Dosa Making Tips: ಕಾವಲಿಗೆ ಅಂಟಿಕೊಳ್ಳದಂತೆ ದೋಸೆಯನ್ನು ತೆಗೆಯೋದು ಹೇಗೆ? ಇಲ್ಲಿವೆ ಅಮ್ಮ ಹೇಳಿಕೊಟ್ಟ ಟಿಪ್ಸ್

Dosa And Tawa: ಮನೆಯಲ್ಲಿದ್ದರೆ ತಟ್ಟೆ ತಟ್ಟೆಗೆ ಬಿಸಿ ಬಿಸಿ ದೋಸೆ ಬಂದು ಬೀಳುತ್ತಿರುತ್ತದೆ. ಮಕ್ಕಳದ್ದು ತಿನ್ನೋದು ಮಾತ್ರ ಕೆಲಸ ಆಗಿರುತ್ತದೆ. ಕೆಲಸ ಅಥವಾ ಶಿಕ್ಷಣಕ್ಕಾಗಿ ಮನೆಯಿಂದ ದೂರು ಇರೋರು ತಾವು ವಾಸವಿರುವ ಜಾಗದಲ್ಲಿ ಅಮ್ಮ ಮಾಡಿದ ಹಾಗೆ ದೋಸೆ ಮಾಡಲು ಹೋಗುತ್ತಾರೆ.

First published:

  • 17

    Dosa Making Tips: ಕಾವಲಿಗೆ ಅಂಟಿಕೊಳ್ಳದಂತೆ ದೋಸೆಯನ್ನು ತೆಗೆಯೋದು ಹೇಗೆ? ಇಲ್ಲಿವೆ ಅಮ್ಮ ಹೇಳಿಕೊಟ್ಟ ಟಿಪ್ಸ್

    ದೋಸೆ ಹಿಟ್ಟು, ಕಾವಲಿ (ತವೆ) ಎಲ್ಲವೂ ಇರುತ್ತೆ. ಆದ್ರೆ ಏನ್ ಮಾಡಿದ್ರೂ ದೋಸೆ ಮಾತ್ರ ಕಾವಲಿಯಿಂದ ಬೇರೆ ಆಗೋದಿಲ್ಲ. ತವೆ ಮೇಲಿಂದ ದೋಸೆಯನ್ನು ಪೂರ್ಣವಾಗಿ ಎತ್ತೋದು ದೊಡ್ಡ ಸವಾಲಿನ ಕೆಲಸ ಆಗುತ್ತದೆ. ಇಂದು ನಾವು ನಿಮಗೆ ಕಾವಲಿಗೆ ದೋಸೆ ಅಂಟಿಕೊಳ್ಳದಂತೆ ಹೇಗೆ ತೆಗೆಯಬೇಕು ಅನ್ನೋದನ್ನು ಹೇಳುತ್ತಿದ್ದೇವೆ.

    MORE
    GALLERIES

  • 27

    Dosa Making Tips: ಕಾವಲಿಗೆ ಅಂಟಿಕೊಳ್ಳದಂತೆ ದೋಸೆಯನ್ನು ತೆಗೆಯೋದು ಹೇಗೆ? ಇಲ್ಲಿವೆ ಅಮ್ಮ ಹೇಳಿಕೊಟ್ಟ ಟಿಪ್ಸ್

    1.ತವೆ/ಕಾವಲಿ ಸ್ವಚ್ಛವಾಗಿರಲಿ

    ದೋಸೆ ಮಾಡಲು ಬೇಕಾಗುವ ಪಾತ್ರೆ ಅಂದ್ರೆ ಅದು ತವೆ. ದೋಸೆ ಮಾಡುವ ಮುನ್ನ ನಿಮ್ಮ ತವೆ ಸ್ವಚ್ಛವಾಗಿದೆಯಾ ಇಲ್ಲವಾ ಅನ್ನೋದನ್ನು ಗಮನಿಸಿಕೊಳ್ಳಿ. ದೋಸೆ ಮಾಡುವ ಮುನ್ನ ನಿಮ್ಮ ಕಾವಲಿ ಸ್ವಚ್ಛವಾಗಿರದೇ ತುಕ್ಕು/ಧೂಳು ಹಿಡಿದಿದ್ರೆ ಕ್ಲೀನ್ ಮಾಡ್ಕೊಳ್ಳಿ.

    MORE
    GALLERIES

  • 37

    Dosa Making Tips: ಕಾವಲಿಗೆ ಅಂಟಿಕೊಳ್ಳದಂತೆ ದೋಸೆಯನ್ನು ತೆಗೆಯೋದು ಹೇಗೆ? ಇಲ್ಲಿವೆ ಅಮ್ಮ ಹೇಳಿಕೊಟ್ಟ ಟಿಪ್ಸ್

    2.ಈರುಳ್ಳಿ/ಆಲೂಗಡ್ಡೆಯಿಂದ ಎಣ್ಣೆ ಸವರಿ

    ನೀವು ಮೊದಲ ಬಾರಿಗೆ ದೋಸೆ ಮಾಡುತ್ತಿದ್ರೆ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ. ದೋಸೆ ಹಿಟ್ಟು ಕಾವಲಿ ಮೇಲೆ ಹಾಕುವ ಮುನ್ನ ಅರ್ಧ ಕತ್ತರಿಸಿದ ಈರುಳ್ಳಿ ಅಥವಾ ಆಲೂಗಡ್ಡೆ ಸಹಾಯದಿಂದ ಕಾವಲಿಗೆ ಎಣ್ಣೆ ಸವರಿ. ಇದರಿಂದ ದೋಸೆ ಸುಲಭವಾಗಿ ತೆಗೆಯಲು ಸಾಧ್ಯವಾಗುತ್ತದೆ.

    MORE
    GALLERIES

  • 47

    Dosa Making Tips: ಕಾವಲಿಗೆ ಅಂಟಿಕೊಳ್ಳದಂತೆ ದೋಸೆಯನ್ನು ತೆಗೆಯೋದು ಹೇಗೆ? ಇಲ್ಲಿವೆ ಅಮ್ಮ ಹೇಳಿಕೊಟ್ಟ ಟಿಪ್ಸ್

    3.ಒಮ್ಮೆ ಬಿಸಿ ಮಾಡಿ ನೀರು ಹಾಕಿ ತೊಳೆಯಿರಿ

    ನೀವು ತುಂಬಾನೇ ದೋಸೆ ಮಾಡುತ್ತಿದ್ರೆ, ಸುಮಾರು ಸಮಯದ ಬಳಿಕ ದೋಸೆ ಕಾವಲಿಗೆ ಅಂಟಿಕೊಳ್ಳಲು ಆರಂಭಿಸುತ್ತದೆ. ಆಗ  ಒಮ್ಮೆ ಬಿಸಿಯಾಗಿರುವ ಕಾವಲಿ ಮೇಲೆ ನೀರು ಹಾಕಿ ತೊಳೆದುಕೊಳ್ಳಬೇಕು. ಈಗ ಕಾವಲಿ ಸ್ವಚ್ಛವಾಗುತ್ತದೆ.

    MORE
    GALLERIES

  • 57

    Dosa Making Tips: ಕಾವಲಿಗೆ ಅಂಟಿಕೊಳ್ಳದಂತೆ ದೋಸೆಯನ್ನು ತೆಗೆಯೋದು ಹೇಗೆ? ಇಲ್ಲಿವೆ ಅಮ್ಮ ಹೇಳಿಕೊಟ್ಟ ಟಿಪ್ಸ್

    4.ಫ್ರಿಡ್ಜ್​ನಿಂದ ತೆಗೆದಿರಿಸಿ

    ಸಾಮಾನ್ಯವಾಗಿ ಎಲ್ಲರ ಮೆನಯಲ್ಲಿ ಮಾಡುವ ತಪ್ಪು ಅಂದ್ರೆ ಫ್ರಿಡ್ಜ್​ನಲ್ಲಿರಿಸಿದ್ದ ಹಿಟ್ಟನ್ನು ನೇರವಾಗಿ ತಂದು ದೋಸೆ ಮಾಡಲು ಮುಂದಾಗುತ್ತಾರೆ. ಫ್ರಿಡ್ಜ್​​ನಲ್ಲಿರೊ ಕಾರಣ ದೋಸೆ ಹಿಟ್ಟು ಕಡಿಮೆ ಉಷ್ಣಾಂಶ ಹೊಂದಿರುತ್ತದೆ. ಆದ್ದರಿಂದ ದೋಸೆ ಮಾಡುವ 15 ರಿಂದ 20 ನಿಮಿಷ ಮೊದಲೇ ಹಿಟ್ಟನ್ನು ಫ್ರಿಡ್ಜ್​​ನಿಂದ ಎತ್ತಿಟ್ಟುಕೊಳ್ಳಿ. ಹೀಗೆ ಮಾಡೋದರಿಂದ ಸರಳವಾಗಿ ದೋಸೆ ಮಾಡಬಹುದು.

    MORE
    GALLERIES

  • 67

    Dosa Making Tips: ಕಾವಲಿಗೆ ಅಂಟಿಕೊಳ್ಳದಂತೆ ದೋಸೆಯನ್ನು ತೆಗೆಯೋದು ಹೇಗೆ? ಇಲ್ಲಿವೆ ಅಮ್ಮ ಹೇಳಿಕೊಟ್ಟ ಟಿಪ್ಸ್

    5.ನೀರು, ಅಡುಗೆ ಸೋಡಾ ಬಳಕೆ

    ಇನ್ನು ದೋಸೆ ಹಿಟ್ಟಿಗೆ ನಿಧಾನವಾಗಿ ನೀರು ಸೇರಿಸಬೇಕು. ಒಂದು ವೇಳೆ ನೀರು ಹೆಚ್ಚಾದ್ರೆ ದೋಸೆ ಕಾವಲಿಯಲ್ಲಿಯೇ ತುಂಡು ತುಂಡಾಗುತ್ತದೆ. ಹಾಗಾಗಿ ನೀರಿನ ಪ್ರಮಾಣದ ಬಗ್ಗೆ ಎಚ್ಚರಿಕೆಯಿಂದರಿಬೇಕು. ಹಾಗೆ ದೋಸೆ ಹಿಟ್ಟಿಗೆ ಅಡುಗೆ ಸೋಡಾ ಸೇರಿಸಿದ್ರೆ ಕಾವಲಿಯಿಂದ ಸಲೀಸಾಗಿ ದೋಸೆ ತೆಗೆಯಬಹುದು.

    MORE
    GALLERIES

  • 77

    Dosa Making Tips: ಕಾವಲಿಗೆ ಅಂಟಿಕೊಳ್ಳದಂತೆ ದೋಸೆಯನ್ನು ತೆಗೆಯೋದು ಹೇಗೆ? ಇಲ್ಲಿವೆ ಅಮ್ಮ ಹೇಳಿಕೊಟ್ಟ ಟಿಪ್ಸ್

    ಈ ವಿಧಾನಗಳನ್ನು ಅನುಸರಿಸಿ ಮಾಡಿದ್ರೆ ನೀವು ಹೋಟೆಲ್​ನಂತೆ ಒಂದರ ಮೇಲೊಂದರಂತೆ ದೋಸೆಯನ್ನು ಕಾವಲಿಯಿಂದ ತೆಗೆಯಬಹುದು.

    MORE
    GALLERIES