ಇಂದಿನ ಕಾಲದಲ್ಲಿ ಒಳ್ಳೆ ಹೆಂಡ್ತಿ ಸಿಗುವುದೇ ತುಂಬಾ ಕಷ್ಟವಾಗಿದೆ. ಒಂದು ವೇಳೆ ಸಿಕ್ಕರೆ ಅದು ನಿಮ್ಮ ಅದೃಷ್ಟನೇ ಅಂತ ಹೇಳಬಹುದು. ಗಂಡನೇ ಆಗಲಿ, ಹೆಂಡತಿಯೇ ಆಗಲಿ ಉತ್ತಮ ಸಂಗಾತಿ ಆಗುವುದು ತುಂಬಾ ಕಷ್ಟ. ಆದರೆ ಉತ್ತಮ ಪತಿ ಅಥವಾ ಪತ್ನಿ ಸಿಕ್ಕಾಗ ನಿಜಕ್ಕೂ ಬದುಕು ಸುಂದರ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಒಂದು ವೇಳೆ ಪತಿ ಸರಿಯಾಗಿಲ್ಲದಿದ್ದರೆ ಪತ್ನಿಗೆ ನೆಮ್ಮದಿ ಇರುವುದಿಲ್ಲ. ಪತ್ನಿ ಸರಿಯಾಗಿಲ್ಲದಿದ್ದರೆ ಪತಿಗೆ ನೆಮ್ಮದಿ ಇರುವುದಿಲ್ಲ. ಹಾಗಾಗಿ ಉತ್ತಮ ಜೀವನ ಸಾಗಿಸುವ ಇಚ್ಛೆ ಇದ್ದರೆ ಇಬ್ಬರೂ ಕೂಡ ಉತ್ತಮ ಗುಣವನ್ನು ಹೊಂದಿರಬೇಕು.
ಒಂದು ವೇಳೆ ಪತಿ ಸರಿಯಾಗಿಲ್ಲದಿದ್ದರೆ ಪತ್ನಿ ತಿದ್ದುವ ಕೆಲಸ ಮಾಡಬಹುದು. ಆದರೆ ಪತ್ನಿಯೇ ಸರಿ ಇಲ್ಲದಿದ್ದರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ. ಹಾಗಾಗಿ ಒಳ್ಳೆಯ ಪತ್ನಿ ಆಗಿರುವುದು ಬಹಳ ಮುಖ್ಯ. ಆದರೆ, ಅಂಥ ಹುಡುಗಿಯನ್ನು ಗುರುತಿಸಲು ಸೋಲುತ್ತಾರೆ. ಏಕೆಂದರೆ, ಆರಂಭದಲ್ಲಿ ಅವರು ಅಷ್ಟು ಆಕರ್ಷಣೆ ಎನಿಸದೇ ಇರಬಹುದು. ಆದರೆ, ಕೆಲವು ಯುವತಿಯರು ಉತ್ತಮ ಪತ್ನಿಯಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿರುತ್ತಾರೆ. ಅವು ಯಾವುವು ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ.
ಸ್ವತಂತ್ರ ಧೋರಣೆ: ದಾಂಪತ್ಯದಲ್ಲಿ ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿರುತ್ತಾರೆ. ಇದು ಭಾವನಾತ್ಮಕವಾಗಿಯೂ ಹೌದು. ಪ್ರತಿಯೊಂದು ಸಣ್ಣಪುಟ್ಟ ನಿರ್ಧಾರ ತೆಗೆದುಕೊಳ್ಳುವಾಗಲೂ ಪತಿಯ ಮುಖ ನೋಡದೆ ತಾವೇ ಸ್ವತಂತ್ರರಾಗಿ ನಿರ್ಧರಿಸುವ ಗುಣ ದಾಂಪತ್ಯದಲ್ಲಿ ಬಹಳ ಮುಖ್ಯವಾಗಿರುತ್ತದೆ. ಸ್ವಂತ ಆಲೋಚನೆಯಿಂದ ಸರಿಯಾದ ನಿರ್ಧಾರವನ್ನು ಪತ್ನಿ ತೆಗೆದುಕೊಂಡರೆ ಪುರುಷರಿಗೆ ಕೆಲವು ಜವಾಬ್ದಾರಿಗಳು ಕಡಿಮೆಯಾಗುತ್ತವೆ.