ಹಿಂದೆ ಮಕ್ಕಳು ತಮ್ಮ ಉಳಿತಾಯದ ಹಣವನ್ನು ಹುಂಡಿಗೆ ಹಾಕುತ್ತಿದ್ದರು. ಆದರೆ ಕಾಲಾನಂತರದಲ್ಲಿ ಹಣವನ್ನು ನಿರ್ವಹಿಸುವ ಹೊಸ ವಿಧಾನಗಳು ಜಾರಿಗೆ ಬಂದವು. ಖಾಸಗಿ ಬ್ಯಾಂಕ್ ಖಾತೆಗಳು ಮತ್ತು ಡೆಬಿಟ್ ಕಾರ್ಡ್ಗಳು ಈಗ ಜನಪ್ರಿಯವಾಗಿವೆ. ಇವುಗಳನ್ನು ಮಕ್ಕಳಿಗೆ ಸಂಪೂರ್ಣವಾಗಿ ಪರಿಚಯಿಸಬೇಕು. ಈ ಆಧುನಿಕ ವಿಧಾನವನ್ನು ಹೇಗೆ ಅನುಸರಿಸಬೇಕೆಂದು ಅವರಿಗೆ ಕಲಿಸಿ. ಹೀಗೆ ಮಾಡುವುದರಿಂದ ಮಕ್ಕಳು ತಮ್ಮ ಹಣವನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.