ಬಾಡಿಗೆ ಮನೆಯಲ್ಲಿ ನಾವು ಅಂದುಕೊಂಡಿದ್ದನ್ನೆಲ್ಲಾ ಸಾಮಾನ್ಯವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಸ್ಟಿಕ್ಕರ್ ಅಂಡಿಸಬಾರದು, ಯಾವುದೇ ಮೊಳೆಗಳನ್ನು ಹೊಡೆಯಬಾರದು ಹೀಗೆ ಹಲವು ರೀತಿಯ ಷರತ್ತುಗಳನ್ನು ವಿಧಿಸಿ ಮಾಲೀಕರು ತಮ್ಮ ಮನೆಯನ್ನು ಬಾಡಿಗೆಗೆ ಕೊಡುತ್ತಾರೆ. ಹಾಗಾಗಿ ನಮ್ಮ ಮನೆಯನ್ನು ನಮಗೆ ಬೇಕಾದಂತೆ ಅಲಂಕರಿಸಲು ಕಷ್ಟವಾಗುತ್ತದೆ. ಆದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹಾನಿಯಾಗದಂತೆ ಗೋಡೆಗಳನ್ನು ಕೆಲವು ಸಿಂಪಲ್ ಐಡಿಯಾಗಳ ಮೂಲಕ ಅಲಂಕರಿಸಬಹುದು. ಅದು ಹೇಗೆ ಅಂತ ತಿಳಿದುಕೊಳ್ಳೋಣ ಬನ್ನಿ.
ವಾಲ್ ಸ್ಟಿಕ್ಕರ್ಗಳನ್ನು ಬಳಸುವುದು: ವಾಲ್ ಸ್ಟಿಕ್ಕರ್ಗಳು ಎಲ್ಲರಿಗೂ ಇಷ್ಟವಾಗುತ್ತದೆ. ಅದಲ್ಲಿಯೂ ಹದಿಹರಿಯದ ಹುಡುಗಿಯರಿಗೆ ಬಹಳ ಇಷ್ಟವಾಗುತ್ತದೆ. ಈ ಮೂಲಕ ನಿಮ್ಮ ಗೋಡೆಗಳನ್ನು ಸುಂದರವಾಗಿ ಇಡಬಹುದು. ವಿಂಟೇಜ್ ಅನುಭವವನ್ನು ನೀಡಲು ನಿಮ್ಮ ಮೆಚ್ಚಿನ ಸ್ಟಿಕ್ಕರ್ಗಳನ್ನು ಆಯ್ಕೆಮಾಡಿ ಮತ್ತು ಅವುಗಳನ್ನು ಗೋಡೆಯ ಮೇಲೆ ಅಂಟಿಸಿ. ಯಾವುದೇ ಥೀಮ್ಗೆ ಹೊಂದಿಕೆಯಾಗುವಂತೆ ನಿಮ್ಮ ಮನೆ ಮತ್ತು ಗೋಡೆಯನ್ನು ಸ್ಟಿಕ್ಕರ್ಗಳಿಂದ ಅಲಂಕರಿಸಬಹುದು.
ಗೋಡೆಯ ಮೇಲೆ ಕಲಾತ್ಮಕ ಚಿತ್ರಗಳನ್ನು ನೇತುಹಾಕುವುದು : ಕಲಾತ್ಮಕ ಚಿತ್ರಗಳು, ನಿಮ್ಮ ಮಕ್ಕಳ ಕೈ ಬಣ್ಣ, ಪೆನ್ಸಿಲ್ ಶೇಡಿಂಗ್ ಇತ್ಯಾದಿಗಳು ನಿಮ್ಮ ಗೋಡೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ನಮ್ಮ ಹೃದಯವನ್ನು ಶಾಂತಗೊಳಿಸುತ್ತವೆ. ನಿಮ್ಮ ಮನೆಯ ಮಾಲೀಕರು ಮೊಳೆ ಹೊಡೆಯುವುದು ಬೇಡ ಎಂದು ಹೇಳಿದರೆ, ಉಗುರಿಗೆ ಹಾಕುವ ನೈಲ್ ಪಾಲಿಷ್ನಿಂದ ಹಲವು ರೀತಿಯ ವಿನ್ಯಾಸಗಳನ್ನು ಗೋಡೆ ಮೇಲೆ ಬರೆಯುವ ಮೂಲಕ ಸುಂದಗೊಳಿಸಬಹುದು.
ಹಳ್ಳಿಗಾಡಿನ ನೋಟವನ್ನು ರಚಿಸಲು ಬುಟ್ಟಿಗಳು ಇತ್ಯಾದಿಗಳನ್ನು ಬಳಸುವುದು : ನೇಯ್ದ ಬುಟ್ಟಿಗಳು ಅಥವಾ ತಟ್ಟೆಗಳು ಇತ್ಯಾದಿಗಳು ಮನೆಯ ಅಲಂಕಾರಕ್ಕೆ ಸೂಕ್ತವಾದ ವಸ್ತುಗಳು. ವಿವಿಧ ಗಾತ್ರದ ಬುಟ್ಟಿಗಳನ್ನು ಬಳಸುವುದು ಅದ್ಭುತವಾಗಿ ಕಾಣಿಸಬಹುದು. ನೀವು ಪ್ರಾಚೀನ ವಸ್ತುಗಳ ಪ್ರಿಯರಾಗಿದ್ದರೆ, ಒಣಗಿದ ಹೂವುಗಳನ್ನು ಹೊಂದಿರುವ ಹೂವಿನ ಮಡಕೆ ಮನೆ ಅಲಂಕಾರಕ್ಕೆ ಸೂಕ್ತವಾಗಿದೆ.
ಗಿಡಗಳ ಬಳಕೆ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಮನೆಗಳನ್ನು ಅಲಂಕರಿಸಲು ಸಸ್ಯಗಳನ್ನು ಬಳಸುತ್ತಾರೆ. ಇದು ಸೌಂದರ್ಯವನ್ನು ಸೇರಿಸುತ್ತದೆ ಮತ್ತು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಮನೆಯಲ್ಲಿ ಹಸಿರು ತುಳಸಿ ಗಿಡಗಳಿದ್ದರೆ ಕಣ್ಣಿಗೆ ತಂಪು. ಅನೇಕ ಒಳಾಂಗಣ ಪ್ರಭೇದಗಳನ್ನು ಈಗ ಮನೆಯಲ್ಲಿ ಇರಿಸಿಕೊಳ್ಳಲು ಮಾರಾಟ ಮಾಡಲಾಗುತ್ತದೆ. ಅವುಗಳನ್ನು ಮೇಜಿನ ಮೇಲೆ ಜೋಡಿಸಬಹುದು ಅಥವಾ ನೇತು ಹಾಕಬಹುದು. ನಿಮ್ಮ ಗೋಡೆಗೆ ಅನನ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ.