Health Tips: ನಿಮ್ಮ ಟೂತ್‌ ಪೇಸ್ಟ್‌ನಲ್ಲಿ ಉಪ್ಪು ಅಷ್ಟೇ ಅಲ್ಲಾ, ಈ ಎಲ್ಲಾ ಪದಾರ್ಥಗಳೂ ಇರಬೇಕು! ಇವೆಯಾ ಅಂತ ತಿಳಿದು ಖರೀದಿ ಮಾಡಿ

ಜಾಹೀರಾತುಗಳಲ್ಲಿ ಯಾವಾಗಲೂ ಸತ್ಯವನ್ನು ತೋರಿಸುವುದಿಲ್ಲ. ಏಕೆಂದರೆ ಟೂತ್​ ಪೇಸ್ಟ್​ನಲ್ಲಿರುವ ಹಾನಿಕಾರಕ ಅಂಶಗಳನ್ನು ಅವರು ಹೆಚ್ಚಾಗಿ ಬಹಿರಂಗಪಡಿಸುವುದಿಲ್ಲ. ಆದರೆ ನೀವು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು, ಸರಿಯಾದ ಟೂತ್ ಪೇಸ್ಟ್ ಯಾವುದು ಎಂಬುವುದರ ಬಗ್ಗೆ ತಿಳಿದುಕೊಳ್ಳಬೇಕು,

First published:

  • 16

    Health Tips: ನಿಮ್ಮ ಟೂತ್‌ ಪೇಸ್ಟ್‌ನಲ್ಲಿ ಉಪ್ಪು ಅಷ್ಟೇ ಅಲ್ಲಾ, ಈ ಎಲ್ಲಾ ಪದಾರ್ಥಗಳೂ ಇರಬೇಕು! ಇವೆಯಾ ಅಂತ ತಿಳಿದು ಖರೀದಿ ಮಾಡಿ

    ಬಾಯಿ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೆಟ್ಟ ಉಸಿರು ಮತ್ತು ಅನೈರ್ಮಲ್ಯದ ಹಲ್ಲುಗಳು ಇತರರೊಂದಿಗೆ ಸಂವಹನ ನಡೆಸುವಾಗ ಮುಜುಗರಕ್ಕೊಳಪಡಿಸಬಹುದು.

    MORE
    GALLERIES

  • 26

    Health Tips: ನಿಮ್ಮ ಟೂತ್‌ ಪೇಸ್ಟ್‌ನಲ್ಲಿ ಉಪ್ಪು ಅಷ್ಟೇ ಅಲ್ಲಾ, ಈ ಎಲ್ಲಾ ಪದಾರ್ಥಗಳೂ ಇರಬೇಕು! ಇವೆಯಾ ಅಂತ ತಿಳಿದು ಖರೀದಿ ಮಾಡಿ

    ಅದೆಷ್ಟೋ ಮಂದಿ ಅತ್ಯುತ್ತಮ ಟೂತ್ಪೇಸ್ಟ್ಗಾಗಿ ಹುಡುಕಾಡುತ್ತಿರುತ್ತಾರೆ. ಮಾರುಕಟ್ಟೆಯಲ್ಲಿ ಹಲವು ಟೂತ್ ಪೇಸ್ಟ್ಗಳು ಲಭ್ಯವಿರುವುದ್ದರೂ ಟಿವಿಯಲ್ಲಿ ಬರುವ ಜಾಹಿರಾತುಗಳನ್ನೇ ಹೆಚ್ಚಾಗಿ ನಂಬುತ್ತಾರೆ.

    MORE
    GALLERIES

  • 36

    Health Tips: ನಿಮ್ಮ ಟೂತ್‌ ಪೇಸ್ಟ್‌ನಲ್ಲಿ ಉಪ್ಪು ಅಷ್ಟೇ ಅಲ್ಲಾ, ಈ ಎಲ್ಲಾ ಪದಾರ್ಥಗಳೂ ಇರಬೇಕು! ಇವೆಯಾ ಅಂತ ತಿಳಿದು ಖರೀದಿ ಮಾಡಿ

    ಆದರೆ ಜಾಹೀರಾತುಗಳಲ್ಲಿ ಯಾವಾಗಲೂ ಸತ್ಯವನ್ನು ತೋರಿಸುವುದಿಲ್ಲ. ಏಕೆಂದರೆ ಟೂತ್ಪೇಸ್ಟ್ನಲ್ಲಿರುವ ಹಾನಿಕಾರಕ ಅಂಶಗಳನ್ನು ಅವರು ಹೆಚ್ಚಾಗಿ ಬಹಿರಂಗಪಡಿಸುವುದಿಲ್ಲ. ಆದರೆ ನೀವು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು, ಸರಿಯಾದ ಟೂತ್ ಪೇಸ್ಟ್ ಯಾವುದು ಎಂಬುವುದರ ಬಗ್ಗೆ ತಿಳಿದುಕೊಳ್ಳಬೇಕು, ಅಂದರೆ ಟೂತ್ ಪೇಸ್ಟ್ನಲ್ಲಿ ಯಾವ ಪದಾರ್ಥಗಳು ಇರಬೇಕು ಎಂಬುವುದರ ಬಗ್ಗೆ ನಾವು ನಿಮಗೆ ಕೆಲವು ಸಲಹೆಗಳನ್ನು ನೀಡಲಿದ್ದೇವೆ.

    MORE
    GALLERIES

  • 46

    Health Tips: ನಿಮ್ಮ ಟೂತ್‌ ಪೇಸ್ಟ್‌ನಲ್ಲಿ ಉಪ್ಪು ಅಷ್ಟೇ ಅಲ್ಲಾ, ಈ ಎಲ್ಲಾ ಪದಾರ್ಥಗಳೂ ಇರಬೇಕು! ಇವೆಯಾ ಅಂತ ತಿಳಿದು ಖರೀದಿ ಮಾಡಿ

    ಫ್ಲೋರೈಡ್ ಟೂತ್ಪೇಸ್ಟ್ನಲ್ಲಿ ಅಗತ್ಯ
    ಈ ಕುರಿತು ಎಬಿಪಿ ಮಜಾದಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ. ಬ್ರಿಟಿಷ್ ದಂತವೈದ್ಯ ಮತ್ತು ಇಂಪ್ರೆಸ್ನ ಮುಖ್ಯ ಆರ್ಥೊಡಾಂಟಿಸ್ಟ್ ಡಾ. ಖಲೀದ್ ಕಾಸಿಮ್ ಆಗಾಗ್ಗೆ ದಂತ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಟೂತ್ಪೇಸ್ಟ್ ಕುರಿತಂತೆ ಮಾತನಾಡಿದ ಅವರು, ನೀವು ಯಾವಾಗಲೂ ಫ್ಲೋರೈಡ್ ಟೂತ್ಪೇಸ್ಟ್ ಅನ್ನು ಬಳಸಬೇಕು, ಇದು ಬಹಳ ಮುಖ್ಯವಾಗಿದೆ. ಫ್ಲೋರೈಡ್ ಟೂತ್ಪೇಸ್ಟ್ನಲ್ಲಿ ವಿವಿಧ ರೀತಿಯ ಟೂತ್ಪೇಸ್ಟ್ಗಳಿವೆ. ಆದರೆ ಸಾಮಾನ್ಯವಾಗಿ ನೀವು ಬಳಸುವ ಟೂತ್ಪೇಸ್ಟ್ನಲ್ಲಿ ಫ್ಲೋರೈಡ್ ಇದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು.

    MORE
    GALLERIES

  • 56

    Health Tips: ನಿಮ್ಮ ಟೂತ್‌ ಪೇಸ್ಟ್‌ನಲ್ಲಿ ಉಪ್ಪು ಅಷ್ಟೇ ಅಲ್ಲಾ, ಈ ಎಲ್ಲಾ ಪದಾರ್ಥಗಳೂ ಇರಬೇಕು! ಇವೆಯಾ ಅಂತ ತಿಳಿದು ಖರೀದಿ ಮಾಡಿ

    ಕಡಿಮೆ ಫ್ಲೋರೈಡ್ ಹೊಂದಿರುವ ಟೂತ್ಪೇಸ್ಟ್ ಅನ್ನು ಮಕ್ಕಳಿಗೆ ನೀಡಲಾಗುತ್ತದೆ' ಎಂದು ತಿಳಿಸಿದ್ದಾರೆ. ಏಕೆಂದರೆ ಮಕ್ಕಳ ಹಲ್ಲುಗಳು ವಯಸ್ಕರಿಗಿಂತ ಹೆಚ್ಚು ದುರ್ಬಲವಾಗಿರುತ್ತವೆ. ವಯಸ್ಕರಿಗೆ ಹೆಚ್ಚಿನ ಫ್ಲೋರೈಡ್ ಟೂತ್ಪೇಸ್ಟ್ ಕೂಡ ಕೆಲಸ ಮಾಡುತ್ತದೆ.

    MORE
    GALLERIES

  • 66

    Health Tips: ನಿಮ್ಮ ಟೂತ್‌ ಪೇಸ್ಟ್‌ನಲ್ಲಿ ಉಪ್ಪು ಅಷ್ಟೇ ಅಲ್ಲಾ, ಈ ಎಲ್ಲಾ ಪದಾರ್ಥಗಳೂ ಇರಬೇಕು! ಇವೆಯಾ ಅಂತ ತಿಳಿದು ಖರೀದಿ ಮಾಡಿ

    ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, 1,350 ರಿಂದ 1,500 ppm ಫ್ಲೋರೈಡ್ ಹೊಂದಿರುವ ಟೂತ್ಪೇಸ್ಟ್ ತುಂಬಾ ಪರಿಣಾಮಕಾರಿಯಾಗಿದೆ. ಆದರೆ ನೀವು ದಂತಕ್ಷಯಕ್ಕೆ ಗುರಿಯಾಗಿದ್ದರೆ, ನೀವು ಹೆಚ್ಚು ಫ್ಲೋರೈಡ್ ಹೊಂದಿರುವ ಟೂತ್ಪೇಸ್ಟ್ ಅನ್ನು ಬಳಸಬೇಕು. 1,000ppm ಫ್ಲೋರೈಡ್ ಹೊಂದಿರುವ ಟೂತ್ಪೇಸ್ಟ್ ಮಕ್ಕಳಿಗೆ ಸೂಕ್ತವಾಗಿದೆ. ಏಕೆಂದರೆ ಮಗುವಿನ ಹಲ್ಲುಗಳು ತುಂಬಾ ದುರ್ಬಲವಾಗಿರುತ್ತವೆ ಮತ್ತು ಹೆಚ್ಚಿನ ಫ್ಲೋರೈಡ್ ಮಗುವಿನ ಹಲ್ಲುಗಳಿಗೆ ಹಾನಿ ಮಾಡುತ್ತದೆ.

    MORE
    GALLERIES