Christmas Tree: ಕ್ರಿಸ್ಮಸ್ ಟ್ರೀ ಅಲಂಕಾರದ ಇಂಟರೆಸ್ಟಿಂಗ್ ಕಹಾನಿ, ಇಲ್ಲಿದೆ ನೋಡಿ ಕತೆ
Significance of Christmas Tree: ಪ್ರತಿ ವರ್ಷ ಡಿಸೆಂಬರ್ 25 ರಂದು ಈ ಸಂಭ್ರಮದ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸಾಮಾನ್ಯವಾಗಿ ಮನೆಯನ್ನು ಅಲಂಕಾರ ಮಾಡುತ್ತಾರೆ, ಮುಖ್ಯವಾಗಿ ಕ್ರಿಸ್ಮಸ್ ಟ್ರೀ ಅಲಂಕಾರ ಎಲ್ಲರ ಗಮನ ಸೆಳೆಯುತ್ತದೆ. ಹಾಗಾದ್ರೆ ಈ ದಿನ ಆ ಟ್ರೀ ಇಡಲು ಕಾರಣವೇನು, ಅದರ ಮಹತ್ವವೇನು ಎಂಬುದು ಇಲ್ಲಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ ಆರಂಭವಾಗಿದೆ. ಈ ಕ್ರಿಸ್ಮಸ್ ಹಬ್ಬವನ್ನು ವಿಶ್ವಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತೆ. ಕ್ರೈಸ್ತ ಧರ್ಮದ ಪ್ರಕಾರ ಯೇಸು ಕ್ರಿಸ್ತನ ಜನ್ಮದಿನ ಇದಾಗಿದ್ದು, ಕ್ರೈಸ್ತ ಸಮುದಾಯದ ಪಾಲಿಗೆ ಇದು ಅತ್ಯಂತ ಸಂಭ್ರಮದ ದಿನ
2/ 8
ಪ್ರತಿ ವರ್ಷ ಡಿಸೆಂಬರ್ 25 ರಂದು ಈ ಸಂಭ್ರಮದ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸಾಮಾನ್ಯವಾಗಿ ಮನೆಯನ್ನು ಅಲಂಕಾರ ಮಾಡುತ್ತಾರೆ, ಮುಖ್ಯವಾಗಿ ಕ್ರಿಸ್ಮಸ್ ಟ್ರೀ ಅಲಂಕಾರ ಎಲ್ಲರ ಗಮನ ಸೆಳೆಯುತ್ತದೆ. ಹಾಗಾದ್ರೆ ಈ ದಿನ ಆ ಟ್ರೀ ಇಡಲು ಕಾರಣವೇನು, ಅದರ ಮಹತ್ವವೇನು ಎಂಬುದು ಇಲ್ಲಿದೆ.
3/ 8
ಕ್ರಿಸ್ಮಸ್ ಹಬ್ಬದ ಆಚರಣೆಯ ವೇಳೆ ಬಹುತೇಕ ಎಲ್ಲರ ಮನೆಯಲ್ಲಿ ಕ್ರಿಸ್ಮಸ್ ಟ್ರೀ ಇರುತ್ತದೆ. ಇದಕ್ಕೆ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯ ಇದೆ. ಯೇಸು ಕ್ರಿಸ್ತ ಹುಟ್ಟುವ ಸಮಯದಲ್ಲಿ ಒಂದು ವಿಶಿಷ್ಟ ಹಾಗೂ ವಿಭಿನ್ನ ರೀತಿಯ ಮರವನ್ನು ಅಲ್ಲಿ ಸಿಂಗಾರ ಮಾಡಿ ಇಡಲಾಗಿತ್ತಂತೆ.
4/ 8
ಹಾಗಾಗಿ ಆ ಮರವನ್ನು ಕ್ರಿಸ್ಮಸ್ ಟ್ರೀ ಎಂದು ಕರೆಯಲಾಗುತ್ತದೆ ಹಾಗೂ ಈ ವಿಶೇಷ ದಿನದಂದು ಮರವನ್ನು ಅಲಂಕರಿಸಲಾಗುತ್ತದೆ. ಕ್ರಿಸ್ಮಸ್ ಹಬ್ಬದ ವೇಳೆ ಈ ಮರವನ್ನು ಚಾಕೊಲೇಟ್, ಗಿಫ್ಟ್ ಡಬ್ಬಗಳು, ಬಣ್ಣದ ದೀಪಗಳ ಮೂಲಕ ಅಲಂಕರಿಸಬಹುದು.
5/ 8
ಸಾಂಪ್ರದಾಯಿಕವಾಗಿ ಮರವನ್ನು ಆರಂಭಿಕ ದಿನಗಳಲ್ಲಿ ಸೇಬುಗಳು, ಬೀಜಗಳು ಮತ್ತು ಇತರ ಆಹಾರಗಳಿಂದ ಅಲಂಕರಿಸಲಾಗಿತ್ತು, ಇದನ್ನು 18 ನೇ ಶತಮಾನದಲ್ಲಿ ಮೇಣದಬತ್ತಿಗಳು ಮತ್ತು ನಂತರ ಕ್ರಿಸ್ಮಸ್ ದೀಪಗಳಿಂದ ಬದಲಾಯಿಸಲಾಯಿತು.
6/ 8
ಇಂದು, ದೀಪಗಳ ಹೊರತಾಗಿ ಆಯ್ಕೆ ಮಾಡಲು ಸಾಕಷ್ಟು ಅಲಂಕಾರಿಕ ವಸ್ತುಗಳಿವೆ. ಕ್ರಿಸ್ಮಸ್ ಮರಗಳ ಜಾಗದಲ್ಲಿ ಉತ್ತರ ಯುರೋಪಿನ ಅನೇಕ ಭಾಗಗಳಲ್ಲಿ, ಚೆರ್ರಿ ಅಥವಾ ಹಾಥಾರ್ನ್ ಸಸ್ಯಗಳನ್ನು ಬಳಸುತ್ತಾರೆ.
7/ 8
700 ನೇ ವರ್ಷದಿಂದ, ಪೇಗನ್ ಮರವನ್ನು ಬದಲಾಯಿಸಲಾಯಿತು, ಇದನ್ನು ಕ್ರಿಶ್ಚಿಯನ್ ಧರ್ಮದ ಸಂಕೇತವೆಂದು ಪರಿಗಣಿಸಲಾಗಿದೆ. ಕ್ರಿಸ್ಮಸ್ ಮರವು ತ್ರಿಕೋನಾಕಾರದಲ್ಲಿರುವುದರಿಂದ ಮನೆಯಲ್ಲಿ ಸಂಪತ್ತು ಹಾಗೂ ನೆಮ್ಮದಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
8/ 8
ಕ್ರಿಸ್ಮಸ್ ಟ್ರೀ ಅಲಂಕಾರ ಮಾಡುವುದು ಸಹ ಈಗ ಒಂದು ದೊಡ್ಡ ಸಂಭ್ರಮದ ಕೆಲಸ. ಮಕ್ಕಳಿಗಂತೂ ಇದು ಬಹಳ ಖುಷಿಯ ವಿಚಾರ. ಬಣ್ಣ ಬಣ್ಣದ ದೀಪಗಳ ಮಧ್ಯೆ ಜಗಮಗಿಸುವ ಆ ಗಿಫ್ಟ್ಗಳು ಕಣ್ಣು ಕೊರೈಸದೇ ಇರದು.