Pregnancy Care: ಗರ್ಭಿಣಿಯರ ವಾಂತಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಆಯುರ್ವೇದ ಟಿಪ್ಸ್​!

ಗರ್ಭಾವಸ್ಥೆಯಲ್ಲಿ ದೇಹವು ವಿವಿಧ ರೀತಿಯ ಬದಲಾವಣೆಗೆ ತುತ್ತಾಗುತ್ತದೆ. ಹಾರ್ಮೊನುಗಳ ವ್ಯತ್ಯಾಸವು ಗರ್ಭಿಗೆ ಹಲವು ಆರೋಗ್ಯ ಸಮಸ್ಯೆ ಎದುರಿಸುವಂತೆ ಮಾಡುತ್ತದೆ. ವಿಶೇಷವಾಗಿ ಗರ್ಭಿಣಿಯರು ಮೊದಲ ಮೂರು ತಿಂಗಳಲ್ಲಿ ಏನನ್ನೂ ತಿನ್ನಲು ಹಾಗೂ ಕುಡಿಯುವ ಬಯಕೆ ವ್ಯಕ್ತಪಡಿಸಲ್ಲ. ಇದಕ್ಕೆ ವಾಂತಿಯಾಗುವುದು ಮುಖ್ಯ ಕಾರಣವಾಗಿದೆ.

First published:

  • 18

    Pregnancy Care: ಗರ್ಭಿಣಿಯರ ವಾಂತಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಆಯುರ್ವೇದ ಟಿಪ್ಸ್​!

    ಗರ್ಭಿಣಿಯರು ಮೊದಲ ಮೂರು ತಿಂಗಳ ಅವಧಿಯಲ್ಲಿ ತಿನ್ನುವುದು, ಕುಡಿಯುವುದು ನಂತರ ಸಾಕಷ್ಟು ವಾಮಿಟ್ ಸಮಸ್ಯೆ ಅನುಭವಿಸುತ್ತಾರೆ. ಇದರಿಂದಾಗಿ ಅವರಿಗೆ ಕುಡಿಯಲು ಮತ್ತು ತಿನ್ನಲು ಮನಸ್ಸಾಗುವುದಿಲ್ಲ. ಇದರಿಂದ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗುವುದಿಲ್ಲ.

    MORE
    GALLERIES

  • 28

    Pregnancy Care: ಗರ್ಭಿಣಿಯರ ವಾಂತಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಆಯುರ್ವೇದ ಟಿಪ್ಸ್​!

    ಹೀಗೆ ಸರಿಯಾಗಿ ತಿನ್ನುವುದು, ಕುಡಿಯುವುದು ಮಾಡದೇ ಹೋದರೆ ಗರ್ಭಿಣಿಯ ದೇಹವು ದುರ್ಬಲವಾಗುತ್ತದೆ. ಇದು ನೇರವಾಗಿ ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವು ಗರ್ಭಿಣಿಯರಿಗೆ ಹಾಸಿಗೆಯಿಂದ ಎದ್ದೇಳಲು ಸಾಧ್ಯವಾಗಲ್ಲ. ಇದು ಅವರಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟು ಮಾಡುತ್ತದೆ.

    MORE
    GALLERIES

  • 38

    Pregnancy Care: ಗರ್ಭಿಣಿಯರ ವಾಂತಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಆಯುರ್ವೇದ ಟಿಪ್ಸ್​!

    ಈ ವಾಂತಿ ಸಮಸ್ಯೆ ತಡೆಗೆ ಆಯುರ್ವೇದ ಕೆಲವು ಪರಿಹಾರಗಳ ಬಗ್ಗೆ ತಿಳಿಸಿದೆ. ಗರ್ಭಾವಸ್ಥೆಯಲ್ಲಿ ವಾಂತಿಯಾಗಲು ಮುಖ್ಯ ಕಾರಣಗಳೆಂದರೆ ಹಾರ್ಮೋನ್ ಕೊರಿಯಾನಿಕ್ ಗೊನಡೋಟ್ರೋಪಿನ್ (HCG) ಜರಾಯು ಉತ್ಪಾದಿಸುವುದು, ಫಲವತ್ತಾದ ಮೊಟ್ಟೆಯು ಗರ್ಭಾಶಯದ ಒಳಪದರಕ್ಕೆ ಸೇರಿದಾಗ ಗರ್ಭಿಣಿಯರು ಎಚ್‌ ಸಿಜಿ ಉತ್ಪಾದಿಸುವುದು ಬೆಳಗಿನ ಬೇನೆ ಅಥವಾ ವಾಂತಿಗೆ ಕಾರಣವಾಗುತ್ತದೆ.

    MORE
    GALLERIES

  • 48

    Pregnancy Care: ಗರ್ಭಿಣಿಯರ ವಾಂತಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಆಯುರ್ವೇದ ಟಿಪ್ಸ್​!

    ಕೆಲವು ವಾಸನೆಗಳು, ಕೆಲವು ಆಹಾರ ಸೇವೆನಯಿಂದ ವಾಂತಿ ಹೆಚ್ಚಾಗುತ್ತದೆ. ಗರ್ಭಾವಸ್ಥೆಯ ಮೊದಲ ಮೂರು ತಿಂಗಳುಗಳಲ್ಲಿ ಬೆಳಗಿನ ಬೇನೆಯು ಹೆಚ್ಚು ಸಾಮಾನ್ಯ. ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕದ ಮಧ್ಯದಲ್ಲಿ ಅಥವಾ ಅಂತ್ಯದ ವೇಳೆಗೆ ರೋಗ ಲಕ್ಷಣಗಳು ಸಾಮಾನ್ಯವಾಗಿರುತ್ತವೆ.

    MORE
    GALLERIES

  • 58

    Pregnancy Care: ಗರ್ಭಿಣಿಯರ ವಾಂತಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಆಯುರ್ವೇದ ಟಿಪ್ಸ್​!

    ಇದಕ್ಕೆ ಆಯುರ್ವೇದದಲ್ಲಿ ಕೆಲವು ಪರಿಹಾರ ತಿಳಿಸಲಾಗಿದೆ. ಅವರು ದಿನವಿಡೀ ಆಲಸ್ಯದ ಬದಲು ಚೈತನ್ಯ ಅನುಭವಿಸುತ್ತಾರೆ. ಕಪ್ಪು ಒಣದ್ರಾಕ್ಷಿ ಕುದಿಸಿ ಮತ್ತು ಕುಡಿದರೆ ಸಮಸ್ಯೆ ಕಡಿಮೆಯಾಗುತ್ತದೆ. ಕಪ್ಪು ಒಣದ್ರಾಕ್ಷಿಗಳಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣ, ಫೈಬರ್ ಇದೆ. ಹೃದಯದ ಆರೋಗ್ಯ ಮತ್ತು ಮೂಳೆಗಳ ಆರೋಗ್ಯ ಕಾಪಾಡುತ್ತದೆ.

    MORE
    GALLERIES

  • 68

    Pregnancy Care: ಗರ್ಭಿಣಿಯರ ವಾಂತಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಆಯುರ್ವೇದ ಟಿಪ್ಸ್​!

    ವಾಂತಿ ನಿಲ್ಲಿಸಲು 500 ಮಿಲಿ ನೀರಿನಲ್ಲಿ 6 ಒಣದ್ರಾಕ್ಷಿಗಳನ್ನು ಕುದಿಸಿ. ಅದಕ್ಕೆ ಎರಡು ಚಿಟಿಕೆ ಏಲಕ್ಕಿ ಪುಡಿ ಹಾಕಿ, ಮಿಕ್ಸ್ ಮಾಡಿ. ರುಚಿಗೆ ಕಲ್ಲು ಸಕ್ಕರೆ ಸೇರಿಸಿ. ದಿನವಿಡೀ ಸ್ವಲ್ಪ ಸ್ವಲ್ಪ ಸೇವಿಸಿ.

    MORE
    GALLERIES

  • 78

    Pregnancy Care: ಗರ್ಭಿಣಿಯರ ವಾಂತಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಆಯುರ್ವೇದ ಟಿಪ್ಸ್​!

    ಲಾಜಾ ಸೇವನೆ ಅಂದರೆ ಭತ್ತದ ಅರಳು ಸೇವನೆಯು ಪರಿಹಾರ ನೀಡುತ್ತದೆ. ಇದು ವಾಂತಿ, ಭೇದಿ, ರಕ್ತಸ್ರಾವ ಅಸ್ವಸ್ಥತೆ ತೊಡೆದು ಹಾಕುತ್ತದೆ. ಕ್ಯಾಲ್ಸಿಯಂ, ಕಬ್ಬಿಣಾಂಶವೂ ಇದರಲ್ಲಿದೆ. 1 ಕಪ್ ಲಾಜಾವನ್ನು ಎರಡೂವರೆ ಗ್ಲಾಸ್ ನೀರಿನೊಂದಿಗೆ ಬೆರೆಸಿ ಐದು ನಿಮಿಷ ಕುದಿಸಿ. ಕಲ್ಲುಸಕ್ಕರೆ ಮತ್ತು 2 ಚಿಟಿಕೆ ಏಲಕ್ಕಿ ಪುಡಿ ಹಾಕಿ ಸೇವಿಸಿ.

    MORE
    GALLERIES

  • 88

    Pregnancy Care: ಗರ್ಭಿಣಿಯರ ವಾಂತಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಆಯುರ್ವೇದ ಟಿಪ್ಸ್​!

    ಶುಂಠಿ ರಸದ ಜೊತೆ ಎಳನೀರು ಸೇವಿಸುವುದು. ವಿವಿಧ ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವ ಎಳನೀರು, ಶುಂಠಿ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ತೆಂಗಿನ ನೀರಿಗೆ ಸ್ವಲ್ಪ ಉಪ್ಪು, ಚಮಚ ಶುಂಠಿ ರಸ, ಅರ್ಧ ಚಮಚ ನಿಂಬೆ ರಸ ಮಿಕ್ಸ್ ಮಾಡಿ ಕುಡಿದರೆ ವಾಂತಿ ಸಮಸ್ಯೆ ನಿಲ್ಲುತ್ತದೆ.

    MORE
    GALLERIES