ಸ್ಥೂಲಕಾಯತೆಯು ಡಬಲ್ ಚಿನ್ ಸೇರಿದಂತೆ ದೇಹದ ಅನೇಕ ಭಾಗಗಳಲ್ಲಿ ಕೊಬ್ಬಿನ ನಿಕ್ಷೇಪಗಳನ್ನು ಸಂಗ್ರಹವಾಗಲು ಕಾರಣವಾಗುತ್ತದೆ. ಇದರಿಂದ ಯಾರೇ ಆಗಿದ್ದರೂ ತುಂಬಾ ದಪ್ಪವಾಗಿ ಕಾಣುತ್ತಾರೆ. ಮತ್ತೊಂದೆಡೆ, ಆರೋಗ್ಯಕರ ತೂಕ ಹೊಂದಿರುವ ಜನರು ತಮ್ಮ ದವಡೆಯ ಸುತ್ತಲೂ ಕೊಬ್ಬಿನ ನಿಕ್ಷೇಪವನ್ನು ಹೊಂದಿರುತ್ತಾರೆ. ಇದು ಅವರಿಗೆ ಡಬಲ್ ಚಿನ್ ಅನ್ನು ನೀಡುತ್ತದೆ. ಹಾಗಾಗಿ ಚೂಪಾದಂತಹ ಮುಖ ಹೊಂದಲು ಬಯಸುವ ಜನರು ಕಷ್ಟಪಟ್ಟು ವರ್ಕೌಟ್ ಮಾಡಬೇಕಾಗುತ್ತದೆ. ಹಾಗಾದರೆ ನಿಮ್ಮ ದವಡೆಯ ಭಾಗವನ್ನು ಹೇಗೆ ತೀಕ್ಷ್ಣಗೊಳಿಸುವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಹೆಚ್ಚುವರಿ ಕೊಬ್ಬು, ವಯಸ್ಸಾದ, ಅನುವಂಶಿಕತೆ ಅಥವಾ ಅನಿಯಮಿತ ಮುಖದ ರಚನೆಯು ಡಬಲ್ ಚಿನ್ ಅನ್ನು ಉಂಟುಮಾಡಬಹುದು. ಡಬಲ್ ಚಿನ್ ಅನ್ನು ಕಡಿಮೆ ಮಾಡಲು ಕೆಲ ವ್ಯಾಯಾಮಗಳನ್ನು ಸಹ ಮಾಡಬಹುದಾಗಿದೆ.
ಡಬಲ್ ಚಿನ್ ಅನ್ನು ವೈದ್ಯಕೀಯ ಭಾಷೆಯಲ್ಲಿ ಸಬ್ಮೆಂಟಲ್ ಕೊಬ್ಬು ಎಂದು ಕರೆಯಲಾಗುತ್ತದೆ. ಕೊಬ್ಬಿನ ಮಟ್ಟಗಳು ಗಲ್ಲದ ಅಡಿಯಲ್ಲಿ ಅಥವಾ ಕುತ್ತಿಗೆಯ ಸುತ್ತಲೂ ಸಂಗ್ರಹವಾದಾಗ, ತೂಕ ಹೆಚ್ಚಾಗಲು ಕಾರಣವಾದಾಗ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗಲ್ಲವನ್ನು ಆಕರ್ಷಕವಾಗಿಸಲು ಮುಖದ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಮುಖದ ವ್ಯಾಯಾಮಗಳು ರಕ್ತ ಪರಿಚಲನೆಯನ್ನು ಉತ್ತೇಜಿಸಲು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡಬಲ್ ಚಿನ್ ಅನ್ನು ಕಡಿಮೆ ಮಾಡಲು ಈ ಸರಳವಾದ ವ್ಯಾಯಾಮಗಳು ಮಾಡಿ. ಈ ಮುಖದ ವ್ಯಾಯಾಮಗಳು ನಿಮ್ಮ ಮುಖದ ಚರ್ಮದ ಸುತ್ತಲಿನ ಸ್ನಾಯುಗಳು ಮತ್ತು ಅಂಗಾಂಶಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ದವಡೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಎಲ್ಲಾ ವ್ಯಾಯಾಮಗಳನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದನ್ನು ಪ್ರತಿದಿನ ಮಾಡಿದರೆ ಒಂದು ತಿಂಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಡಬಲ್ ಚಿನ್ ಅನ್ನು ಕಡಿಮೆ ಮಾಡಬಹುದು.
ಚೂಯಿಂಗ್ ಗಮ್: ಸುಲಭವಾದ ವ್ಯಾಯಾಮವೆಂದರೆ ಚೂಯಿಂಗ್ ಗಮ್. ಈ ವ್ಯಾಯಾಮವು ನಿಮ್ಮ ಡಬಲ್ ಚಿನ್ ಅನ್ನು ಕಡಿಮೆ ಮಾಡುತ್ತದೆ. ನೀವು ಗಮ್ ಅನ್ನು ಅಗಿಯುವಾಗ, ನಿಮ್ಮು ಮುಖ ಮತ್ತು ಗಲ್ಲದ ಸ್ನಾಯುಗಳು ಹಿಗ್ಗುತ್ತವೆ. ಇದು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಗಲ್ಲವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ದವಡೆಯ ಸ್ನಾಯುಗಳನ್ನು ಬಲಪಡಿಸುತ್ತದೆ.
ಫಿಶ್ ಫೇಸ್: ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ನಾವು ಫಿಶ್ ಫೇಸ್ ಮಾಡುತ್ತೇವೆ. ಆದರೆ ಈ ವ್ಯಾಯಾಮವನ್ನು ದಿನಚರಿಯ ಭಾಗವಾಗಿ ಪ್ರತಿದಿನ ಮಾಡಬಹುದು. ಡಬಲ್ ಚಿನ್ ಅನ್ನು ಕಡಿಮೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ನಿಮ್ಮ ಕೆನ್ನೆಯನ್ನು ಎಳೆಯಿರಿ ಮತ್ತು 30 ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿರಿ. ಈಗ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಈ ವ್ಯಾಯಾಮವನ್ನು ಕನಿಷ್ಠ ನಾಲ್ಕು ಅಥವಾ ಐದು ಬಾರಿ ಪುನರಾವರ್ತಿಸಿ.
ಜಿರಾಫೆ: ಜಿರಾಫೆಯು ಸುಲಭವಾದ ವ್ಯಾಯಾಮಗಳಲ್ಲಿ ಒಂದಾಗಿದೆ. ನಿಮ್ಮ ಗಲ್ಲದ ಮತ್ತು ಕತ್ತಿನ ಕೊಬ್ಬನ್ನು ಕಡಿಮೆ ಮಾಡಲು ನೀವು ಬಯಸಿದರೆ ಇದು ಉತ್ತಮ ವ್ಯಾಯಾಮ ಆಗಿದೆ. ಇದಕ್ಕಾಗಿ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಕುತ್ತಿಗೆಯ ಆರಂಭದಲ್ಲಿ ನಿಮ್ಮ ಬೆರಳುಗಳನ್ನು ಇರಿಸಿ ಮತ್ತು ಅದನ್ನು ಕೆಳಗೆ ಸ್ಟ್ರೋಕ್ ಮಾಡಿ. ಅದೇ ಸಮಯದಲ್ಲಿ ನಿಮ್ಮ ತಲೆಯನ್ನು ಹಿಂದಕ್ಕೆ ತಿರುಗಿಸಿ ಮತ್ತು ನಂತರ ನಿಮ್ಮ ಕುತ್ತಿಗೆಯನ್ನು ಬಗ್ಗಿಸಿ. ನಿಮ್ಮ ಗಲ್ಲವನ್ನು ನಿಮ್ಮ ಎದೆಗೆ ಸ್ಪರ್ಶಿಸಿ. ಈ ಮುಖದ ವ್ಯಾಯಾಮವನ್ನು ಎರಡು ಬಾರಿ ಮಾಡಿ.
ಸಿಂಹಂ ಮುದ್ರೆ: ಸಿಂಹಂ ಮುದ್ರೆಗಾಗಿ, ಕಾಲುಗಳ ಹಿಂದೆ ಬಾಗಿ (ವಜ್ರಾಸನ) ಮತ್ತು ನಿಮ್ಮ ಕೈಗಳನ್ನು ನಿಮ್ಮ ತೊಡೆಯ ಮೇಲೆ ಇರಿಸಿ. ನಿಮ್ಮ ಬೆನ್ನು ಮತ್ತು ತಲೆಯನ್ನು ನೇರವಾಗಿ ಇರಿಸಿ, ನಂತರ ನಿಮ್ಮ ನಾಲಿಗೆಯನ್ನು ಹೊರ ಚಾಚಿ. ನಿಮ್ಮ ನಾಲಿಗೆಯನ್ನು ಸಾಧ್ಯವಾದಷ್ಟು ಹೊರ ಚಾಚಿ. ಆದರೆ ಹೆಚ್ಚು ಒತ್ತಡ ಹೇರಬೇಡಿ. ಈಗ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನಂತರ ಉಸಿರಾಡಿ. ಉತ್ತಮ ರಿಸಲ್ಟ್ಗಾಗಿ ಕನಿಷ್ಠ 5-6 ಬಾರಿ ಪುನರಾವರ್ತಿಸಿ. ಈ ವ್ಯಾಯಾಮವನ್ನು ಮಾಡಿ ಇದರಿಂದ ನೀವು ಯಾವಾಗಲೂ ಕಾಂತಿಯುತವಾಗಿ ಮತ್ತು ಸುಂದರವಾಗಿ ಕಾಣುತ್ತೀರಿ.