ನೀವು ಖರೀದಿಸುವ ಒಳಉಡುಪು ಅವಧಿ ಮುಗಿಯುವ ಮುನ್ನವೇ ಏಕೆ ಕಿತ್ತು ಹೋಗುತ್ತದೆ ಅಂತ ಯೋಚಿಸಿದ್ದೀರಾ? ಉತ್ತಮ ಬ್ರಾಂಡ್ಗಳ ಒಳಉಡುಪುಗಳನ್ನು ದುಬಾರಿ ಬೆಲೆಗೆ ಖರೀದಿಸಿದರೂ ಅದನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಕೆಲವೇ ದಿನಗಳಲ್ಲಿ ಅದು ಔಟ್ ಡೇಟ್ ಆಗಿ ಬಿಡುತ್ತದೆ. ವಿಶೇಷವಾಗಿ ಅವುಗಳನ್ನು ತೊಳೆಯುವ ವಿಧಾನವು ತಪ್ಪಾಗಿದ್ದರೆ, ಬಣ್ಣವು ಶೀಘ್ರದಲ್ಲೇ ಮಸುಕಾಗುತ್ತದೆ, ಎಲಾಸ್ಟಿಕ್ ಬ್ಯಾಂಡ್ ಮತ್ತು ಬಕಲ್ಗಳು ಮುರಿಯುತ್ತವೆ. ಹಾಗಾದರೆ ನೀವು ಅವುಗಳನ್ನು ಹೇಗೆ ನೋಡಿಕೊಳ್ಳಬೇಕು ಅಂತಿರಾ? ಹಾಗಾದರೆ ಈ ಸ್ಟೋರಿ ಓದಿ.
ಒಳಉಡುಪುಗಳನ್ನು ಒಗೆಯುವಾಗ ಅನೇಕ ಮಂದಿ ಮಾಡುವ ತಪ್ಪು ಬಿಸಿನೀರಿನಲ್ಲಿ ಒಗೆಯುವುದು. ಹೀಗೆ ತೊಳೆದರೆ ಕೊಳೆ ಹೋಗಿ ಸ್ವಚ್ಛವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ನಿಮ್ಮ ಒಳಉಡುಪು ದೀರ್ಘಕಾಲ ಬಾಳಿಕೆ ಬರಬೇಕೆಂದರೆ, ಅದನ್ನು ತಣ್ಣೀರಿನಿಂದ ತೊಳೆಯಿರಿ. ಬಿಸಿನೀರಿನಲ್ಲಿ ತೊಳೆದಾಗ ಒಳಉಡುಪು ಎಲಾಸ್ಟಿಕ್ ಹೋಗುತ್ತದೆ ಮತ್ತು ಬಣ್ಣ ಮಸುಕಾಗುತ್ತದೆ. ಬಟ್ಟೆ ಕೂಡ ಕೆಲವೇ ದಿನಗಳಲ್ಲಿ ಹಾಳಾಗುತ್ತದೆ.