ದಪ್ಪ ಮತ್ತು ಉದ್ದ ಕೂದಲು ಇದ್ದರೆ ಸುಂದರವಾದ ಕೂದಲು ಎಂದು ಕರೆಯಲಾಗುತ್ತದೆ. ಅಲ್ಲದೇ ಉದ್ದ ಕೂದಲು ಇದ್ದರೆ ತುಂಬಾ ಸುಂದರವಾಗಿ ಕಾಣಿಸುತ್ತದೆ. ಆದರೆ ನಿಮ್ಮ ಕೂದಲು ಬೆಳೆಯುತ್ತಿಲ್ಲವೇ? ಇದರ ಬಗ್ಗೆ ಯೋಚಿಸ್ತಿದ್ದೀರಾ? ಅಷ್ಟಕ್ಕೂ ಕೂದಲು ಬೆಳೆಯದೇ ಇರಲು ಹಲವಾರು ಕಾರಣಗಳಿದೆ. ಇದು ಹವಾಮಾನ, ಕೂದಲಿನ ಆರೈಕೆಗೆ ತಪ್ಪಾದ ಉತ್ಪನ್ನಗಳನ್ನು ಬಳಸುವುದು ಮತ್ತು ದುಬಾರಿ ಚಿಕಿತ್ಸೆ ನೀಡುವುದಾಗಿರುತ್ತದೆ.
ಕೂದಲಿಗೆ ಎಣ್ಣೆ ಹಚ್ಚುವುದು ತುಂಬಾ ಒಳ್ಳೆಯದು ಎಂದು ನಾವು ಹಲವಾರು ವರ್ಷಗಳಿಂದ ಕೇಳುತ್ತಿದ್ದೇವೆ. ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಕಾಣುತ್ತದೆ. ಅದಕ್ಕಾಗಿಯೇ ನಿಮ್ಮ ಕೂದಲಿಗೆ ಎಣ್ಣೆ ಹಾಕಬೇಕು ಎಂದು ತಾಯಂದಿರು ಯಾವಾಗಲೂ ನಿಮಗೆ ಸಲಹೆ ನೀಡುತ್ತಲೇ ಇರುತ್ತಾರೆ. ಉದ್ದ ಕೂದಲಿಗೆ ಎಣ್ಣೆಗಿಂತ ಉತ್ತಮ ಪರಿಹಾರವಿಲ್ಲ. ಇಂದು ನಾವು ಸಾಸಿವೆ ಎಣ್ಣೆಯ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಸಾರಭೂತ ತೈಲಗಳು ಕೂದಲಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಷ್ಟಕ್ಕೂ ಯಾವ ಎಣ್ಣೆಯಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಎಂದು ತಿಳಿದುಕೊಳ್ಳಬೇಕೆ? ಹಾಗಾದರೆ ಈ ಸ್ಟೋರಿಯನ್ನು ಓದಿ.
ಕೂದಲು ಆರೋಗ್ಯವಾಗಿರಲು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆದ್ದರಿಂದ ಕೂದಲಿನ ಪ್ರಕಾರಕ್ಕೆ ಅನುಗುಣವಾಗಿ ತೊಳೆಯಿರಿ. ನೈಸರ್ಗಿಕ ಕೂದಲು ಉತ್ಪನ್ನಗಳನ್ನು ಬಳಸಿ. ನೀವು ಮೊಸರು ಮತ್ತು ಮೊಟ್ಟೆಯನ್ನು ಅನ್ವಯಿಸಬಹುದು. ಅಲೋವೆರಾ ಜೆಲ್ ಕೂಡ ಕೂದಲಿಗೆ ಒಳ್ಳೆಯದು. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ.)