ಖರ್ಜೂರದಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಕರ್ಜೂರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಹಾಲಿನಲ್ಲಿ ಕರ್ಜೂರ ನೆನೆಸಿ ತಿನ್ನುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುವುದು ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಹೌದು, ಕರ್ಜೂರ ನೆನೆಸಿದ ಹಾಲಿನಲ್ಲಿ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿದೆ. ಸಕ್ಕರೆ ಇಷ್ಟವಿಲ್ಲದವರು ಖರ್ಜೂರದ ಜೊತೆಗೆ ಹಾಲು ಕುಡಿದರೆ ಅಧಿಕ ಲಾಭವಾಗುತ್ತದೆ. ಹಾಗಾದರೆ ನೆನೆಸಿದ ಹಾಲು ಮತ್ತು ಖರ್ಜೂರದಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
ಹಾಲುಣಿಸುವ ತಾಯಂದಿರಿಗೆ ಒಳ್ಳೆಯದು: ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ನಿಯಮಿತವಾಗಿ ಸೇವಿಸುವುದು ಹಾಲುಣಿಸುವ ತಾಯಂದಿರಿಗೆ ಒಳ್ಳೆಯದು. ಹಾಲು ಕೂಡ ಚೆನ್ನಾಗಿ ಸ್ರವಿಸುತ್ತದೆ. ( ಹಕ್ಕು ನಿರಾಕರಣೆ : ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ ಮತ್ತು ಇದಕ್ಕೆ ಯಾವುದೇ ಪುರಾವೆಗಳಿಲ್ಲ.)