Tulsi Plant: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಬಾರದು ಅಂದ್ರೆ ಈ ಸಿಂಪಲ್ ಕೆಲಸ ಮಾಡಿ

Plant Care: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ತುಳಸಿ ಗಿಡ ಇರುತ್ತದೆ. ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಕೆಲವೊಮ್ಮೆ ಏನೇ ಮಾಡಿದರು ತುಳಸಿ ಗಿಡ ಪದೇ ಪದೇ ಒಣಗಿ ಹೋಗುತ್ತದೆ. ನಿಮ್ಮ ಮನೆಯಲ್ಲಿ ಸಹ ಇದೇ ಸಮಸ್ಯೆ ಆಗುತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ.

First published:

  • 18

    Tulsi Plant: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಬಾರದು ಅಂದ್ರೆ ಈ ಸಿಂಪಲ್ ಕೆಲಸ ಮಾಡಿ

    ತುಳಸಿ ಕೇವಲ ಒಂದು ಗಿಡ ಮಾತ್ರ ಅಲ್ಲ. ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಸಹ ಇದು ಪರಿಹಾರ. ಆರೋಗ್ಯ ಸಮಸ್ಯೆಗಳಿರಬಹುದು ಅಥವಾ ಆರ್ಥಿಕ ಸಮಸ್ಯೆ. ಎಲ್ಲಾ ತೊಂದರೆಗೆ ತುಳಸಿಯಲ್ಲಿ ಪರಿಹಾರವಿದೆ.

    MORE
    GALLERIES

  • 28

    Tulsi Plant: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಬಾರದು ಅಂದ್ರೆ ಈ ಸಿಂಪಲ್ ಕೆಲಸ ಮಾಡಿ

    ತುಳಸಿ ಗಿಡ ಎಲ್ಲರ ಮನೆಯಲ್ಲಿ ಇರುತ್ತದೆ. ಆದರೆ ಅದು ಪದೇ ಪದೇ ಒಣಗಿ ಹೋಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ತುಳಸಿ ಗಿಡವನ್ನು ಬಹಳ ನಾಜೂಕಾಗಿ ಆರೈಕೆ ಮಾಡಬೇಕಾಗುತ್ತದೆ. ಹೇಗೆ ಬೇಸಿಗೆಯಲ್ಲಿ ತುಳಸಿ ಒಣಗದಂತೆ ಕಾಪಾಡಬೇಕು ಎಂಬುದು ಇಲ್ಲಿದೆ.

    MORE
    GALLERIES

  • 38

    Tulsi Plant: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಬಾರದು ಅಂದ್ರೆ ಈ ಸಿಂಪಲ್ ಕೆಲಸ ಮಾಡಿ

    ತುಳಸಿ ನೆಡುವ ಮಣ್ಣು ಕೂಡ ಇಲ್ಲಿ ಮುಖ್ಯವಾಗುತ್ತದೆ. ಯಾವ ರೀತಿಯ ಮಣ್ಣಿನಲ್ಲಿ ನಾವು ತುಳಸಿ ಗಿಡ ಬೆಳೆಸುತ್ತೇವೆಯೋ ಅದರ ಮೇಲೆ ಗಿಡದ ಆಯಸ್ಸು ನಿಂತಿರುತ್ತದೆ. ಹಾಗಾಗಿ ಯಾವಾಗಲೂ ಕೆಂಪು ಅಥವಾ ಮರಳು ಮಣ್ಣನ್ನ ಮಾತ್ರ ಬಳಕೆ ಮಾಡಿದರೆ ಉತ್ತಮ.

    MORE
    GALLERIES

  • 48

    Tulsi Plant: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಬಾರದು ಅಂದ್ರೆ ಈ ಸಿಂಪಲ್ ಕೆಲಸ ಮಾಡಿ

    ತುಳಸಿ ಗಿಡಕ್ಕೆ ಹಸುವಿನ ಗೊಬ್ಬರಕ್ಕಿಂತ ಬೇರೆ ಯಾವುದೂ ಸೂಕ್ತವಲ್ಲ ಎನ್ನಬಹುದು. ಹೌದು, ಯಾವಾಗಲೂ ಹಸುವಿನ ಗೊಬ್ಬರವನ್ನು ಮಾತ್ರ ಹಾಕಿ. ಮುಖ್ಯವಾಗಿ ಬೇಸಿಗೆ ಅಂತ ಹಸುವಿನ ಸಗಣಿಯನ್ನು ಹಾಗೆಯೇ ತಂದು ಹಾಕಬೇಡಿ. ಅದನ್ನು ಒಣಗಿಸಿ ನಂತರ ಪುಡಿ ಮಾಡಿ ಹಾಕಿದರೆ ತುಳಸಿ ಒಣಗುವುದಿಲ್ಲ.

    MORE
    GALLERIES

  • 58

    Tulsi Plant: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಬಾರದು ಅಂದ್ರೆ ಈ ಸಿಂಪಲ್ ಕೆಲಸ ಮಾಡಿ

    ತುಳಸಿ ಗಿಡವನ್ನು ಕೀಳಲು ಸಹ ಒಂದು ದಿನ ಹಾಗೂ ಸಮಯವಿದೆ. ಯಾವುದೇ ಕಾರಣಕ್ಕೂ ಮಧ್ಯಾಹ್ನ 12 ಗಂಟೆಯ ನಂತರ ತುಳಸಿ ಎಲೆಯನ್ನು ಕೀಳಬಾರದು. ಹಾಗೆಯೇ, ಸ್ನಾನ ಮಾಡದೇ ಸಹ ತುಳಸಿ ಗಿಡವನ್ನು ಮುಟ್ಟಬಾರದು. ಇಲ್ಲದಿದ್ದರೆ ಗಿಡ ಬೇಗ ಒಣಗಿ ಹೋಗುತ್ತದೆ.

    MORE
    GALLERIES

  • 68

    Tulsi Plant: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಬಾರದು ಅಂದ್ರೆ ಈ ಸಿಂಪಲ್ ಕೆಲಸ ಮಾಡಿ

    ಇಷ್ಟೇ ಅಲ್ಲದೇ, ಏಕಾದಶಿ ಹಾಗೂ ಅಮವಾಸ್ಯೆಯ ದಿನ ಯಾವುದೇ ಸಂದರ್ಭ ಇದ್ದರೂ ಸಹ ತುಳಸಿ ಎಲೆಗಳನ್ನು ಕೀಳಬಾರದು. ನಿಮಗೆ ಏಕಾದಶಿ ದಿನ ವಿಷ್ಣುವಿನ ಪೂಜೆ ಮಾಡಲು ಬೇಕು ಎಂದರೆ ಹಿಂದಿನ ದಿನವೇ ಅಥವಾ 2 ದಿನ ಮೊದಲು ಕಿತ್ತು ಇಟ್ಟುಕೊಳ್ಳಬಹುದು.

    MORE
    GALLERIES

  • 78

    Tulsi Plant: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಬಾರದು ಅಂದ್ರೆ ಈ ಸಿಂಪಲ್ ಕೆಲಸ ಮಾಡಿ

    ಹಸಿ ಹಾಲಿಗೆ ಸ್ವಲ್ಪ ನೀರನ್ನು ಮಿಕ್ಸ್ ಮಾಡಿ ನೀವು ತುಳಸಿ ಗಿಡಕ್ಕೆ ವಾರಕ್ಕೆ ಒಮ್ಮೆ ಹಾಕಬೇಕು. ಹಾಗೆಯೇ, ಭಾನುವಾರ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು. ಅಲ್ಲದೇ, ಪ್ರತಿದಿನ ಸಹ ನೀರು ಹಾಕುವ ಅವಶ್ಯಕತೆ ಇರುವುದಿಲ್ಲ. ನೋಡಿಕೊಂಡು 2 ದಿನಕ್ಕೊಮ್ಮೆ ಹಾಕಿದರೂ ಸಾಕಾಗುತ್ತದೆ.

    MORE
    GALLERIES

  • 88

    Tulsi Plant: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಬಾರದು ಅಂದ್ರೆ ಈ ಸಿಂಪಲ್ ಕೆಲಸ ಮಾಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES