Lemon Peels: ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ, ಮನೆಯಲ್ಲಿರುವ 7 ವಸ್ತುಗಳ ಕ್ಲೀನಿಂಗ್​ಗೆ ಇದೇ ಬೆಸ್ಟ್

How to use Lemon Peels: ಬೇಸಿಗೆಯಲ್ಲಿ ಮಾತ್ರವಲ್ಲ ಎಲ್ಲಾ ಸೀಸನ್ ನಲ್ಲೂ ಭಾರತೀಯರು ನಿಂಬೆಯನ್ನು ಬಳಸುತ್ತಾರೆ. ಅದರಲ್ಲೂ ಬೇಸಿಗೆಯ ಧಗೆಯಿಂದ ಬಚಾವ್ ಆಗಲು ನಿಂಬೆ ಜ್ಯೂಸ್ ಯಾರಿಗೆ ಇಷ್ಟವಾಗೋಲ್ಲ ಹೇಳಿ. ನಿಂಬೆ ರಸ ಮಾತ್ರವಲ್ಲ, ನಿಂಬೆ ಸಿಪ್ಪೆಯಿಂದಲೂ ಹಲವು ಪ್ರಯೋಜನಗಳಿವೆ. ಮನೆಯ ಕ್ಲೀನಿಂಗ್ ನಲ್ಲಿ ನಿಂಬೆ ಸಿಪ್ಪೆಯನ್ನು ಹಲವು ರೀತಿಗಳಲ್ಲಿ ಬಳಸಬಹುದು. ನಿಂಬೆ ಸಿಪ್ಪೆಯನ್ನು ಬಿಸಾಡುವ ಬದಲು ಹೀಗೆ ಬಳಸಿ.

First published:

  • 17

    Lemon Peels: ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ, ಮನೆಯಲ್ಲಿರುವ 7 ವಸ್ತುಗಳ ಕ್ಲೀನಿಂಗ್​ಗೆ ಇದೇ ಬೆಸ್ಟ್

    ಇರುವೆಗಳಿಂದ ಮುಕ್ತಿ: ಮನೆಯಲ್ಲಿರುವ ಇರುವೆಗಳ ಸಮಸ್ಯೆಯನ್ನು ಹೋಗಲಾಡಿಸಲು ನಿಂಬೆ ಸಿಪ್ಪೆಯನ್ನು ಬಳಸಬಹುದು. ಇರುವೆಗಳು ಇರುವ ಸ್ಥಳದಲ್ಲಿ ನಿಂಬೆ ಸಿಪ್ಪೆಗಳನ್ನು ಇರಿಸಿ. ಸ್ವಲ್ಪ ಸಮಯದಲ್ಲಿ ಇರುವೆಗಳು ಕಣ್ಮರೆಯಾಗುತ್ತವೆ.

    MORE
    GALLERIES

  • 27

    Lemon Peels: ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ, ಮನೆಯಲ್ಲಿರುವ 7 ವಸ್ತುಗಳ ಕ್ಲೀನಿಂಗ್​ಗೆ ಇದೇ ಬೆಸ್ಟ್

    ಕಲೆಗಳನ್ನು ಸ್ವಚ್ಛಗೊಳಿಸಿ: ಕಪ್ ಮೇಲಿನ ಕಲೆಗಳನ್ನು ಸ್ವಚ್ಛಗೊಳಿಸಲು ನಿಂಬೆ ಸಿಪ್ಪೆಗಳನ್ನು ಬಳಸುವುದು ಉತ್ತಮ. ಇದಕ್ಕಾಗಿ ನೀರು ತುಂಬಿದ ಕಪ್ ನಲ್ಲಿ ನಿಂಬೆ ಸಿಪ್ಪೆಯನ್ನು ಹಾಕಿ 1 ಗಂಟೆಯ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಕಪ್ ಮೇಲಿನ ಕಲೆ ಸುಲಭವಾಗಿ ನಿವಾರಣೆಯಾಗುತ್ತದೆ.

    MORE
    GALLERIES

  • 37

    Lemon Peels: ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ, ಮನೆಯಲ್ಲಿರುವ 7 ವಸ್ತುಗಳ ಕ್ಲೀನಿಂಗ್​ಗೆ ಇದೇ ಬೆಸ್ಟ್

    ಮೈಕ್ರೊವೇವ್ ಶೈನ್ ಆಗುತ್ತೆ: ಮೈಕ್ರೋವೇವ್ ಅನ್ನು ಸ್ವಚ್ಛಗೊಳಿಸಲು ನೀವು ನಿಂಬೆ ಸಿಪ್ಪೆಯ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಒಂದು ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ನಿಂಬೆ ಸಿಪ್ಪೆಯನ್ನು ಹಾಕಿ ಬಿಸಿಯಾಗಲು ಇಡಿ. ಈ ಸಂದರ್ಭದಲ್ಲಿ, ನೀರಿನಿಂದ ಹೊರಬರುವ ಹಬೆ ಮೈಕ್ರೊವೇವ್ ಅನ್ನು ಆವರಿಸುತ್ತದೆ. ನಂತರ ಬಟ್ಟೆಯಿಂದ ಒರೆಸಿದರೆ ಮೈಕ್ರೋವೇವ್ ಹೊಳೆಯುತ್ತದೆ.

    MORE
    GALLERIES

  • 47

    Lemon Peels: ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ, ಮನೆಯಲ್ಲಿರುವ 7 ವಸ್ತುಗಳ ಕ್ಲೀನಿಂಗ್​ಗೆ ಇದೇ ಬೆಸ್ಟ್

    ಪಾತ್ರೆಗಳನ್ನು ಪಾಲಿಶ್ ಮಾಡಿ: ಅಡುಗೆ ಮನೆಯಲ್ಲಿ ಇಟ್ಟಿರುವ ಪಾತ್ರೆಗಳನ್ನು ನಿಂಬೆ ಸಿಪ್ಪೆಯಿಂದ ಸುಲಭವಾಗಿ ಪಾಲಿಶ್ ಮಾಡಬಹುದು. ಇದಕ್ಕಾಗಿ ನಿಂಬೆಹಣ್ಣಿನ ಸಿಪ್ಪೆಗೆ ಉಪ್ಪನ್ನು ಹಚ್ಚಿ ಪಾತ್ರೆಗಳ ಮೇಲೆ ಉಜ್ಜಿ. ಪಾತ್ರೆಗಳನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಉಪ್ಪಿನ ಬದಲು, ನೀವು ಅಡಿಗೆ ಸೋಡಾವನ್ನು ಸಹ ಬಳಸಬಹುದು.

    MORE
    GALLERIES

  • 57

    Lemon Peels: ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ, ಮನೆಯಲ್ಲಿರುವ 7 ವಸ್ತುಗಳ ಕ್ಲೀನಿಂಗ್​ಗೆ ಇದೇ ಬೆಸ್ಟ್

    ಮನೆಯಲ್ಲಿನ ದುರ್ನಾತವನ್ನು ಹೋಗಲಾಡಿಸಬಹುದು : ಮನೆಯ ವಾಸನೆ ಹೋಗಲಾಡಿಸಲು ನಿಂಬೆ ಸಿಪ್ಪೆಯನ್ನೂ ಬಳಸಬಹುದು. ನಿಂಬೆ ಸಿಪ್ಪೆಯನ್ನು ಡಸ್ಟ್ ಬಿನ್ ಅಥವಾ ಇತರ ವಾಸನೆ ಬರುವ ಸ್ಥಳಗಳಲ್ಲಿ ಇಡುವುದರಿಂದ ವಾಸನೆ ಮಾಯವಾಗುತ್ತದೆ. ನಿಂಬೆ ಸಿಪ್ಪೆಗಳು ಫ್ರಿಜ್ ಅನ್ನು ವಾಸನೆಯಿಲ್ಲದಂತೆ ಮಾಡಬಹುದು.

    MORE
    GALLERIES

  • 67

    Lemon Peels: ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ, ಮನೆಯಲ್ಲಿರುವ 7 ವಸ್ತುಗಳ ಕ್ಲೀನಿಂಗ್​ಗೆ ಇದೇ ಬೆಸ್ಟ್

    ಕಟಿಂಗ್ ಬೋರ್ಡ್ ಅನ್ನು ಸ್ವಚ್ಛಗೊಳಿಸಿ: ನಿಂಬೆ ಸಿಪ್ಪೆಗಳಿಂದ ನೀವು ತರಕಾರಿ ಕತ್ತರಿಸುವ ಬೋರ್ಡ್ ಅನ್ನು ಸ್ವಚ್ಛಗೊಳಿಸಬಹುದು. ಕತ್ತರಿಸುವ ಬೋರ್ಡ್ ಮೇಲೆ ನಿಂಬೆ ಸಿಪ್ಪೆಗಳನ್ನು ಉಜ್ಜಿ ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದು ನಿಮ್ಮ ಕಟಿಂಗ್ ಬೋರ್ಡ್ ಅನ್ನು ಕ್ಲೀನ್ ಮಾಡುತ್ತದೆ ಮತ್ತು ಬ್ಯಾಕ್ಟೀರಿಯಾ ಮುಕ್ತಗೊಳಿಸುತ್ತದೆ.

    MORE
    GALLERIES

  • 77

    Lemon Peels: ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ, ಮನೆಯಲ್ಲಿರುವ 7 ವಸ್ತುಗಳ ಕ್ಲೀನಿಂಗ್​ಗೆ ಇದೇ ಬೆಸ್ಟ್

    ಚರ್ಮಕ್ಕೆ ಹೊಳಪು ತಂದುಕೊಡುತ್ತೆ: ನಿಂಬೆ ಸಿಪ್ಪೆ ಚರ್ಮಕ್ಕೆ ಅತ್ಯುತ್ತಮ ಬ್ಲೀಚಿಂಗ್ ಏಜೆಂಟ್ ಎಂದು ಪರಿಗಣಿಸಲಾಗುತ್ತದೆ. ನಿಂಬೆ ಸಿಪ್ಪೆಯನ್ನು ಮೊಣಕೈ ಮತ್ತು ಹಿಮ್ಮಡಿಗಳ ಮೇಲೆ ಉಜ್ಜಿಕೊಳ್ಳಿ. ಇದು ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕಲಾಗುತ್ತದೆ. ಅದರಿಂದ ನಿಮ್ಮ ಚರ್ಮವು ತಾಜಾವಾಗಿ ಕಾಣುತ್ತದೆ.

    MORE
    GALLERIES