ಯೂಮಿನಿಯಂ ಫಾಯಿಲ್ ಬಳಸುವುದು ಸುರಕ್ಷಿತವೇ? ಕೆಲವರು ಕೇಕ್ ಅನ್ನು ಬೇಯಿಸುವಾಗ ಅಥವಾ ಕೆಲವು ತರಕಾರಿಗಳನ್ನು ಹುರಿಯುವಾಗ ಅಲ್ಯೂಮಿನಿಯಂ ಫಾಯಿಲ್ ಅನ್ನು ಸುತ್ತಿರುತ್ತಾರೆ. ಆದರೆ ಹೀಗೆ ಮಾಡಬಹುದಾ? ಅಡುಗೆ ಮಾಡುವ ಸಮಯದಲ್ಲಿ ಅಲ್ಯೂಮಿನಿಯಂ ಫಾಯಿಲ್ ಅನ್ನು ಆಹಾರದಿಂದ ತೆಗೆದುಹಾಕಬಹುದು. ಇದು ಸುರಕ್ಷಿತ ಕೂಡ. ಆದರೆ ಈ ಬಗ್ಗೆ ಮತ್ತಷ್ಟು ಗೊಂದಲವಿದ್ದರೆ ಈ ಕೆಳಗೆ ನೀಡಿರುವ ಮತ್ತಷ್ಟು ವಿವರ ಓದಿ.
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ಆಹಾರ ಮತ್ತು ನೀರಿನಲ್ಲಿರುವ ಅಲ್ಯೂಮಿನಿಯಂ ಜೀರ್ಣಾಂಗ ಮತ್ತು ರಕ್ತಪ್ರವಾಹದ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಆದರೆ ಜರ್ನಲ್ ಆಫ್ ಎಲೆಕ್ಟ್ರೋಕೆಮಿಕಲ್ ಸೈನ್ಸ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಹೆಚ್ಚಿನ ತಾಪಮಾನದಲ್ಲಿ ಅಲ್ಯೂಮಿನಿಯಂ ಫಾಯಿಲ್ನಲ್ಲಿ ಬೇಯಿಸಿದ ಆಮ್ಲೀಯ, ಉಪ್ಪು ಆಹಾರಗಳು ಹೆಚ್ಚಿನ ಮಟ್ಟದ ಖನಿಜ (ಅಲ್ಯೂಮಿನಿಯಂ) ಸೋರಿಕೆಗೆ ಕಾರಣವಾಗುತ್ತವೆ ಎಂದು ತಿಳಿಸಿದೆ. ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ನಿಜಕ್ಕೂ ಅಡುಗೆಮನೆಯಲ್ಲಿ ಅಲ್ಯೂಮಿನಿಯಂ ಫಾಯಿಲ್ ಬಳಸುವಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳೇನು ತಿಳಿದುಕೊಳ್ಳೋಣ ಬನ್ನಿ.
ಬೇಕಿಂಗ್ಗೆ ಬಳಸಬೇಡಿ: ಬೇಕಿಂಗ್ ಪದಾರ್ಥ ಬೇಯಿಸುವಾಗ ಅನೇಕ ಮಂದಿ ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸುತ್ತಾರೆ. ಆದರೆ ಇದು ಕೆಟ್ಟ ವಿಚಾರ, ಅಲ್ಯೂಮಿನಿಯಂ ಶಾಖದ ಉತ್ತಮ ವಾಹಕವಾಗಿದೆ ಎಂದು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ. ಆದ್ದರಿಂದ ಅಲ್ಯೂಮಿನಿಯಂ ಫಾಯಿಲ್ನೊಂದಿಗೆ ನೇರ ಸಂಪರ್ಕದಲ್ಲಿರುವ ಹಿಟ್ಟಿನ ಪದಾರ್ಥಗಳು ಬೇಗ ಹೆಚ್ಚಿನ ಶಾಖವನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಕುಕೀಗಳ ಕೆಲವು ಭಾಗಗಳು, ಕೇಕ್ಗಳು ಸುಟ್ಟುಹೋಗಬಹುದು.
ಕೊಳೆಯದಂತೆ ಆಹಾರಗಳನ್ನು ಸಂರಕ್ಷಿಸಿ: ಆಹಾರ ಫ್ರೆಶ್ ಆಗಿಡಲು ಅಲ್ಯೂಮಿನಿಯಂ ಫಾಯಿಲ್ ಉತ್ತಮವಾಗಿದೆ. ಆಹಾರಗಳನ್ನು ಸಂಸ್ಕರಿಸಿದಲ್ಲಿ, ಒಣಗಿಸಿ, ಸಂರಕ್ಷಿಸಿದೇ ಇದ್ದಲ್ಲಿ ಅವುಗಳು ಸಾಮಾನ್ಯವಾಗಿ ಹಾಳಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅಲ್ಯೂಮಿನಿಯಂ ಫಾಯಿಲ್ಬಳಸುವುದರಿಂದ ಆಹಾರ ಹಾಳಾಗದಂತೆ, ಒಣಗದಂತೆ ಸಂಗ್ರಹಿಸಲು ಸಹಾಯಕವಾಗಿದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)