Weight Loss: ನೀವು ಪ್ರತಿದಿನ ಬೆಳಗ್ಗೆ ಈ ರೀತಿ ಮಾಡಿದ್ರೆ ತೂಕ ಇಳಿಸೋದು ಸುಲಭ
ಅಧಿಕ ತೂಕ ಆರೋಗ್ಯವನ್ನು ಹಾಳು ಮಾಡುತ್ತೆ. ಮನಸ್ಸಿನ ಶಾಂತಿಯನ್ನು ದೂರ ಮಾಡುತ್ತದೆ. ಸಮಯದ ಕೊರತೆ ಮತ್ತು ಸಮಯಕ್ಕೆ ನಿದ್ರೆಯ ಕೊರತೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. ಈ ಅಧಿಕ ತೂಕವು ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು.
ತೂಕ ಇಳಿಸಲು ಹೆಚ್ಚು ಆಹಾರವನ್ನು ಸೇವಿಸುವುದನ್ನು ಬಿಡುತ್ತೀರಾ. ಆದರೂ ತೂಕ ಕಡಿಮೆ ಆಗೋದಿಲ್ಲ. ಏಕೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ಕೆಲವು ಸಲಹೆಗಳನ್ನು ಅನುಸರಿಸಿದರೆ ತೂಕವನ್ನು ಕಳೆದುಕೊಳ್ಳುತ್ತಾರೆ.
2/ 9
ವ್ಯಾಯಾಮವನ್ನು ಅತಿಯಾಗಿ ಮಾಡೋದು ಒಳ್ಳೆಯದಲ್ಲ. ನೀವು ಬೇಗನೆ ತೂಕವನ್ನು ಕಳೆದುಕೊಳ್ಳಲು ಹೆಚ್ಚು ವ್ಯಾಯಾಮ ಮಾಡಿದ್ರೆ ಅನಾರೋಗ್ಯಕ್ಕೆ ಒಳಗಾಗುತ್ತೀರಿ. ಹಾಗಾಗಿ ವ್ಯವಸ್ಥಿತವಾಗಿ ವ್ಯಾಯಾಮ ಮಾಡ್ಬೇಕು. ಬೆಳಗಿನ ಉಪಹಾರವು ನಮ್ಮ ತೂಕವನ್ನು ಹೆಚ್ಚಿಸಲು ಕಾರಣವಾಗುತ್ತದೆ.
3/ 9
ಬೆಳಗಿನ ಉಪಹಾರ ಸೇವಿಸದಿರುವುದು ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ವಾಸ್ತವವಾಗಿ ಬೆಳಗಿನ ಉಪಹಾರ ಸೇವಿಸದಿದ್ರೆ ವೇಗವಾಗಿ ತೂಕ ಹೆಚ್ಚುತ್ತಾರೆ.
4/ 9
ಬೆಳಗಿನ ಉಪಹಾರವು ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುವುದಿಲ್ಲ. ಅತಿಯಾದ ಹಸಿವಿನಿಂದಾಗಿ. ಹೆಚ್ಚಿನ ಮಂದಿ ಮಧ್ಯಾಹ್ನದ ಸಮಯದಲ್ಲಿ ಹೆಚ್ಚು ಸೇವಿಸುತ್ತಾರೆ. ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಅದಕ್ಕಾಗಿಯೇ ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಆಹಾರ ಮಿಸ್ ಮಾಡ್ಬೇಡಿ.
5/ 9
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹತ್ತರಿಂದ ಹನ್ನೆರಡು ಕರಿಬೇವಿನ ಎಲೆಗಳನ್ನು ತಿನ್ನಬೇಕು. ಇದು ಬೊಜ್ಜಿನ ವಿರುದ್ಧ ಹೋರಾಡಲು ಮತ್ತು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಲು ಸಹಾಯ ಮಾಡುತ್ತದೆ.
6/ 9
ಪ್ರತಿದಿನ ಹೆಚ್ಚು ನೀರು ತೆಗೆದುಕೊಳ್ಳಿ. ನಿಮ್ಮ ಊಟದ ಮೊದಲು ಒಂದು ಲೋಟ ನೀರು ಕುಡಿಯುವುದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಬೊಜ್ಜು ನಿವಾರಣೆಗೆ ಇದು ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ.
7/ 9
ಪ್ರತಿದಿನ ಬೆಳಿಗ್ಗೆ, ನಿಮ್ಮ ಸಾಮಾನ್ಯ ಉಪಹಾರವನ್ನು ತಿನ್ನುವ ಬದಲು, ನೀವು ಒಂದು ಅಥವಾ ಎರಡು ಹಸಿ ಟೊಮೆಟೊಗಳನ್ನು ತಿನ್ನಿ. ಈ ಮನೆಮದ್ದು ಹೆಚ್ಚಿನ ಸಂದರ್ಭಗಳಲ್ಲಿ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
8/ 9
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ಜೇನುತುಪ್ಪದೊಂದಿಗೆ ಬಿಸಿನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ತೂಕ ಇಳಿಸಲು ಇದು ತುಂಬಾ ಉಪಯುಕ್ತವಾಗಿದೆ.
9/ 9
ತರಕಾರಿ ಸೂಪ್ ಮಾಡಿ ಮತ್ತು ಅದಕ್ಕೆ ಕರಿಮೆಣಸು ಸೇರಿಸಿ. ಇದು ನಿಮ್ಮ ಸೂಪ್ ಅನ್ನು ರುಚಿಕರವಾಗಿಸುತ್ತದೆ ಜೊತೆಗೆ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.