Health Tips: ನಿಮ್ಮ ಮಕ್ಕಳಿಗೆ ಹೆಚ್ಚಾಗಿ ಜ್ಯೂಸ್ ಕೊಡಿಸ್ತೀರಾ? ಹಾಗಾದ್ರೆ ಈ ವಿಚಾರ ನೀವು ತಿಳಿದುಕೊಳ್ಳಲೇಬೇಕು!

ಜ್ಯೂಸ್​ಗೆ ಸಕ್ಕರೆ ಬೆರೆಸುವುದರಿಂದ ಮಕ್ಕಳಲ್ಲಿ ಮಧುಮೇಹ ಮತ್ತು ಬೊಜ್ಜು ಮುಂತಾದ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ನೀವು ಮಕ್ಕಳಿಗೆ ನೀಡುವ ಜ್ಯೂಸ್ ಯಾವುದೇ ಆಗಿದ್ದರೂ ಅದು ಆರೋಗ್ಯಕರವೇ ಅಥವಾ ಇಲ್ಲವೇ ಎಂಬುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಏಕೆಂದರೆ ಅನೇಕ ಜ್ಯೂಸ್ಗಳು ಮಕ್ಕಳ ಆರೋಗ್ಯಕ್ಕೆ ಹಾನಿಕರಕ. ಈ ವಿಚಾರ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ಓದಿ.

First published:

  • 16

    Health Tips: ನಿಮ್ಮ ಮಕ್ಕಳಿಗೆ ಹೆಚ್ಚಾಗಿ ಜ್ಯೂಸ್ ಕೊಡಿಸ್ತೀರಾ? ಹಾಗಾದ್ರೆ ಈ ವಿಚಾರ ನೀವು ತಿಳಿದುಕೊಳ್ಳಲೇಬೇಕು!

    ಅನೇಕ ಪೋಷಕರು ಮಕ್ಕಳಿಗೆ ಬೆಳಗಿನ ಉಪಾಹಾರಕ್ಕೆ ಏನು ಕೊಡಬೇಕೆಂದು ಚಿಂತಿಸುತ್ತಿರುತ್ತಾರ. ಈ ವೇಳೆ ಫ್ರೂಟ್ ಜ್ಯೂಸ್ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಭಾವಿಸಿ ನೀಡುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಪೋಷಣೆ ಇಲ್ಲ. ಏಕೆಂದರೆ ಜ್ಯೂಸ್ ಮಾಡುವಾಗ ಹಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ.

    MORE
    GALLERIES

  • 26

    Health Tips: ನಿಮ್ಮ ಮಕ್ಕಳಿಗೆ ಹೆಚ್ಚಾಗಿ ಜ್ಯೂಸ್ ಕೊಡಿಸ್ತೀರಾ? ಹಾಗಾದ್ರೆ ಈ ವಿಚಾರ ನೀವು ತಿಳಿದುಕೊಳ್ಳಲೇಬೇಕು!

    ಇದಲ್ಲದೇ, ಜ್ಯೂಸ್ಗೆ ಸಕ್ಕರೆ ಬೆರೆಸುವುದರಿಂದ ಮಕ್ಕಳಲ್ಲಿ ಮಧುಮೇಹ ಮತ್ತು ಬೊಜ್ಜು ಮುಂತಾದ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ನೀವು ಮಕ್ಕಳಿಗೆ ನೀಡುವ ಜ್ಯೂಸ್ ಯಾವುದೇ ಆಗಿದ್ದರೂ ಅದು ಆರೋಗ್ಯಕರವೇ ಅಥವಾ ಇಲ್ಲವೇ ಎಂಬುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಏಕೆಂದರೆ ಅನೇಕ ಜ್ಯೂಸ್ಗಳು ಮಕ್ಕಳ ಆರೋಗ್ಯಕ್ಕೆ ಹಾನಿಕರಕ. ಈ ವಿಚಾರ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ಓದಿ.

    MORE
    GALLERIES

  • 36

    Health Tips: ನಿಮ್ಮ ಮಕ್ಕಳಿಗೆ ಹೆಚ್ಚಾಗಿ ಜ್ಯೂಸ್ ಕೊಡಿಸ್ತೀರಾ? ಹಾಗಾದ್ರೆ ಈ ವಿಚಾರ ನೀವು ತಿಳಿದುಕೊಳ್ಳಲೇಬೇಕು!

    ಮಕ್ಕಳಿಗೆ ಹಾನಿಕಾರಕ ಜ್ಯೂಸ್ಗಳು: ಏಷ್ಯನ್ ಪೋಷಕರ ಪ್ರಕಾರ, ನೀವು ನಿಮ್ಮ ಮಗುವಿಗೆ ಕೆಫೀನ್ ಸಮೃದ್ಧವಾಗಿರುವ ಏನನ್ನೂ ನೀಡಬಾರದು. ನಿಮ್ಮ ಮಕ್ಕಳು ಕಾಫಿ ಅಥವಾ ಎನರ್ಜಿ ಡ್ರಿಂಕ್ಸ್ ಅನ್ನು ಇಷ್ಟಪಡುತ್ತಿದ್ದರೆ, ನೀವು ಅದನ್ನು ನೀಡುವುದನ್ನು ಕಡಿಮೆ ಮಾಡಬೇಕು. ಏಕೆಂದರೆ ಈ ಪಾನೀಯಗಳು ಮಗುವಿನಲ್ಲಿ ಆತಂಕ, ನಿದ್ರಾಹೀನತೆಯಂತಹ ಅನೇಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ನಿಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಕಡಿಮೆ ಪಾನೀಯಗಳನ್ನು ನೀಡಲು ಪ್ರಯತ್ನಿಸಿ. ಇದು ಕಾರ್ಬನ್ ಡೈಆಕ್ಸೈಡ್ ಜೊತೆಗೆ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ. ಇದು ಮಗುವಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

    MORE
    GALLERIES

  • 46

    Health Tips: ನಿಮ್ಮ ಮಕ್ಕಳಿಗೆ ಹೆಚ್ಚಾಗಿ ಜ್ಯೂಸ್ ಕೊಡಿಸ್ತೀರಾ? ಹಾಗಾದ್ರೆ ಈ ವಿಚಾರ ನೀವು ತಿಳಿದುಕೊಳ್ಳಲೇಬೇಕು!

    ಪ್ಯಾಕ್ ಮಾಡಿದ ಜ್ಯೂಸ್ ನೀಡುವುದನ್ನು ನಿಲ್ಲಿಸಿ: ಸಕ್ಕರೆ-ಸಿಹಿ ಪಾನೀಯಗಳಾದ ಪ್ಯಾಕೇಜ್ಡ್ ಜ್ಯೂಸ್, ಆರೋಗ್ಯಕರ ಪಾನೀಯಗಳು ಅಥವಾ ಐಸ್ಡ್ ಟೀ ಮಕ್ಕಳಿಗೆ ಆರೋಗ್ಯಕರವಲ್ಲ. ಆದ್ದರಿಂದ ಇದನ್ನು ತಪ್ಪಿಸಲು ಪ್ರಯತ್ನಿಸಿ ಅನೇಕ ಮಕ್ಕಳು ಶಕ್ತಿ ಪಡೆಯಲು ಅಥವಾ ಕ್ರೀಡೆಯ ಸಮಯದಲ್ಲಿ ಕ್ರೀಡಾ ಪಾನೀಯಗಳನ್ನು ಸೇವಿಸುತ್ತಿದ್ದಾರೆ. ಇದು ಪೋಷಕಾಂಶಗಳು ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇಂತಹ ಪಾನೀಯಗಳಿಂದ ಮಕ್ಕಳಿಗೆ ಯಾವುದೇ ವಿಶೇಷ ಪ್ರಯೋಜನಗಳು ಆಗುವುದಿಲ್ಲ.

    MORE
    GALLERIES

  • 56

    Health Tips: ನಿಮ್ಮ ಮಕ್ಕಳಿಗೆ ಹೆಚ್ಚಾಗಿ ಜ್ಯೂಸ್ ಕೊಡಿಸ್ತೀರಾ? ಹಾಗಾದ್ರೆ ಈ ವಿಚಾರ ನೀವು ತಿಳಿದುಕೊಳ್ಳಲೇಬೇಕು!

    ಹಾಲು, ಶೇಕ್ಸ್ ಅಥವಾ ಸ್ಮೂಥಿಗಳನ್ನು ನೀಡಿ: TOI ವರದಿ ಪ್ರಕಾರ, ನೀವು ಮಕ್ಕಳಿಗೆ ಆರೋಗ್ಯಕರವಾದದ್ದನ್ನು ನೀಡಲು ಬಯಸಿದರೆ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಒಂದು ಲೋಟ ಹಾಲನ್ನು ಪ್ರತಿದಿನ ಅವರಿಗೆ ನೀಡಿ. ಬರೀ ಹಾಲಾಗಿದ್ದರೆ, ಅದಕ್ಕೆ ಬಾದಾಮಿ ಪೌಡರ್ ಅನ್ನು ಮಿಕ್ಸ್ ಮಾಡಿ ನೀಡಬಹುದು.

    MORE
    GALLERIES

  • 66

    Health Tips: ನಿಮ್ಮ ಮಕ್ಕಳಿಗೆ ಹೆಚ್ಚಾಗಿ ಜ್ಯೂಸ್ ಕೊಡಿಸ್ತೀರಾ? ಹಾಗಾದ್ರೆ ಈ ವಿಚಾರ ನೀವು ತಿಳಿದುಕೊಳ್ಳಲೇಬೇಕು!

    ಮಗುವಿಗೆ ಹಾಲು ಕುಡಿಯಲು ಇಷ್ಟವಿಲ್ಲದಿದ್ದರೆ, ಅವನಿಗೆ ಹಣ್ಣಿನ ಸ್ಮೂಥಿ ಅಥವಾ ಶೇಕ್ ನೀಡಿ, ಮಗುವಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಪರಿಮಳಕ್ಕಾಗಿ ನೀವು ಹಣ್ಣಿನ ಸ್ಮೂಥಿಗಳಿಗೆ ಬೀಜಗಳು ಮತ್ತು ಜೇನುತುಪ್ಪವನ್ನು ಸೇರಿಸಬಹುದು. ಹೆಚ್ಚುವರಿಯಾಗಿ, ನೀವು ನೈಸರ್ಗಿಕ ಪರ್ಯಾಯವನ್ನು ಹುಡುಕುತ್ತಿದ್ದರೆ, ಎಳ ನೀರು ಮಕ್ಕಳಿಗೆ ಉತ್ತಮ ಆಯ್ಕೆಯಾಗಿದೆ.

    MORE
    GALLERIES