Muskmelon Recipes: ಬೇಸಿಗೆಯಲ್ಲಿ ಖರ್ಬೂಜ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ

ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿರಿಸಲು ನಿಂಬೆ ಪಾನಕ ಕುಡಿಯುವುದು ಮಾಮೂಲಿ. ಜೊತೆಗೆ ಬೇಸಿಗೆಯಲ್ಲಿ ಕಬ್ಬಿನ ಹಾಲು, ಎಳನೀರು, ಕಲ್ಲಂಗಡಿ ಹಾಗೂ ಖರ್ಬೂಜ ಸೇವಿಸಲಾಗುತ್ತದೆ. ನಿಮಗೆ ಕೇವಲ ಹಣ್ಣು ತಿನ್ನೋಕೆ ಬೇಜಾರಾದ್ರೆ ಅದರ ಜ್ಯೂಸ್ ಮಾಡಿ ಸವಿಯಬಹುದು. ದೇಹವನ್ನು ಹೈಡ್ರೇಟ್ ಮಾಡುವ ಖರ್ಬೂಜ ರೆಸಿಪಿ ಬಗ್ಗೆ ತಿಳಿಯೋಣ.

First published:

  • 18

    Muskmelon Recipes: ಬೇಸಿಗೆಯಲ್ಲಿ ಖರ್ಬೂಜ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ

    ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಖರ್ಬೂಜ ಹಣ್ಣು ಸಾಕಷ್ಟು ಲಭ್ಯವಿರುತ್ತದೆ. ಈ ಆರೋಗ್ಯಕರ ಹಣ್ಣನ್ನು ನೀವು ಹಾಗೆಯೇ ತಿನ್ನಬಹುದು. ಇಲ್ಲದಿದ್ದರೆ ಜ್ಯೂಸ್ ಮಾಡಿ ಕುಡಿಯಬಹುದು. ಖರ್ಬೂಜ್ ಹಣ್ಣು ಬೇಸಿಗೆಯ ದಾಹ ತಣಿಸಲು ಉತ್ತಮ ಆಯ್ಕೆಯಾಗಿದೆ. ಇದರ ಜ್ಯೂಸ್ ದೇಹವನ್ನು ತಂಪಾಗಿಡುತ್ತದೆ.

    MORE
    GALLERIES

  • 28

    Muskmelon Recipes: ಬೇಸಿಗೆಯಲ್ಲಿ ಖರ್ಬೂಜ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ

    ಖರ್ಬೂಜ ಹಣ್ಣು ಶೇ. 90 ರಷ್ಟು ನೀರು ಹೊಂದಿದೆ. ಈ ಹಣ್ಣು ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಆಹಾರದಲ್ಲಿ ರಸಭರಿತವಾದ ಹಣ್ಣಾಗಿದೆ. ಇದು ಯಾವುದೇ ರೀತಿಯ ಸ್ಯಾಚುರೇಟೆಡ್ ಕೊಬ್ಬು ಹೊಂದಿಲ್ಲ. ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೇಹವನ್ನು ಹೈಡ್ರೇಟ್ ಮಾಡುತ್ತದೆ.

    MORE
    GALLERIES

  • 38

    Muskmelon Recipes: ಬೇಸಿಗೆಯಲ್ಲಿ ಖರ್ಬೂಜ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ

    100 ಗ್ರಾಂ ಖರ್ಬೂಜ ಹಣ್ಣು ಕ್ಯಾಲೋರಿಗಳು 34, ಸೋಡಿಯಂ 16 ಮಿಗ್ರಾಂ, ಪೊಟ್ಯಾಸಿಯಮ್ 267 ಮಿಗ್ರಾಂ, ಕಾರ್ಬೋಹೈಡ್ರೇಟ್ಗಳು 8 ಗ್ರಾಂ, ಪ್ರೋಟೀನ್ 0.8 ಗ್ರಾಂ, ಮೆಗ್ನೀಸಿಯಮ್ 3 ಪ್ರತಿಶತ, ವಿಟಮಿನ್ ಎ 67 ಪ್ರತಿಶತ, ವಿಟಮಿನ್ ಸಿ 61 ಪ್ರತಿಶತ ಹೊಂದಿದೆ.

    MORE
    GALLERIES

  • 48

    Muskmelon Recipes: ಬೇಸಿಗೆಯಲ್ಲಿ ಖರ್ಬೂಜ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ

    ಖರ್ಬೂಜ ಜ್ಯೂಸ್ ರೆಸಿಪಿ ನೋಡೋಣ. ಬೇಕಾಗುವ ಸಾಮಗ್ರಿಗಳು ಪುದೀನ ಎಲೆ, ಸೀತಾಫಲ ರಸ, ಒಂದು ಬಟ್ಟಲು ಖರ್ಬೂಜ, ನಿಂಬೆ ರಸ ಒಂದು ಟೀಚಮಚ, ಪುದೀನಾ 3 ರಿಂದ 4 ಎಲೆಗಳು, ಒಂದು ಪಿಂಚ್ ಕಪ್ಪು ಉಪ್ಪು, ಹುರಿದ ಜೀರಿಗೆ ಒಂದು ಚಿಟಿಕೆ, ಸಕ್ಕರೆ ಅರ್ಧ ಟೀಚಮಚ ಬೇಕು.

    MORE
    GALLERIES

  • 58

    Muskmelon Recipes: ಬೇಸಿಗೆಯಲ್ಲಿ ಖರ್ಬೂಜ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ

    ಮೊದಲು ಖರ್ಬೂಜ ಬೀಜ ತೆಗೆದು, ತಿರುಳನ್ನು ಬೇರ್ಪಡಿಸಿ ಬ್ಲೆಂಡರ್ ಗೆ ಹಾಕಿರಿ. ಅದಕ್ಕೆ ಪುದೀನ ಎಲೆ ಸೇರಿಸಿ. ಅದಕ್ಕೆ ಸಕ್ಕರೆ ಮತ್ತು ನಿಂಬೆ ರಸ ಮಿಶ್ರಣ ಮಾಡಿ. ಕಪ್ಪು ಉಪ್ಪು ಮತ್ತು ಹುರಿದ ಜೀರಿಗೆ ಸೇರಿಸಿ ಸವಿಯಿರಿ.

    MORE
    GALLERIES

  • 68

    Muskmelon Recipes: ಬೇಸಿಗೆಯಲ್ಲಿ ಖರ್ಬೂಜ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ

    ಸೀಬೆಹಣ್ಣು, ಸೇಬು ಮತ್ತು ದ್ರಾಕ್ಷಿ ರಸ ಹಾಗೂ ಖರ್ಬೂಜ ಜ್ಯೂಸ್​ ಮಾಡಿ. ಇದಕ್ಕಾಗಿ ಒಂದು ಬಟ್ಟಲು ಬೀಜ ತೆಗೆದು ಸಿಪ್ಪೆ ತೆಗೆದು ಕತ್ತರಿಸಿದ ಖರ್ಬೂಜ್ ಹೋಳುಗಳು, ಹಸಿರು ದ್ರಾಕ್ಷಿ 8 ರಿಂದ 10, ಸೇಬು ಅರ್ಧ ಬೌಲ್ ಬೇಕು. ಮೊದಲು ಸೇಬು ಮತ್ತು ದ್ರಾಕ್ಷಿಯನ್ನು ಮಿಶ್ರಣ ಮಾಡಿ. ಅದಕ್ಕೆ ಖರ್ಜೂಜ್ ಸೇರಿಸಿ ಬ್ಲೆಂಡರ್ ನಲ್ಲಿ ರುಬ್ಬಿರಿ. ನಂತರ ಲೋಟಕ್ಕೆ ಸುರಿದು ಕಪ್ಪು ಉಪ್ಪನ್ನು ಹಾಕಿ ಸವಿಯಿರಿ.

    MORE
    GALLERIES

  • 78

    Muskmelon Recipes: ಬೇಸಿಗೆಯಲ್ಲಿ ಖರ್ಬೂಜ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ

    ಖರ್ಬೂಜ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಹಲ್ಲುಗಳ ಮೇಲೆ ಖರ್ಬೂಜ ಉಜ್ಜುವುದು ಹಲ್ಲುನೋವು ನಿವಾರಿಸುತ್ತದೆ. ಇದರ ಸಿಪ್ಪೆಯನ್ನು ತೊಳೆದ ನಂತರ ಅದನ್ನು ನೀರಿನಲ್ಲಿ ಸ್ವಲ್ಪ ಸಮಯ ಕುದಿಸಿ. ಮೌತ್ ವಾಶ್ ಮಾಡಿ. ಇದು ಬಾಯಿಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕೂದಲು ಬೆಳವಣಿಗೆಗೆ ಉತ್ತಮ.

    MORE
    GALLERIES

  • 88

    Muskmelon Recipes: ಬೇಸಿಗೆಯಲ್ಲಿ ಖರ್ಬೂಜ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ

    ಖರ್ಬೂಜ ಸೇವನೆಯು ದೇಹದಲ್ಲಿನ ಊತದ ಸಮಸ್ಯೆ ಕಡಿಮೆ ಮಾಡುತ್ತದೆ. ದೇಹದ ಅನೇಕ ಭಾಗಗಳಲ್ಲಿ ನೀರು ತುಂಬುವ ಸಮಸ್ಯೆ, ಊತ ಕಡಿಮೆ ಮಾಡುತ್ತದೆ. ಕಣ್ಣುಗಳ ಚರ್ಮದ ಆರೋಗ್ಯ ಕಾಪಾಡುತ್ತದೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಇದೆ. ಇದು ಕಣ್ಣಿನ ಸೈಟ್ ದುರ್ಬಲಗೊಳ್ಳುವುದನ್ನು ತಡೆಯುತ್ತದೆ.

    MORE
    GALLERIES