Dream Meaning: ನಿಮಗೆ ಈ ಕನಸುಗಳು ಬಿದ್ರೆ ಅದೃಷ್ಟವೇ ಅದೃಷ್ಟವಂತೆ
Dream Meaning: ಕನಸಿನ ವಿಜ್ಞಾನದ ಪ್ರಕಾರ, ಕನಸುಗಳು ಭವಿಷ್ಯದ ಪ್ರತಿರೂಪವಾಗಿದೆ. ಕನಸುಗಳ ಮೂಲಕ, ಒಬ್ಬ ವ್ಯಕ್ತಿಯು ಮುಂಬರುವ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಊಹಿಸಬಹುದು. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಈ ಕೆಳಗಿನ ಒಂಬತ್ತು ರೀತಿಯ ಕನಸುಗಳನ್ನು ಕಂಡರೆ ಭವಿಷ್ಯದಲ್ಲಿ ನೀವು ಸಾಕಷ್ಟು ಹಣವನ್ನು ಗಳಿಸುವಿರಿ ಎಂದರ್ಥ.
ಎಲ್ಲರಿಗೂ ನಿದ್ರೆಯ ಸಮಯದಲ್ಲಿ ಕನಸು ಬರುತ್ತದೆ. ಆದರೂ ಯಾವ ಕನಸು ಉತ್ತಮ? ಯಾವುದು ಉತ್ತಮವಲ್ಲ? ಎನ್ನುವ ಅನುಮಾನ ಎಲ್ಲರಲ್ಲೂ ವ್ಯಕ್ತವಾಗುತ್ತದೆ. ಆದರೆ ಅದು ಕನಸಿನಲ್ಲಿ ಬಂದ ವಸ್ತುಗಳ ಮೇಲೆ ಇರುತ್ತದೆ.
2/ 10
ನೀವು ದೇವರ ಬಗ್ಗೆ ಕನಸು ಕಂಡರೆ ಅದು ತುಂಬಾ ಒಳ್ಳೆಯದು. ಇದರರ್ಥ ನಿಮ್ಮ ಕನಸಿನಲ್ಲಿ ದೇವರು ಬಂದರೆ ನೀವು ಭವಿಷ್ಯದಲ್ಲಿ ಒಳ್ಳೆಯ ಹಣವನ್ನು ಗಳಿಸುವಿರಿ. ಮತ್ತು ದೇವರ ಕಾರ್ಯಗಳಿಗೆ ಆ ಹಣವನ್ನು ನೀವು ಖರ್ಚು ಮಾಡಬೇಕು ಎಂದು ಅರ್ಥ.
3/ 10
ಕನಸಿನಲ್ಲಿ ನೀವು ಕುದುರೆ ಸವಾರಿ ಮಾಡುತ್ತಿರುವಂತೆ ಕಾಣುತ್ತದೆ. ಈ ರೀತಿ ಕನಸು ಕಾಣುವುದು ಲಾಭದ ಸಂಕೇತ. ಇದು ಹೊಸ ಉದ್ಯೋಗದ ಸೂಚನೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಆನೆಯನ್ನ ಕಂಡರೆ ಸಹ ಮಂಗಳಕರವೆಂದು ಪರಿಗಣಿಸಬಹುದು. ಅಂದರೆ ನಿಮ್ಮ ಕೈಗೆ ಹಣ ಸಿಗುತ್ತದೆ.
4/ 10
ನೀವು ಕನಸಿನಲ್ಲಿ ಏಣಿಯನ್ನು ಹತ್ತುವ ಕನಸು ಕಂಡರೆ. ನೀವು ಹಣ ಗಳಿಸಲಿದ್ದೀರಿ ಎಂದರ್ಥ. ಅಂತಹ ಕನಸು ನನಸಾದರೆ ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗುತ್ತದೆ.
5/ 10
ಕನಸಿನಲ್ಲಿ ಬೆಂಕಿಯನ್ನು ನೋಡುವುದು ಅಥವಾ ಅಡುಗೆ ಮಾಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಉದ್ಯೋಗದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಇದರಿಂದ ಆರ್ಥಿಕ ಲಾಭವಾಗುತ್ತದೆ.
6/ 10
ನೀವು ಕನಸಿನಲ್ಲಿ ಹಣ ಅಥವಾ ವ್ಯವಹಾರವನ್ನು ಕಂಡರೆ, ಮುಂದಿನ ದಿನಗಳಲ್ಲಿ ನೀವು ದೊಡ್ಡ ಹಣವನ್ನು ಗಳಿಸಲಿದ್ದೀರಿ ಎಂದರ್ಥ.
7/ 10
ಕನಸಿನಲ್ಲಿ ರೈತನನ್ನು ನೋಡುವುದು ಲಾಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಹಸಿರನ್ನು ಕಂಡರೆ ಲಕ್ಷ್ಮೀದೇವಿಯ ಸಂಕೇತ ಎಂದು ಹೇಳಲಾಗುತ್ತದೆ.
8/ 10
ಕನಸಿನಲ್ಲಿ ದಾಳಿಂಬೆ ತಿನ್ನುವುದರಿಂದ ಹಣ ಬರುತ್ತದೆ. ಕನಸಿನಲ್ಲಿ ಈ ಹಣ್ಣುಗಳನ್ನು ತಿನ್ನುವುದು ಅಥವಾ ಹಂಚುವುದು ಎರಡೂ ಮಂಗಳಕರ. ಈ ಕನಸು ಆರ್ಥಿಕ ಸುಧಾರಣೆಯ ಸಂಕೇತ ಎಂದು ಹೇಳಲಾಗುತ್ತದೆ.
9/ 10
ಮೊಸರು ಅಥವಾ ಹಾಲನ್ನು ಕನಸಿನಲ್ಲಿ ಕಂಡರೆ ಭವಿಷ್ಯದಲ್ಲಿ ನೀವು ಕೈಗೊಳ್ಳುವ ಕಾರ್ಯಗಳಲ್ಲಿ ಯಶಸ್ಸನ್ನು ಸೂಚಿಸುತ್ತದೆ. ಕನಸಿನಲ್ಲಿ ಧಾನ್ಯಗಳ ರಾಶಿಯನ್ನು ನೋಡುವುದು ಸಹ ಮಂಗಳಕರವಾಗಿದೆ.
10/ 10
ಕನಸಿನಲ್ಲಿ ಅರಮನೆ ಅಥವಾ ದೊಡ್ಡ ಮನೆಗೆ ಭೇಟಿ ನೀಡುವುದು ಒಳ್ಳೆಯ ಸಂಕೇತ ಎಂದು ಹೇಳಲಾಗುತ್ತದೆ. ಈ ಕನಸು ಎಂದರೆ ನೀವು ಭವಿಷ್ಯದಲ್ಲಿ ದೊಡ್ಡ ಹಣವನ್ನು ಪಡೆಯುತ್ತೀರಿ. ನಿಮ್ಮ ಆಸ್ತಿಯು ಬೆಳೆಯಲಿದೆ ಎಂಬುದರ ಸಂಕೇತವಾಗಿದೆ.