ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

Sex Education: ಪ್ರಣಯದಾಟವನ್ನು ಪರಮೌಷಧ ಎನ್ನಲಾಗುತ್ತದೆ. ಆಹಾರ ಮತ್ತು ನಿದ್ರೆಯಷ್ಟೇ ಪ್ರಣಯವೂ ಮುಖ್ಯ ಎಂದು ಹಲವಾರು ಅಧ್ಯಯನಗಳು ಈಗಾಗಲೇ ಹೇಳಿವೆ. ಲೈಂಗಿಕ ಜೀವನದಲ್ಲಿ ಶೃಂಗಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೆ ಅದುವೇ ದಾಂಪತ್ಯ ವಿರಸಕ್ಕೆ ಕಾರಣವಾಗಬಹುದು. ಹೀಗಾಗಿ ಸಾಮಾನ್ಯವಾಗಿ ಸಮ್ಮಿಲನ ಸಂದರ್ಭದಲ್ಲಿ ಗಮನಿಸಲೇಬೇಕಾದ ಕೆಲ ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.

  • News18
  • |
First published:

  • 19

    ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

    1. ಲೈಂಗಿಕ ಸಮ್ಮಿಲನದಲ್ಲಿ ಪುರುಷರದ್ದೇ ಪ್ರಾಬಲ್ಯ ಎಂಬ ತಪ್ಪು ಗ್ರಹಿಕೆ ನಮ್ಮ ಸಮಾಜದಲ್ಲಿದೆ. ಆದರೆ ತನ್ನ ಸಂಗಾತಿಯ ಆದ್ಯತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸೆಕ್ಸ್​ ಜೀವನದಲ್ಲಿ ಅವರು ಕೂಡ ಸಂತುಷ್ಟರಾಗುತ್ತಾರೆ ಎಂಬುದು ನೆನಪಿರಲಿ.

    MORE
    GALLERIES

  • 29

    ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

    ನೀವು ನಿಮ್ಮ ಸುಖವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ ಅಂತಹ ಲೈಂಗಿಕ ಬಂಧವು ಯಾಂತ್ರಿಕವಾಗಿರುತ್ತದೆ ಹೊರತು ಆನಂದದಾಯಕವಾಗಿರಲ್ಲ. ಆದ್ದರಿಂದ ಸಂಗಾತಿ ಪುರುಷ ಅಥವಾ ಸ್ತ್ರೀ ಆಗಿರಲಿ, ಅವರೊಂದಿಗೆ ಪ್ರಣಯದಾಟಕ್ಕೂ ಮುನ್ನ ಪರಸ್ಪರರ ಪ್ರೀತಿಯಿಂದ ವರ್ತಿಸಿ, ಶೃಂಗಾರದಲ್ಲಿ ಮೈಮರೆಯಲು ಪ್ರೇರಣೆ ನೀಡಿ.

    MORE
    GALLERIES

  • 39

    ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

    2. ಒಪ್ಪಿಗೆಯೊಂದಿಗೆ ಪ್ರಣಯದಾಟವನ್ನು ಪ್ರಾರಂಭಿಸಿ. ಲೈಂಗಿಕ ಕ್ರಿಯೆ ಎಂಬುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ ವಿಷಯವಲ್ಲ. ಇಲ್ಲಿ ಹೇಗೆ ದೇಹ ಒಗ್ಗೂಡತ್ತದೆಯೋ ಹಾಗೆಯೇ ಮನಸ್ಸುಗಳು ಸಹ ಪೂರ್ಣ ಮನಸ್ಸಿನಿಂದ ಸಮ್ಮತಿಗೊಳಗಾಗಬೇಕು.

    MORE
    GALLERIES

  • 49

    ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

    ಇದು ಪ್ರಣಯದ ಪೂರ್ವ ಪ್ರಕ್ರಿಯೆಯಾಗಿದ್ದು, ಸಂಗಾತಿಯ ಮೂಡ್​ ಅನ್ನು ಅನುಸರಿಸಿ ನೀವು ಲೈಂಗಿಕ ಕ್ರಿಯೆಗೆ ಮುಂದಾಗಿ. ಇದನ್ನೇ ಇಂಗ್ಲಿಷ್​ನಲ್ಲಿ ಫೋರ್‌ಪ್ಲೇ ಎಂದು ಎನ್ನಲಾಗುತ್ತದೆ. ಅಂದರೆ ಸೆಕ್ಸ್​ಗೂ ಮುನ್ನ ಪರಸ್ಪರ ಒಪ್ಪಿಗೆಯಿಂದ ಪ್ರಣಯದಾಟದಲ್ಲಿ ತೊಡಗಿಕೊಳ್ಳುವುದು. ಆ ಮೂಲಕ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುವುದಾಗಿದೆ.

    MORE
    GALLERIES

  • 59

    ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

    3. ಇಬ್ಬರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಿರಬೇಕು. ದೇಹಗಳು ಒಂದಾಗಬೇಕಿದ್ದರೆ ಇಬ್ಬರ ಆಸೆಗಳು ಒಂದೇ ರೀತಿಯಲ್ಲಿರಬೇಕು. ಇಲ್ಲಿ ಪುರುಷರಿಗೆ ಆರಂಭದಲ್ಲಿ ಹೆಚ್ಚಿನ ಕಾಮಾಸಕ್ತಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಸಂಗಾತಿ ಮೇಲೆ ಉಳಿಯಲು ಪುರುಷರು ಬಯಸುತ್ತಾರೆ.

    MORE
    GALLERIES

  • 69

    ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

    ಆದರೆ ಅನೇಕ ಸಂದರ್ಭಗಳಲ್ಲಿ ಇದು ಸರಿಯಾದ ಕ್ರಮವಲ್ಲ ಎಂದು ತಜ್ಞರು ಸೂಚಿಸಿದ್ದಾರೆ. ದೇಹದ ತತ್ತ್ವಚಿಂತನೆಗಳಿಗೆ ಅನುಗುಣವಾಗಿ ರತಿ ಕ್ರೀಡೆ ನಡೆಯಬೇಕು. ಆದರೆ ಮಾತ್ರ ಇಬ್ಬರಿಗೂ ನಿಜವಾದ ದೈಹಿಕ ಸುಖದ ಸಾರವನ್ನು ಅನುಭವಿಸಲು ಸಾಧ್ಯ. ಹೀಗಾಗಿ ಅವಳ ಅಥವಾ ಅವನ ಇಚ್ಛೆಗೆ ಅನುಗುಣವಾಗಿ ಅವರು ಬಯಸಿದಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.

    MORE
    GALLERIES

  • 79

    ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

    4. ಸಾಮಾನ್ಯವಾಗಿ ಪುರುಷರು ಲೈಂಗಿಕ ಕ್ರಿಯೆಯ ವೇಳೆ ಮಹಿಳೆಯರ ಮೇಲೆರೆಗಿ ಸುಖ ಪಡೆಯುವುದನ್ನು ಬಯಸುತ್ತಾರೆ. ಹೆಚ್ಚಿನವರು ಇದು ಸಾಂಪ್ರದಾಯಿಕ ವಿಧಾನ ಎಂದೇ ಭಾವಿಸಿದ್ದಾರೆ. ಆದರೆ ಇದಕ್ಕೂ ಉತ್ತಮವಾದ ವಿಧಾನ ಮತ್ತು ಭಂಗಿಗಳು ರತಿ ಕ್ರೀಡೆಯಲ್ಲಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಇಂತಹ ಅನೇಕ ವಿಷಯಗಳನ್ನು ಕಾಮಪ್ರಚೋಧಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದ್ದು, ಇವುಗಳನ್ನು ಅನುಸರಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಲೈಂಗಿಕ ಜೀವನ ಆನಂದದಾಯಕವಾಗಿರುತ್ತದೆ.

    MORE
    GALLERIES

  • 89

    ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

    5. ಲೈಂಗಿಕ ಕ್ರಿಯೆಯ ವೇಳೆ ಪರಾಕಾಷ್ಠೆಯನ್ನು ತಲುಪುದು ರತಿ ಕ್ರೀಡೆಯ ನಿಜವಾದ ಸುಖ ಎಂಬುದು ತಿಳಿದಿರಲಿ. ದೇಹಗಳ ಮಿಲನದ ವೇಳೆ ಉಂಟಾಗುವ ಈ ಭಾವನೆ ನಿಮ್ಮ ಸಂಗಾತಿಯನ್ನು ಸಂತೃಪ್ತಿಪಡಿಸುತ್ತದೆ. ಆದರೆ ಲೈಂಗಿಕ ಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಅನೇಕ ಸಂಗಾತಿಯಿಂದ ದೂರ ಸರಿಯುವ ತಪ್ಪು ಮಾಡುತ್ತಾರೆ.

    MORE
    GALLERIES

  • 99

    ಆನಂದದಾಯಕ ಲೈಂಗಿಕ ಕ್ರಿಯೆಗೆ ಇಲ್ಲಿದೆ ಸಿಂಪಲ್ ಸಲಹೆಗಳು

    ಇದು ಅವರ ಭಾವನೆ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನಪಿಟ್ಟುಕೊಳ್ಳಿ. ಲೈಂಗಿಕ ಸುಖ ಸಿಗುತ್ತಿದ್ದಂತೆ ಅವರೊಂದಿಗೆ ಮತ್ತಷ್ಟು ಪ್ರೀತಿ ತೋರಿಸಿ. ಈ ವೇಳೆ ನಿಮ್ಮ ಸಂಗಾತಿಯನ್ನು ಮುದ್ದಾಡುವುದರಿಂದ ಪ್ರಣಯದಾಟದ ಅಸಲಿ ಆನಂದ ಅನುಭವಿಸಬಹುದು ಎಂದು ಮನಃಶಾಸ್ತ್ರಜ್ಞರು ಹೇಳಿದ್ದಾರೆ.

    MORE
    GALLERIES