Irregular Periods Problem: ಪ್ರತಿದಿನ ಈ ಯೋಗಾಸನ ಮಾಡಿ; ಅನಿಯಮಿತ ಪಿರಿಯಡ್ಸ್​ಗೆ ಗುಡ್ ಬೈ ಹೇಳಿ!​

ಮಹಿಳೆಯರಲ್ಲಿ ದೈಹಿಕ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಅದಾಗ್ಯೂ ಹಾರ್ಮೋನುಗಳ ಏರಿಳಿತದಿಂದಾಗಿ ಮಹಿಳೆಯರ ಆರೋಗ್ಯದಲ್ಲಿ ಏರುಪೇರು ಹಾಗೂ ಕೆಲವು ಸಮಸ್ಯೆಗಳು ಆಗುತ್ತಲೇ ಇರುತ್ತವೆ. ಅದರಲ್ಲಿ ಅನಿಯಮಿತ ಮುಟ್ಟು ಸಹ ಒಂದು. ಅನಿಯಮಿತ ಪಿರಿಯಡ್ಸ್ ಸಮಸ್ಯೆಯು ಮಹಿಳೆಯರಲ್ಲಿ ಹಲವು ಕಾಯಿಲೆಗೆ ಕಾರಣವಾಗುತ್ತದೆ.

First published:

  • 18

    Irregular Periods Problem: ಪ್ರತಿದಿನ ಈ ಯೋಗಾಸನ ಮಾಡಿ; ಅನಿಯಮಿತ ಪಿರಿಯಡ್ಸ್​ಗೆ ಗುಡ್ ಬೈ ಹೇಳಿ!​

    ಅನಿಯಮಿತ ಪಿರಿಯಡ್ಸ್ ಎಂದರೆ ಪ್ರತೀ ತಿಂಗಳು ಸರಿಯಾದ ಅವಧಿಗೆ ಮುಟ್ಟಾಗುವ ದಿನಾಂಕವು ಆಗಾಗ್ಗೆ ಬದಲಾಗುತ್ತಲೇ ಇರುತ್ತದೆ. ವಾರ ಮತ್ತು ಹದಿನೈದು ದಿನಗಳವರೆಗೆ ಮುಟ್ಟಾಗುವ ದಿನಾಂಕದಲ್ಲಿ ಏರಿಳಿತವಾಗುತ್ತದೆ. ಇದು ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆ ಮತ್ತು ಏರಿಳಿತಕ್ಕೆ ಕಾರಣವಾಗುತ್ತದೆ.

    MORE
    GALLERIES

  • 28

    Irregular Periods Problem: ಪ್ರತಿದಿನ ಈ ಯೋಗಾಸನ ಮಾಡಿ; ಅನಿಯಮಿತ ಪಿರಿಯಡ್ಸ್​ಗೆ ಗುಡ್ ಬೈ ಹೇಳಿ!​

    ಅನಿಯಮಿತ ಮುಟ್ಟು ಅಥವಾ ಪಿರಿಯಡ್ಸ್ ಪ್ರತೀ ತಿಂಗಳು ಆಗದೇ ಹೋದರೆ ಅದು ಬೊಜ್ಜು, ಬೆನ್ನು ನೋವು ಸೇರಿದಂತೆ ಹಲವು ಆರೋಗ್ಯ ತೊಂದರೆ ಉಂಟು ಮಾಡುತ್ತದೆ. ಅನಿಯಮಿತ ಪಿರಿಯಡ್ಸ್ ಸಮಸ್ಯೆಯು ಕೆಲವೊಮ್ಮೆ ಅಧಿಕ ರಕ್ತದ ಹರಿವು ಅಥವಾ ಕಡಿಮೆ ರಕ್ತದ ಹರಿವಿಗೆ ಕಾರಣವಾಗುತ್ತದೆ.

    MORE
    GALLERIES

  • 38

    Irregular Periods Problem: ಪ್ರತಿದಿನ ಈ ಯೋಗಾಸನ ಮಾಡಿ; ಅನಿಯಮಿತ ಪಿರಿಯಡ್ಸ್​ಗೆ ಗುಡ್ ಬೈ ಹೇಳಿ!​

    28 ದಿನಗಳ ಈ ಋತುಚಕ್ರದಲ್ಲಿ 38 ದಿನಗಳು ಕಳೆದರೂ ಸಹ ಪಿರಿಯಡ್ಸ್ ಆಗದೇ ಹೋದರೆ, ಇದನ್ನು ಪಿರಿಯೆಡ್ ಸೈಕಲ್ ಅನಿಯಮಿತವಾಗಿದೆ ಎಂದು ಕರೆಯಲಾಗುತ್ತದೆ. ಇದಕ್ಕೆ ನೀವು ಸೂಕ್ತ ವೈದ್ಯಕೀಯ ಪರೀಕ್ಷೆಯ ಜೊತೆಗೆ ಕೆಲವು ಯೋಗಾಭ್ಯಾಸ ಮಾಡುವುದು ನಿಮಗೆ ಸುಲಭ ಮತ್ತು ಉತ್ತಮ ಪರಿಹಾರ ನೀಡುತ್ತದೆ.

    MORE
    GALLERIES

  • 48

    Irregular Periods Problem: ಪ್ರತಿದಿನ ಈ ಯೋಗಾಸನ ಮಾಡಿ; ಅನಿಯಮಿತ ಪಿರಿಯಡ್ಸ್​ಗೆ ಗುಡ್ ಬೈ ಹೇಳಿ!​

    ಯೋಗದ ಮೂಲಕ ನೀವು ಅನಿಯಮಿತ ಪಿರಿಯಡ್ಸ್ ಸಮಸ್ಯೆ ಹೋಗಲಾಡಿಸಬಹುದು. ಯೋಗವು ರಕ್ತದ ಹರಿವು, ಬೆನ್ನು ನೋವು ಸೇರಿದಂತೆ ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ. ಇದು ಬೆನ್ನು ಮತ್ತು ಹೊಟ್ಟೆ ನೋವು ಕ್ರಮೇಣ ಕಡಿಮೆ ಮಾಡುತ್ತದೆ. ಪಿರಿಯಡ್ಸ್ ಸರಿಯಾಗಲು ಸಹಕಾರಿ ಆಗಿದೆ.

    MORE
    GALLERIES

  • 58

    Irregular Periods Problem: ಪ್ರತಿದಿನ ಈ ಯೋಗಾಸನ ಮಾಡಿ; ಅನಿಯಮಿತ ಪಿರಿಯಡ್ಸ್​ಗೆ ಗುಡ್ ಬೈ ಹೇಳಿ!​

    ವಜ್ರಾಸನ ಮಾಡುವುದು ಅನಿಯಮಿತ ಪಿರಿಯಡ್ಸ್ ಸಮಸ್ಯೆ ಕಡಿಮೆ ಮಾಡುತ್ತದೆ. ಮೊಣಕಾಲುಗಳನ್ನು ಬಗ್ಗಿಸುವ ಮೂಲಕ ಪಾದಗಳ ಮೇಲೆ ಭಾರ ಹಾಕಿ ಕೂರುವುದು. ವಜ್ರಾಸನದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದರ ಜೊತೆಗೆ ಅನುಲೋಮ ವಿಲೋಮ ಮತ್ತು ಪ್ರಾಣಾಯಾಮ ಮಾಡಿ.

    MORE
    GALLERIES

  • 68

    Irregular Periods Problem: ಪ್ರತಿದಿನ ಈ ಯೋಗಾಸನ ಮಾಡಿ; ಅನಿಯಮಿತ ಪಿರಿಯಡ್ಸ್​ಗೆ ಗುಡ್ ಬೈ ಹೇಳಿ!​

    ವಜ್ರಾಸನ ಮಾಡಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಡಿಮೆ ಆಗುತ್ತವೆ. ಇದು ಸೊಂಟ ಮತ್ತು ನೋವನ್ನು ನಿವಾರಿಸುತ್ತದೆ. ಶ್ರೋಣಿಯ ಪ್ರದೇಶವು ಬಲಿಷ್ಠವಾಗುತ್ತದೆ. ಪಿರಿಯಡ್ಸ್ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಇದು ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆಯನ್ನು ದೂರ ಮಾಡುತ್ತದೆ.

    MORE
    GALLERIES

  • 78

    Irregular Periods Problem: ಪ್ರತಿದಿನ ಈ ಯೋಗಾಸನ ಮಾಡಿ; ಅನಿಯಮಿತ ಪಿರಿಯಡ್ಸ್​ಗೆ ಗುಡ್ ಬೈ ಹೇಳಿ!​

    ಭುಜಂಗಾಸನ ಮಾಡುವುದು ಅನಿಯಮಿತ ಪಿರಿಯಡ್ಸ್ ಸಮಸ್ಯೆ ದೂರ ಮಾಡುತ್ತದೆ. ಇದು ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಮುಟ್ಟಿನ ಸಮಯದ ನೋವು ನಿವಾರಿಸುತ್ತದೆ. ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ. ಕುತ್ತಿಗೆ ಮತ್ತು ಭುಜದ ನೋವು, ಸ್ನಾಯುಗಳ ಸೆಳೆತ ಕಡಿಮೆಯಾಗುತ್ತದೆ.

    MORE
    GALLERIES

  • 88

    Irregular Periods Problem: ಪ್ರತಿದಿನ ಈ ಯೋಗಾಸನ ಮಾಡಿ; ಅನಿಯಮಿತ ಪಿರಿಯಡ್ಸ್​ಗೆ ಗುಡ್ ಬೈ ಹೇಳಿ!​

    ಅನಿಯಮಿತ ಪಿರಿಯಡ್ಸ್ ಸಮಸ್ಯೆ ತೊಡೆದು ಹಾಕಲು ಬಾಲಾಸನ ಸಹಾಯ ಮಾಡುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿವಾರಿಸುತ್ತದೆ. ಬ್ಲೋಟಿಂಗ್ ಸಮಸ್ಯೆ ನಿವಾರಿಸುತ್ತದೆ. ಗರ್ಭಿಣಿಯರು ಈ ಆಸನವನ್ನು ಮಾಡಬಾರದು. ಈ ಭಂಗಿಯು ಕಣಕಾಲುಗಳು, ಸೊಂಟ ಮತ್ತು ತೊಡೆಯ ಬಿಗಿತ ನಿವಾರಿಸುತ್ತದೆ. ದೇಹದಲ್ಲಿ ರಕ್ತದ ಹರಿವು ಉತ್ತಮವಾಗುತ್ತದೆ.

    MORE
    GALLERIES