Beauty Tips: ಚಳಿಗಾಲದಲ್ಲಿ ಒಣ ಚರ್ಮಕ್ಕೆ ಇದೇ ಪರಿಹಾರವಂತೆ
Winter Skin Care Tips: ಚಳಿಗಾಲದಲ್ಲಿ ನಮ್ಮ ತ್ಚಚೆಯಲ್ಲಿ ಸ್ವಲ್ಪವಾದರೂ ಬದಲಾವಣೆಯಾಗಿರುತ್ತದೆ. ಮುಖ ಒರಟಾಗಿ ಸುಕ್ಕುಗಟ್ಟಿರುತ್ತದೆ. ಇದನ್ನ ಒಣ ಚರ್ಮದ ಸಮಸ್ಯೆ ಎನ್ನಬಹುದು. ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಚರ್ಮದ ಬೇರೆ ಬೇರೆ ಸಮಸ್ಯೆಗಳು ಆರಂಭವಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ತ್ವಚೆಯನ್ನು ಬಹಳ ಎಚ್ಚರಿಕೆಯಿಂದ ಆರೈಕೆ ಮಾಡಬೇಕು. ಚಳಿಗಾಲದಲ್ಲಿ ತ್ವಚೆಯ ಆರೈಕೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಆಯಾ ಕಾಲಕ್ಕೆ ಅನುಗುಣವಾಗಿ ತ್ವಚೆಯಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತೀವ್ರವಾದ ಒಣ ಚರ್ಮ ಎಸ್ಜಿಮಾ ಮತ್ತು ಸೋರಿಯಾಸಿಸ್ ಗೆ ಕಾರಣವಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಉತ್ಪನ್ನಗಳನ್ನು ಬಳಕೆ ಮಾಡಬೇಕು.
2/ 7
ಪ್ರತಿ ಬಾರಿ ನೀವು ಮನೆಯಿಂದ ಹೊರ ಹೋಗುವ ಸಮಯದಲ್ಲಿ ಸನ್ ಸ್ಕ್ರೀನ್ ಉಪಯೋಗಿಸಿ. ನೀವು ಬಳಸುವ ಮೊಯಿಶ್ಚರೈಸರ್ ನಲ್ಲಿ ಹ್ಯುಮೆಕ್ಟೆಂಟ್ ಗಳಾದ ಸೆರಮೈಡ್ ಗಳು, ಗ್ಲಿಸರಿನ್, ಸೋರ್ಬಿಟೊಲ್ ಮತ್ತು ಹ್ಯಾಲುರೋನಿಕ್ ಆಮ್ಲ ಇರುವುದನ್ನ ನೋಡಿಕೊಂಡು ಬಳಕೆ ಮಾಡಿ.
3/ 7
ಸ್ನಾನ ಮಾಡಿದ ತಕ್ಷಣ ಮಾಯಿಶ್ಚರೈಸರ್ ಅನ್ನು ಹಚ್ಚುವ ಅಭ್ಯಾಸ ಮಾಡಿಕೊಳ್ಳಿ. ಹಾಲಿನ ಅಂಶವಿರುವ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡಿ. ಇದು ಒಣ ಚರ್ಮಕ್ಕೆ ಪರಿಹಾರ ನೀಡುತ್ತದೆ.
4/ 7
ನಿಮ್ಮ ಚರ್ಮದಲ್ಲಿ ಸದಾ ತೇವಾಂಶ ಕಾಪಾಡುವ ಬಾಡಿ ವಾಶ್ ಗಳನ್ನು ಬಳಕೆ ಮಾಡಿ. ಆದರೆ ಯಾವುದೇ ಕಾರಣಕ್ಕೂ ಚಳಿಗಾಲದಲ್ಲಿ ಬಾಡಿ ಬ್ರಷ್ ಅಥವಾ ಸ್ಪಾಂಜ್ ಬಳಕೆ ಮಾಡಬೇಡಿ. ಇದು ನಿಮ್ಮ ಚರ್ಮವನ್ನು ಹಾಳು ಮಾಡುತ್ತದೆ.
5/ 7
ಚಳಿಗಾಲದಲ್ಲಿ ಹಿಮ್ಮಡಿ ಒಡೆದು ರಕ್ತ ಬರುತ್ತದೆ. ಅದರ ನೋವು ಸಹಿಸಲು ಅಸಾಧ್ಯ,. ಅದಕ್ಕೆ ನೀವು ಮಾಡಬೇಕಿರುವುದು ಹಿಮ್ಮಡಿಗಳಿಗೆ ಮಾಯಿಶ್ಚರೈಸರ್ ಹಚ್ಚಿ ಅಥವಾ ಸ್ವಲ್ಪ ಕಾಲ ಬಿಸಿ ನೀರಿನಲ್ಲಿ ಕಾಲನ್ನು ನೆನೆಸಿಡಿ.
6/ 7
ಚಳಿ ಇರುವುದರಿಂದ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಅದು ಚರ್ಮಕ್ಕೆ ಉತ್ತಮವಲ್ಲ. ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ನಿಮಗೆ ಸಾಧ್ಯವಿಲ್ಲದಿದ್ದರೆ ಉಗುರು ಬೆಚ್ಚಗಿನ ನೀರಿನಲ್ಲಿ 10 ನಿಮಿಷಕ್ಕಿಂತ ಹೆಚ್ಚಿನ ಸಮಯ ಸ್ನಾನ ಮಾಡಬೇಡಿ.
7/ 7
ತೆಳುವಾದ ರಾಸಾಯನಿಕ ವಸ್ತುಗಳು ಚಳಿಗಾಲದಲ್ಲಿ ಚರ್ಮಕ್ಕೆ ಅವಶ್ಯವಾಗಿರುತ್ತವೆ. ಇವುಗಳು ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತವೆ, ಹಾಗಾಗಿ ಒಳ್ಳೆಯ ಉತ್ಪನ್ನವನ್ನು ಆಯ್ಕೆ ಮಾಡಿ.