ಸ್ಕ್ರಿಬ್ಲಿಂಗ್ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸ್ಕ್ರಿಬ್ಲಿಂಗ್ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಅಂತರರಾಷ್ಟ್ರೀಯ ಸ್ಕ್ರಿಬ್ಲಿಂಗ್ ದಿನವನ್ನು ಸಹ ಆಚರಿಸಲಾಗುತ್ತದೆ. ಮಕ್ಕಳಿಗೆ ದಯೆ, ಕಲೆ ಹಾಗೂ ಉತ್ತಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಸ್ಕ್ರಿಬಲ್ ಅಗತ್ಯವಾಗಿದೆ. ಇದು ಮಕ್ಕಳಲ್ಲಿ ಸೃಜನಶೀಲತೆ ಮತ್ತು ಉತ್ತಮ ಗುಣಗಳನ್ನು ಉತ್ತೇಜಿಸುತ್ತದೆ.
ಸ್ಕ್ರಿಬ್ಲಿಂಗ್ ನಿಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮನಸ್ಸಿಗೆ ಬಂದದ್ದನ್ನು ಗೀಚುವ ಅಭ್ಯಾಸವು ವ್ಯಕ್ತಿಯ ಅನುಭವ, ಮನಸ್ಥಿತಿ, ಆಲೋಚನೆಯ ಬಗ್ಗೆ ತಿಳಿಸುತ್ತದೆ ಅಂತಾರೆ ತಜ್ಞರು. ಸಂತೋಷ, ಆತಂಕ ಅಥವಾ ಆನಂದ ಹೀಗೆ ಎಲ್ಲವನ್ನೂ ವ್ಯಕ್ತಪಡಿಸುತ್ತವೆ. ಈ ಸ್ಕ್ರಿಬ್ಲಿಂಗ್ ಅರ್ಥಹೀನವಾಗಿಯೂ ಕಾಣಿಸಬಹುದು. ಆದರೆ ಮನಶ್ಶಾಸ್ತ್ರಜ್ಞರು ಡೂಡಲ್ ಅಥವಾ ಸ್ಕ್ರಿಬಲ್ ವ್ಯಕ್ತಿಯ ಮನಸ್ಸು ಮತ್ತು ಸ್ಥಿತಿಯನ್ನು ತಿಳಿಸುತ್ತದೆ ಅಂತಾರೆ.