Constipation: ಮಲಬದ್ಧತೆಯಿಂದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಈ ಜ್ಯೂಸ್ ಕುಡಿಯಿರಿ ಆರೋಗ್ಯ ಕಾಪಾಡಿಕೊಳ್ಳಿ

Juices Good to Treat Constipation: ಆಪಲ್ ಜ್ಯೂಸ್ ವಿರೇಚಕಗಳನ್ನು ಹೊಂದಿರುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮವಾಗಿದೆ. ಆದ್ದರಿಂದ, ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ, ಸೇಬಿನ ಜ್ಯೂಸ್ ಕುಡಿಯಲು ಪ್ರಾರಂಭಿಸಬೇಕು. ಇದು ಉತ್ತಮ ಪ್ರಮಾಣದ ಗ್ಲುಕೋಸ್, ಸೋರ್ಬಿಟೋಲ್ ಅಂಶಗಳು ಮತ್ತು ಫ್ರಕ್ಟೋಸ್ ಅನ್ನು ಹೊಂದಿರುತ್ತದೆ.

First published:

  • 17

    Constipation: ಮಲಬದ್ಧತೆಯಿಂದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಈ ಜ್ಯೂಸ್ ಕುಡಿಯಿರಿ ಆರೋಗ್ಯ ಕಾಪಾಡಿಕೊಳ್ಳಿ

    ಇಂದಿನ ಕಾಲದಲ್ಲಿ ಅನೇಕ ಜನರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ದೇಹದಲ್ಲಿ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ. Image:Canva

    MORE
    GALLERIES

  • 27

    Constipation: ಮಲಬದ್ಧತೆಯಿಂದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಈ ಜ್ಯೂಸ್ ಕುಡಿಯಿರಿ ಆರೋಗ್ಯ ಕಾಪಾಡಿಕೊಳ್ಳಿ

    ಆಪಲ್​​ ಜ್ಯೂಸ್​: ಹೆಲ್ತ್​​ಲೈನ್​.ಕಾಮ್ ಪ್ರಕಾರ, ಆಪಲ್ ಜ್ಯೂಸ್ ವಿರೇಚಕಗಳನ್ನು ಹೊಂದಿರುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮವಾಗಿದೆ. ಆದ್ದರಿಂದ, ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ, ಸೇಬಿನ ಜ್ಯೂಸ್ ಕುಡಿಯಲು ಪ್ರಾರಂಭಿಸಬೇಕು. ಇದು ಉತ್ತಮ ಪ್ರಮಾಣದ ಗ್ಲುಕೋಸ್, ಸೋರ್ಬಿಟೋಲ್ ಅಂಶಗಳು ಮತ್ತು ಫ್ರಕ್ಟೋಸ್ ಅನ್ನು ಹೊಂದಿರುತ್ತದೆ. ಇವೆಲ್ಲವೂ ಜೀರ್ಣಾಂಗ ವ್ಯವಸ್ಥೆಯನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಕೆಲವು ದಿನಗಳ ಕಾಲ ಸೇಬಿನ ಜ್ಯೂಸ್ ಅನ್ನು ಕುಡಿಯುವುದರಿಂದ ಮಲಬದ್ಧತೆ ಮತ್ತು ಕಬ್ಬಿಣಾಂಶದ ಕೊರತೆಯನ್ನು ನಿವಾರಿಸಬಹುದು. Image:Canva

    MORE
    GALLERIES

  • 37

    Constipation: ಮಲಬದ್ಧತೆಯಿಂದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಈ ಜ್ಯೂಸ್ ಕುಡಿಯಿರಿ ಆರೋಗ್ಯ ಕಾಪಾಡಿಕೊಳ್ಳಿ

    ಪೇರಳೆ ಜ್ಯೂಸ್ : ಮಲಬದ್ಧತೆ ಸಮಸ್ಯೆಯಿಂದ ಪಾರಾಗಲು ಪೇರಳೆ ಜ್ಯೂಸ್ ಕುಡಿಯಿರಿ. ಪೇರಳೆ ಜ್ಯೂಸ್ ಸೇಬಿನ ಜ್ಯೂಸ್ಕ್ಕಿಂತ ಹೆಚ್ಚು ಸೋರ್ಬಿಟೋಲ್ ಅನ್ನು ಹೊಂದಿರುತ್ತದೆ. ತಜ್ಞರು ಸಾಮಾನ್ಯವಾಗಿ ಪೇರಳೆ ಜ್ಯೂಸ್ ಅನ್ನು ಕುಡಿಯಲು ಶಿಫಾರಸ್ಸು ಮಾಡುತ್ತಾರೆ. ಪೇರಳೆ ರಸವು ಮಕ್ಕಳಿಗೂ ತುಂಬಾ ಒಳ್ಳೆಯದು. Image:Canva

    MORE
    GALLERIES

  • 47

    Constipation: ಮಲಬದ್ಧತೆಯಿಂದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಈ ಜ್ಯೂಸ್ ಕುಡಿಯಿರಿ ಆರೋಗ್ಯ ಕಾಪಾಡಿಕೊಳ್ಳಿ

    ಕಿತ್ತಳೆ ರಸ: ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಜ್ಯೂಸ್ನಲ್ಲಿ ಫೈಬರ್ ಸಮೃದ್ಧವಾಗಿದೆ. ಫೈಬರ್ ಸೇವನೆಯು ಮಲವನ್ನು ಸಡಿಲಗೊಳಿಸುತ್ತದೆ ಮತ್ತು ಹೊಟ್ಟೆಯಿಂದ ಸುಲಭವಾಗಿ ತೆರವುಗೊಳಿಸುತ್ತದೆ. ವಿಟಮಿನ್ ಸಿ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಕಿತ್ತಳೆ ಜ್ಯೂಸ್ ಅನ್ನು ಕುಡಿದರೆ, ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ನೀವು ಇತರ ಅನೇಕ ರೋಗಗಳನ್ನು ತಡೆಯಬಹುದು. Image:Canva

    MORE
    GALLERIES

  • 57

    Constipation: ಮಲಬದ್ಧತೆಯಿಂದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಈ ಜ್ಯೂಸ್ ಕುಡಿಯಿರಿ ಆರೋಗ್ಯ ಕಾಪಾಡಿಕೊಳ್ಳಿ

    ನಿಂಬೆ ರಸ: ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ವಿಟಮಿನ್ ಸಿ ಒಂದು ಉತ್ಕರ್ಷಣ ನಿರೋಧಕ ಸಂಯುಕ್ತವಾಗಿದ್ದು ಅದು ಕರುಳಿನಲ್ಲಿ ನೀರನ್ನು ಸೆಳೆಯುತ್ತದೆ. ನೀರಿನ ಅಂಶವನ್ನು ಹೆಚ್ಚಿಸುತ್ತದೆ, ಮಲವನ್ನು ಮೃದುಗೊಳಿಸುತ್ತದೆ, ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದು ದೇಹದಲ್ಲಿ ವಿಟಮಿನ್ ಸಿ ಕೊರತೆಯನ್ನು ತಡೆಯುತ್ತದೆ. Image:Canva

    MORE
    GALLERIES

  • 67

    Constipation: ಮಲಬದ್ಧತೆಯಿಂದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಈ ಜ್ಯೂಸ್ ಕುಡಿಯಿರಿ ಆರೋಗ್ಯ ಕಾಪಾಡಿಕೊಳ್ಳಿ

    ರಾಸ್ಪ್ಬೆರಿ ಜ್ಯೂಸ್: ರಾಸ್ಪ್ಬೆರಿ ಜ್ಯೂಸ್ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ರಾಸ್ಪ್ಬೆರಿ ಜ್ಯೂಸ್ ನಿಮಗೆ ಮಲಬದ್ಧತೆ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. Image:Canva

    MORE
    GALLERIES

  • 77

    Constipation: ಮಲಬದ್ಧತೆಯಿಂದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಈ ಜ್ಯೂಸ್ ಕುಡಿಯಿರಿ ಆರೋಗ್ಯ ಕಾಪಾಡಿಕೊಳ್ಳಿ

    ರಾಸ್ಪ್ಬೆರಿ ಜ್ಯೂಸ್ ಫೈಬರ್ನಲ್ಲಿ ಸಮೃದ್ಧವಾಗಿದೆ. ನಾರಿನ ಹೊರತಾಗಿ, ಈ ರಸವು ಸೋರ್ಬಿಟೋಲ್ ಅನ್ನು ಹೊಂದಿರುತ್ತದೆ, ಇದು ಮಲವನ್ನು ಮೃದುಗೊಳಿಸುತ್ತದೆ. ಇದರಿಂದ ಮಲ ಸುಲಭವಾಗಿ ಹೊರಹೋಗುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES