Christmas 2022: ಕ್ರಿಸ್ಮಸ್ಗೆ ಈ ದೇಶಗಳಲ್ಲಿ ಫುಲ್ ಡಿಫರೆಂಟ್ ತಿಂಡಿಗಳನ್ನು ಮಾಡ್ತಾರೆ!
Food Traditions In Different Countries: ವಿಶ್ವದಾದ್ಯಂತ ಜನರು ಬಹಳ ಸಂಭ್ರಮದಿಂದ ಹಾಗೂ ಕಾತುರದಿಂದ ಕಾಯುತ್ತಿರುವ ಹಬ್ಬ ಕ್ರಿಸ್ಮಸ್. ಈಗಾಗಲೇ ಹಬ್ಬದ ಆಚರಣೆಗೆ ಸಿದ್ಧತೆ ಆರಂಭವಾಗಿದೆ. ಆದರೆ ಈ ಹಬ್ಬದ ಸಮಯದಲ್ಲಿ ಬೇರೆ ಬೇರೆ ದೇಶಗಳಲ್ಲಿ ಆಸಕ್ತಿದಾಯಕ ಆಚರಣೆಗಳಿದ್ದು, ವಿಭಿನ್ನ ಆಹಾರವನ್ನು ತಯಾರಿಸಲಾಗುತ್ತದೆ. ಯಾವ ದೇಶದಲ್ಲಿ ಯಾವ ಆಹಾರವನ್ನು ಕ್ರಿಸ್ಮಸ್ ಸಮಯದಲ್ಲಿ ತಯಾರಿಸಲಾಗುತ್ತದೆ ಎಂಬುದು ಇಲ್ಲಿದೆ.
ಕೆನಡಾದ ಶುಗರ್ ಕುಕೀ ಕೆನಡಾದಲ್ಲಿ ಕ್ರಿಸ್ಮಸ್ ಹಬ್ಬವನ್ನು ಶುಗರ್ ಕುಕೀ ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ. ಇಲ್ಲಿ ಪ್ರತಿಯೊಂದು ಮನೆಯಲ್ಲಿ ಕುಟುಂಬದ ಸದಸ್ಯರು ಸೇರಿ ಇದನ್ನು ತಯಾರಿಸಿ, ಸಂತಸದಿಂದ ಹಬ್ಬವನ್ನು ಆಚರಿಸುತ್ತಾರೆ.
2/ 9
ಐಸ್ಲ್ಯಾಂಡ್ ಕುರಿ ಕಾಲು ಐಸ್ಲ್ಯಾಂಡ್ ದೇಶದಲ್ಲಿ ಕ್ರಿಸ್ಮಸ್ ಹಬ್ಬದ ಸ್ಪೆಷಲ್ ಈ ಕುರಿಮರಿ ಕಾಲು. ಇದನ್ನು ಲೀಫ್ ಬ್ರೆಡ್ ಎಂದು ಕರೆಯಲಾಗುತ್ತದೆ. ಹಬ್ಬದ ದಿನ ಈ ಆಹಾರ ಇಲ್ಲದೇ ಇಲ್ಲಿ ಆಚರಣೆಯೇ ಆಗುವುದಿಲ್ಲ. ಕೆಲವೊಮ್ಮೆ ಹಬ್ಬದ ಕೆಲ ದಿನಗಳ ಮೊದಲೇ ಇದನ್ನು ಮಾಡುತ್ತಾರೆ.
3/ 9
ಜರ್ಮನಿಯಲ್ಲಿ ಸ್ಟೋಲನ್ ಬ್ರೆಡ್ ಜರ್ಮನಿಯಲ್ಲಿ ಸ್ಟೋಲನ್ ಬ್ರೆಡ್ ಬಹಳ ಫೇಮಸ್. ಇದರಲ್ಲಿ ಡ್ರೈ ಫ್ರೂಟ್ಸ್ ಮತ್ತು ಮಾರ್ಜಿಪಾನ್ ಇರುತ್ತದೆ. ಇದು ಕ್ರಿಸ್ಮಸ್ ಹಬ್ಬದ ಸ್ಪೆಷಲ್ ಎನ್ನಬಹುದು. ಜರ್ಮನಿಯ ಪ್ರತಿ ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ದಿನ ಇದನ್ನು ತಯಾರಿಸಲಾಗುತ್ತದೆ.
4/ 9
ಆಸ್ಟ್ರೇಲಿಯಾದಲ್ಲಿ ಬಾರ್ಬಿಕ್ಯೂ ಆಸ್ಟ್ರೇಲಿಯಾದಲ್ಲಿ ಕ್ರಿಸ್ಮಸ್ ಹಬ್ಬವನ್ನು ಬಾರ್ಬಿಕ್ಯೂಗಳ ಜೊತೆ ಆಚರಣೆ ಮಾಡಲಾಗುತ್ತದೆ. ಇಲ್ಲಿ ಕೇಕ್ ತಯಾರಿಸುವುದಕ್ಕಿಂತ ಹೆಚ್ಚು ಬಾರ್ಬಿಕ್ಯೂ ಆಹಾರಗಳನ್ನು ಮಾಡಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
5/ 9
ರೈಸ್ ಪುಡ್ಡಿಂಗ್ –ಡೆನ್ಮಾರ್ಕ್ ಡೆನ್ಮಾರ್ಕ್ ದೇಶದಲ್ಲಿ ಸ್ವೀಟ್ ರೈಸ್ ಪುಡ್ಡಿಂಗ್ ಮಾಡಿ ಸಂಭ್ರಮಿಸಲಾಗುತ್ತದೆ. ಇದನ್ನು ಹಾಲು, ಅನ್ನ, ಬಾದಾಮಿ, ವೆನಿಲ್ಲಾ ಬಳಸಿ ಮಾಡಲಾಗುತ್ತದೆ. ಈ ರೈಸ್ ಪುಡ್ಡಿಂಗ್ ಮಾಡಿ ಸ್ನೇಹಿತರಿಗೆ ಹಂಚಿ ಇಲ್ಲಿ ಕ್ರಿಸ್ ಮಸ್ ಆಚರಣೆ ಮಾಡಲಾಗುತ್ತದೆ.
6/ 9
ಅಮೆರಿಕಾದ ಕ್ರ್ಯಾನ್ ಬೆರ್ರಿ ಸಾಸ್ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ದೇಶಗಳಲ್ಲಿ ಕ್ರಿಸ್ಮಸ್ ಕೂಡ ಒಂದು. ಇಲ್ಲಿ ಟರ್ಕಿ ಬ್ರೆಡ್ ಜೊತೆ ಕ್ರ್ಯಾನ್ ಬೆರ್ರಿ ಸಾಸ್ ಮಾಡುತ್ತಾರೆ. ಇಲ್ಲಿ ಕ್ರ್ಯಾನ್ ಬೆರ್ರಿ ಸಾಸ್ ಇಲ್ಲದೇ ಹಬ್ಬದ ಆಚರಣೆ ಆಗುವುದಿಲ್ಲ.
7/ 9
ಸ್ಪೇನ್ನ ನೌಗಾಟ್ ಸ್ಪೇನ್ ದೇಶದಲ್ಲಿ ಕ್ರಿಸ್ಮಸ್ ಹಬ್ಬವನ್ನು ನೌಗಾಟ್ ಮತ್ತು ಟರ್ರಾನ್ ಎಂಬ ಸ್ವಿಟ್ ತಯಾರಿಸಿ ಆಚರಿಸಲಾಗುತ್ತದೆ, ಇದನ್ನು ಜೇನುತುಪ್ಪ, ಸಕ್ಕರೆ, ಮೊಟ್ಟೆಯ ಬಿಳಿಭಾಗ ಮತ್ತು ಬಾದಾಮಿ ಬಳಸಿ ತಯಾರಿಸಲಾಗುತ್ತದೆ.
8/ 9
ಪೋಲ್ಯಾಂಡ್ ಬೋರ್ಚ್ಟ್ ಪೋಲ್ಯಾಂಡ್ನಲ್ಲಿ ಸಹ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇಲ್ಲಿ ಈ ಸಂಭ್ರಮದಂದು ಬೋರ್ಚ್ಟ್ ಅಂದರೆ ವಿಭಿನ್ನ ರೀತಿಯ ಬೀಟ್ರೂಟ್ ಸೂಪ್ ತಯಾರಿಸಲಾಗುತ್ತದೆ. ಇದನ್ನು ಸ್ಟಾರ್ಟರ್ ಆಗಿ ಸೇವನೆ ಮಾಡಲಾಗುತ್ತದೆ.
9/ 9
ಐರ್ಲ್ಯಾಂಡ್ ಸ್ಪಾಂಜ್ ಕೇಕ್ ಸ್ಪಾಂಜ್ ಕೇಕ್ ಮಾಡಿ ಸವಿಯುವ ಮೂಲಕ ಐರ್ಲ್ಯಾಂಡ್ನಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಕೇಕ್ ಅನ್ನು ಕ್ಯಾರವೇ ಬೀಜದಿಂದ ಮಾಡಲಾಗುತ್ತದೆ. ಇದನ್ನು ಸ್ನೇಹಿತರು ಹಾಗೂ ಕುಟುಂಬದವರಿಗೆ ಹಂಚಿ, ಹಬ್ಬವನ್ನು ಆರಂಭ ಮಾಡುತ್ತಾರೆ.