ಪ್ರತಿಯೊಬ್ಬರು ತಮ್ಮ ಮದುವೆಯ ದಿನ ಫಿಟ್ ಮತ್ತು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಮದುವೆಗೂ ಮುನ್ನವೇ ಎಲ್ಲ ರೀತಿ ತಯಾರಿ ನಡೆಸಲು ಆರಂಭಿಸುತ್ತಾರೆ. ಅದರಲ್ಲಿಯೂ ಮದುವೆಯಾಗಲು ಹೊರಟಿರುವ ವಧುವಿಗೆ ತಮ್ಮ ತೂಕದ ಬಗ್ಗೆಯೇ ಹೆಚ್ಚು ಚಿಂತೆ ಆಗಿರುತ್ತದೆ. ಹಾಗಾದರೆ ತೂವನ್ನು ಇಳಿಸಿಕೊಳ್ಳುವುದೇಗೆ? ನಿಮಗಾಗಿ ಒಂದಷ್ಟು ಟಿಪ್ಸ್ ಕುರಿತ ಮಾಹಿತಿ ಇಲ್ಲಿದೆ ನೋಡಿ. ಈ ಟಿಪ್ಸ್ಗಳನ್ನು ಫಾಲೋ ಮಾಡಿದರೆ, ಮದುವೆಗೂ ಮುನ್ನವೇ ನೀವು ತೂಕವನ್ನು ಇಳಿಸಿಕೊಳ್ಳಬಹುದು.
ಹೆಚ್ಚು ನೀರು ಕುಡಿಯಿರಿ: ಹೆಚ್ಚು ನೀರು ಕುಡಿದಷ್ಟೂ ದೇಹವು ಹೈಡ್ರೇಟ್ ಆಗಿ ಉಳಿಯುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದಲ್ಲದೇ, ನೀವು ನಿಂಬೆ ಮತ್ತು ಎಳನೀರನ್ನು ಸಹ ಕುಡಿಯಬಹುದು. ಇದರಿಂದ ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳೂ ಹೊರಬರುತ್ತವೆ.