ಬೇಸಿಗೆಯಲ್ಲಿ ಕೂಲ್ ಆಗಿರುವ ಪದಾರ್ಥ ಯಾವುದು ಎಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಮೊದಲು ಐಸ್ ಕ್ರೀಮ್. ಅಷ್ಟಕ್ಕೂ ಐಸ್ ಕ್ರೀಮ್ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ, ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಇನ್ನೂ ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಮಗೆ ಬಿಸಿಲಿನಿಂದ ರಿಲೀಫ್ ಸಿಕ್ಕಂತೆ ಆಗುತ್ತದೆ. ಆದರೆ ಅಂಗಡಿಯಲ್ಲಿ ಸಿಗುವ ಐಸ್ ಕ್ರೀಮ್ನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಇದು ನಿಮ್ಮ ದೇಹದ ತೂಕವನ್ನು ಹೆಚ್ಚಿಸಬಹುದು.
ನಂತರ ಇದಕ್ಕೆ ಕತ್ತರಿಸಿದ ಬಾದಾಮಿ ಮತ್ತು ಗೋಡಂಬಿ ಸೇರಿಸಿ ಇನ್ನೊಂದರೆಡು ನಿಮಿಷ ಕುದಿಸಿ. ಬಳಿಕ ಸ್ಟವ್ ಆಫ್ ಮಾಡಿ. ಐಸ್ ಕ್ರೀಮ್ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಐಸ್ ಕ್ರೀಮ್ ಮಿಶ್ರಣಕ್ಕೆ ಸೇಬು ತುರಿದು ಮಿಕ್ಸ್ ಮಾಡಿ, ಪ್ಲೇಟ್ ಮುಚ್ಚಿ 3-4 ಗಂಟೆಗಳ ಕಾಲ ಅದನ್ನು ಫ್ರಿಜ್ನಲ್ಲಿಡಿ. ಇದೀಗ ಆಪಲ್ ಐಸ್ ಕ್ರೀಮ್ ಅನ್ನು ಹೊರತೆಗೆದು ಅದರ ಮೇಲೆ ಪುದೀನಾದ ಮೂಲಕ ಅಲಂಕರಿಸಿದರೆ, ರುಚಿಕರವಾದ ಆಪಲ್ ಐಸ್ ಕ್ರೀಮ್ ಸವಿಯಲು ಸಿದ್ಧ.
ಬ್ಲೂಬೆರ್ರಿ ಐಸ್ ಕ್ರೀಮ್ ಮಾಡುವ ವಿಧಾನ : ಬೌಲ್‌ನಲ್ಲಿ ಬ್ಲೂಬೆರ್ರಿ, ನಿಂಬೆ ಸಿಪ್ಪೆ, ನಿಂಬೆ ರಸ ಮತ್ತು ಮೊಟ್ಟೆಯ ಬಿಳಿಭಾಗವನ್ನು ಮಿಕ್ಸ್ ಮಾಡಿ. ನಂತರ ಇವೆಲ್ಲವನ್ನು ಚೆನ್ನಾಗಿ ಮ್ಯಾಶ್ ಮಾಡಿ. ಬಳಿಕ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ದೊಡ್ಡ ಬಟ್ಟಲಿಗೆ ಈ ಮಿಶ್ರಣವನ್ನು ಸುರಿದು. ಫ್ರಿಜ್‌ನಲ್ಲಿ ಒಂದು ಗಂಟೆಗಳ ಕಾಲ ತಣ್ಣಗಾಗಲು ಇಡಿ. ಇದೀಗ ಕೂಲ್ ಆಗಿರುವ ಬ್ಲೂಬೆರ್ರಿ ಐಸ್ ಕ್ರೀಮ್ ಅನ್ನು ತಿನ್ನಿ.
ಮ್ಯಾಂಗೋ ಹನಿ ಪಿಸ್ತಾ ಐಸ್ ಕ್ರೀಮ್ ಮಾಡುವ ವಿಧಾನ: ಚಮಚದೊಂದಿಗೆ ಮಾವಿನ ತಿರುಳನ್ನು ಸಂಗ್ರಹಿಸಿ, ಸಕ್ಕರೆ ಮತ್ತು ಹಾಲಿನೊಂದಿಗೆ ಬ್ಲೆಂಡರ್ನಲ್ಲಿ ಹಾಕಿ. ಸಕ್ಕರೆ ಕರಗುವ ತನಕ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಬಟ್ಟಲಿನಲ್ಲಿ, ಹಾಲಿನ ಕೆನೆ, ಜೇನುತುಪ್ಪ ಮತ್ತು ಗಟ್ಟಿ ಹಾಲು ಹಾಕಿ ಒಂದು ನಿಮಿಷದವರೆಗೂ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಬೆರೆಸಿ.