House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ

ಎಷ್ಟೋ ಜನರಿಗೆ ಮನೆಯ ನೆಲ ಸ್ವಚ್ಛವಾಗಿರಬೇಕು, ಸ್ವಲ್ಪವೂ ಕಲೆ ಇರಬಾರದೆಂಬ ಆಸೆ ಇರುತ್ತದೆ. ಆದರೆ ಕೆಲವೊಂದು ಬಾರಿ ಮನೆಯ ನೆಲದಲ್ಲಾ ಕಲೆಗಳು ಹೋಗುವುದೇ ಇಲ್ಲ. ಆದರೆ ಈ ಲೇಖನದಲ್ಲಿ ನೀಡಿರುವ ಕೆಲವು ಟಿಪ್ಸ್ ಪ್ರಕಾರ ಮನೆಯ ನೆಲವನ್ನು ಫಳಫಳ ಅಂತ ಹೊಳೆಯುವಂತೆ ಮಾಡ್ಬಹುದು.

First published:

  • 18

    House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ

    ಯಾರೇ ಆಗಲಿ ಮನೆಯೆಂದಾಗ ಸ್ವಚ್ಛವಾಗಿಟ್ಟುಕೊಳ್ಳಬೇಕು ಅಂದುಕೊಂಡಿರುತ್ತಾರೆ. ಆದರೆ ಕೆಲವೊಂದು ಬಾರಿ ಎಷ್ಟೇ ಕ್ಲೀನ್​ ಮಾಡಿದ್ರೂ ನಮಗೆ ಗೊತ್ತಿಲ್ಲದ ಹಾಗೆಯೇ ಕಲೆಯಾಗಿಬಿಡುತ್ತೆ. ಇದನ್ನು ಕ್ಲೀನ್​ ಮಾಡಲೆಂದು ಎಷ್ಟೋ ಜನರು ಹರಸಾಹಸ ಪಡುತ್ತಾರೆ.

    MORE
    GALLERIES

  • 28

    House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ

    ಸಾಮಾನ್ಯವಾಗಿ ಜನರು ಮನೆಯ ನೆಲದಲ್ಲಾದ ಮಣ್ಣಿನ ಕಲೆಯಿಂದ, ಧೂಳಿನಿಂದ ತುಂಬಾ ಅಸಮಾಧಾನಗೊಳ್ಳುತ್ತಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು  ಬಹಳಷ್ಟು ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಈ ಲೇಖನದಲ್ಲಿ ನೀಡಲಾದ ಕೆಲವು ಸಲಹೆಗಳು ನಿಮಗೆ ತುಂಬಾ ಉಪಯುಕ್ತವಾಗಬಹುದು. ಇದರ ಸಹಾಯದಿಂದ ನಿಮ್ಮ ಮನೆಯ ನೆಲವನ್ನು ಹೊಳೆಯುವಂತೆ ಮಾಡ್ಬಹುದು.

    MORE
    GALLERIES

  • 38

    House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ

    ನೀವು ಮನೆಯ ನೆಲವನ್ನು ಹೊಳೆಯುವಂತೆ ಮಾಡಲು ಬಯಸಿದರೆ, ಒಂದು ಬಕೆಟ್ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಬಳಿಕ ನೆಲವನ್ನು ಸ್ವಚ್ಛಗೊಳಿಸಿದೆ. ಈ ರೀತಿ ಮಾಡುವುದರಿಂದ ನೆಲವನ್ನು ಹೊಳೆಯುವಂತೆ ಮಾಡುವುದಲ್ಲದೆ ನೆಲದಲ್ಲಿದ್ದ ಹಳದಿ ಬಣ್ಣವನ್ನು ಸಹ ಹೋಗಲಾಡಿಸಬಹುದು.

    MORE
    GALLERIES

  • 48

    House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ

    ನೆಲವನ್ನು ಹೊಳೆಯುವಂತೆ ಮಾಡಲು ನೀವು ಅಡುಗೆ ಸೋಡಾವನ್ನು ಸಹ ಬಳಸಬಹುದು. ಅಡುಗೆ ಸೋಡಾದ ಪುಡಿಯನ್ನು ಒಂದು ಮಗ್ ನೀರಿನಲ್ಲಿ ಬೆರೆಸಿ ಹತ್ತಿ ಬಟ್ಟೆಯನ್ನು ಅದ್ದಿ ನೆಲವನ್ನು ಅಥವಾ ಕಲೆ ಆದ ಜಾಗದಲ್ಲಿ ಸ್ವಚ್ಛಗೊಳಿಸಿ. ಈ ರೀತಿ ಮಾಡುವುದರಿಂದ ನೆಲವನ್ನು ಬೇಗನೆ ಸ್ವಚ್ಛಗೊಳಿಸಬಹುದು. ಅಲ್ಲದೆ ಕಲೆಗಳನ್ನು ಸಹ ತೆಗೆದುಹಾಕಬಹುದು.

    MORE
    GALLERIES

  • 58

    House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ

    ಒಂದು ಮಗ್ ನೀರಿನಲ್ಲಿ ಸೀಮೆಎಣ್ಣೆ ಮಿಕ್ಸ್​ ಮಾಡಿ. ನಂತರ ಆ ಬಕೆಟ್​ನಲ್ಲಿ ಹತ್ತಿ ಬಟ್ಟೆಯನ್ನು ನೆನೆಸಿಡಿ. ಬಳಿಕ ನೆಲದ ಮೇಲಿರುವ ಕಲೆಗಳನ್ನು ಆ ಬಟ್ಟೆಯಿಂದ ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಿದ ನಂತರ, ಉಗುರು ಬೆಚ್ಚಗಿನ ನೀರಿನಿಂದ ನೆಲವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನೆಲವನ್ನು ಸ್ವಚ್ಚವಾಗಿಡಬಹುದು.

    MORE
    GALLERIES

  • 68

    House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ

    ಇನ್ನು ಈ ರೀತಿಯ ವಸ್ತುಗಳನ್ನೆಲ್ಲಾ ಬಳಸಿ ತೆಳುವಾದ ಬಟ್ಟೆಯಿಂದ ನೆಲವನ್ನು ಒರಸಬೇಡಿ. ಬದಲಿಗೆ ದಪ್ಪವಾದ ಬಟ್ಟೆಯಿಂದ ಒರೆಸಿ. ತೆಳುವಾದ ಬಟ್ಟೆಯಿಂದ ಒರೆಸಿದರೆ ಬಟ್ಟೆ ಹರಿದು ಹೋಗಬಹುದು.

    MORE
    GALLERIES

  • 78

    House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ

    ಇನ್ನು ನೆಲವನ್ನು ಒರೆಸುವಾಗ ಹೆಚ್ಚು ನೀರಿನ ಅಂಶವನ್ನು ಬಳಸಬೇಡಿ. ಇದರಿಂದ ಕೆಲವೊಂದು ಕಡೆಗಳಲ್ಲಿ ಕಲೆ ಹಾಗೆನೇ ಉಳಿದುಕೊಳ್ಳುತ್ತದೆ. ಹಾಗೆಯೇ ಈ ನೀರು ಬೇಗನೆ ಒಣಗುವುದಿಲ್ಲ ಇದರಿಂದ ಮಕ್ಕಳು ಓಡಾಡುವ ಸಂದರ್ಭದಲ್ಲಿ ಜಾಗರೂಕರಾಗಿರಬೇಕು.

    MORE
    GALLERIES

  • 88

    House Cleaning Tips: ನೆಲ ಫಳಫಳ ಹೊಳಿಬೇಕು ಅಂದ್ರೆ ನೀರಿಗೆ ಈ ವಸ್ತು ಮಿಕ್ಸ್ ಮಾಡಿ

    (Disclaimer: ಮೇಲಿನ ಲೇಖನದ ವರದಿಯು ತಜ್ಞರು ಹೇಳಿರುವ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ

    MORE
    GALLERIES