ಒಂದು ಕಾಲದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಮಾತ್ರ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತಿತ್ತು ಮತ್ತು ಅನೇಕ ಮಂದಿ ಇದರಿಂದ ಪ್ರಾಣ ಕಳೆದುಕೊಳ್ಳುತ್ತಿದ್ದರು. ಈ ರೀತಿ ಸಾಯುವವರಲ್ಲಿ ಹೆಚ್ಚಾಗಿ ಅಪಧಮನಿಗಳು ನಿರ್ಬಂಧಗಗೊಂಡಿರುತ್ತಿತ್ತು. ಆದರೆ ಎದೆಯ ಬಳಿ ಸಂಭವಿಸುವ ಪ್ರತಿ ನೋವು ಹೃದಯಾಘಾತ ಆಗಿರುವುದಿಲ್ಲ. ಎದೆ, ದವಡೆ ಮತ್ತು ಭುಜದ ಬಳಿ ನೋವು ಕಂಡುಬಂದರೆ ಅದನ್ನು ಹೃದಯಾಘಾತ ಎಂದು ಗುರುತಿಸಬೇಕು.
"ಲಸಿಕೆಗಳು ಹೃದಯಾಘಾತದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತೋರಿಸಲು ಯಾವುದೇ ಆಧಾರಗಳಿಲ್ಲ" ಎಂದು ಡಾ.ಬಲ್ಬೀರ್ ಹೇಳಿದ್ದಾರೆ. "ಕೋವಿಡ್ ಸೋಂಕಿನಿಂದ ಹೃದಯಾಘಾತವಾಗುವ ಸಾಧ್ಯತೆಯಿದೆ. ಆದರೆ ಲಸಿಕೆಗಳಲ್ಲ. ಕೊರೊನಾ ಸೋಂಕಿನ ಚಿಕಿತ್ಸೆಗೆ ಬಳಸುವ ಸ್ಟೀರಾಯ್ಡ್ಗಳು ಹೃದ್ರೋಗಕ್ಕೆ ಕಾರಣವಾಗಬಹುದು. ಒಂದು ವರ್ಷದ ಚಿಕಿತ್ಸೆಯ ನಂತರ ಇದನ್ನು ಪಡೆಯುವ ಅವಕಾಶವಿದೆ" ಎಂದು ತಿಳಿಸಿದ್ದಾರೆ.
ತೀವ್ರವಾದ ಕೋವಿಡ್ನಿಂದ ಸೈಟೊಕಿನ್ ಸ್ಟೋರ್ಮ್ (cytokine storm) ಎಂಬುವುದು ಹೃದಯಾಘಾತವನ್ನು ಉಂಟು ಮಾಡುತ್ತದೆ., ಇದು ಟಾಕಿಕಾರ್ಡಿಯಾ (ಕ್ಷಿಪ್ರ ಹೃದಯ ಬಡಿತ), ಆರ್ಹೆತ್ಮಿಯಾ (ಹೃದಯ ಬಡಿತ) ಕಾರಣವಾಗುತ್ತದೆ. ಇದರಿಂದ ಯಾವುದೇ ಪರಿಣಾಮವಾಗುವುದಿಲ್ಲ. ಹಾಗಾಗಿ ಬಹಳ ಮಂದಿ ಚೇರಿಸಿಕೊಳ್ಳಬಹುದು ಎಂದು ಫೋರ್ಟಿಸ್ ಆಸ್ಪತ್ರೆ ಮುಲುಂಡ್ ಮತ್ತು ಕಲ್ಯಾಣ್ನ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಕೀರ್ತಿ ಸಬ್ನಿಸ್ ಹೇಳಿದ್ದಾರೆ.
ತೀವ್ರವಾದ ಕೋವಿಡ್ ಡಿಲೇಟೆಡ್ ಕಾರ್ಡಿಯೊಮಿಯೋಪತಿಗೆ ಕಾರಣವಾಗುತ್ತದೆ. ಇದು ಒಂದು ರೀತಿಯ ಸ್ಥಿತಿಯಾಗಿದೆ. ಇದು ಸಂಭವಿಸಿದಾಗ, ಹೃದಯ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದು ಒಮ್ಮೆ ಸಂಭವಿಸಿದರೆ, ಚೇತರಿಸಿಕೊಳ್ಳಲು ಯಾವುದೇ ಅವಕಾಶವಿರುವುದಿಲ್ಲ. ಆದರೆ, ಇದು ರೋಗಲಕ್ಷಣಗಳಿಲ್ಲದೇ ಸಂಭವಿಸುವುದಿಲ್ಲ. ರೋಗಲಕ್ಷಣಗಳು ಆರಂಭದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಡಾ. ಕೀರ್ತಿ ಸಬ್ನಿಸ್ ವಿವರಿಸಿದ್ದಾರೆ.