ಇತ್ತೀಚಿನ ದಿನಗಳಲ್ಲಿ ತಾಮ್ರದ ಬಾಟಲಿಗಳು ಜನಪ್ರಿಯವಾಗುತ್ತಿವೆ. ಪ್ಲಾಸ್ಟಿಕ್ ಬಾಟಲಿಗಳು ಅಥವಾ ಗಾಜಿನ ಬಾಟಲಿಗಳ ಬದಲಿಗೆ, ಅನೇಕ ಮಂದಿ ತಾಮ್ರದ ಬಾಟಲಿಗಳಲ್ಲಿ ನೀರು ಕುಡಿಯಲು ಆರಂಭಿಸಿದ್ದಾರೆ. ತಾಮ್ರವು ನಮ್ಮ ದೇಹದಲ್ಲಿನ ವಿವಿಧ ಕಾರ್ಯಗಳಿಗೆ ಸಹಾಯಕವಾಗಿದೆ. ತಾಮ್ರವು ಕೆಂಪು ರಕ್ತ ಕಣಗಳು, ಆರೋಗ್ಯಕರ ಮೂಳೆಗಳು ಮತ್ತು ಸಂಯೋಜಕ ಅಂಗಾಂಶಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
ತಾಮ್ರದ ಬಾಟಲ್ ನೀರನ್ನು ಪ್ರತಿದಿನ ಕುಡಿಯುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು? ಆಹಾರ ಪೂರಕಗಳ ಕುರಿತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಟಿಸಿದ ವರದಿಯ ಪ್ರಕಾರ, ತಾಮ್ರದ ಬಾಟಲಿಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಆದರೆ ಎಲ್ಲಾ ಸಮಯದಲ್ಲೂ ಅಲ್ಲ. ಏಕೆಂದರೆ ತಾಮ್ರವು ದೇಹಕ್ಕೆ ವಿಷಕಾರಿಯಾಗಿದೆ. ಹಾಗೆಯೇ ತಾಮ್ರದ ಬಾಟಲಿಗಳಲ್ಲಿ ನೀರನ್ನು ಸದಾ ಶೇಖರಿಸಿಟ್ಟರೆ ಬಾಟಲ್ ಸುಲಭವಾಗಿ ತುಕ್ಕು ಹಿಡಿಯುತ್ತದೆ. ನಾವು ತುಕ್ಕು ಹಿಡಿದ ಬಾಟಲಿಯ ನೀರನ್ನು ಕುಡಿದಾಗ, ಅದು ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ನೀವು ಪ್ರತಿದಿನ ತಾಮ್ರದ ಬಾಟಲಿಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿದಾಗ, ತಾಮ್ರ ಎಂಬ ಅಂಶವು ರಕ್ತದಲ್ಲಿ ಬೆರೆಯಲು ಪ್ರಾರಂಭಿಸುತ್ತದೆ. ಇದು ಕಾಲಾನಂತರದಲ್ಲಿ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಅದನ್ನು ಉಸಿರಾಡಿದಾಗ, ಅದು ಮೂಗು ಮತ್ತು ಗಂಟಲನ್ನು ಕೆರಳಿಸುತ್ತದೆ. ಇದಲ್ಲದೆ, ನೀವು ತಲೆತಿರುಗುವಿಕೆ ಮತ್ತು ತಲೆನೋವು ಅನುಭವಿಸಬಹುದು.
ಇದನ್ನು ತಪ್ಪಿಸುವುದು ಹೇಗೆ? ತಾಮ್ರದ ಬಾಟಲಿಗಳಿಂದ ಉಂಟಾಗುವ ಹಾನಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ತಾಮ್ರದ ಬಾಟಲಿಯಲ್ಲಿ ಮಿತವಾಗಿ ನೀರು ಕುಡಿಯುವುದು. ತಾಮ್ರದ ಬಾಟಲಿಗಳಲ್ಲಿ ಸಂಗ್ರಹಿಸಿಟ್ಟ ನೀರನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಮಾತ್ರ ಕುಡಿಯಿರಿ. ದಿನವಿಡೀ ಈ ನೀರನ್ನು ಕುಡಿಯುವುದು ಒಳ್ಳೆಯದಲ್ಲ. ಇಲ್ಲದಿದ್ದರೆ, ನೀವು ಲಾಭದ ಬದಲು ನಷ್ಟವನ್ನು ಅನುಭವಿಸುವಿರಿ. ಅಲ್ಲದೇ ತಾಮ್ರದ ಬಾಟಲಿಯಲ್ಲಿ ನೀರನ್ನು ಹಾಕಿದ ನಂತರ 6 ರಿಂದ 8 ಗಂಟೆಗಳ ನಂತರ ನೀರನ್ನು ಕುಡಿಯಲು ಸೂಚಿಸಲಾಗುತ್ತದೆ.