Child Care: ಮಕ್ಕಳ ಮೊಬೈಲ್ ಚಟ ಬಿಡಿಸೋಕೆ ಇಲ್ಲಿದೆ ನೋಡಿ ಹ್ಯಾಕ್ಸ್
Mobile Addiction in Children: ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಎನ್ನುವ ಮಾಯಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಕೊರೊನಾ ಸಮಯದ ಆನ್ಲೈನ್ ಕ್ಲಾಸ್ ನಂತರವಂತೂ ಕೇಳುವುದೇ ಬೇಡ. ಹಾಗೆಯೇ ಸ್ಕೂಲ್ಗೆ ಹೋಗದ ಚಿಕ್ಕಮಕ್ಕಳು ಸಹ ಊಟ ಮಾಡಲು ಮೊಬೈಲ್ ಬೇಕು ಎನ್ನುತ್ತಾರೆ. ಇದು ಪೋಷಕರಿಗೆ ತಲೆನೋವಾಗಿದೆ. ಮಕ್ಕಳ ಈ ಮೊಬೈಲ್ ಚಟ ಬಿಡಿಸಲು ಕೆಲ ಸಲಹೆಗಳು ಇಲ್ಲಿದ್ದು , ಟ್ರೈ ಮಾಡಬಹುದು.
ಮೊಬೈಲ್ ಇಲ್ಲದೇ ಇಂದಿನ ಕಾಲದಲ್ಲಿ ಬದುಕುವುದು ಕಷ್ಟ ಎನ್ನುವಂತಾಗಿದೆ. ಇದು ಮಕ್ಕಳ ಮೇಲೆ ಸಹ ಪರಿಣಾಮ ಬೀರಿದೆ. 3 ವರ್ಷದ ಮಗುವಿನಿಂದ ಹಿಡಿದು ಶಾಲೆಗೆ ಹೋಗುವ ಮಗು ಸಹ ಮೊಬೈಲ್ ಬಳಕೆ ಮಾಡುವುದನ್ನ ಕಲಿತಿದ್ದು , ಮೊಬೈಲ್ ಬೇಕೇ ಬೇಕು ಎಂದು ಹಠ ಮಾಡುತ್ತಿದ್ದಾರೆ.
2/ 8
ಆದರೆ ಅತಿಯಾದ ಮೊಬೈಲ್ ಬಳಕೆ ಮಕ್ಕಳ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತಿದೆ. ಮಾನಸಿಕ ಆರೋಗ್ಯದ ಜೊತೆಗೆ ಕಣ್ಣಿನ ಆರೋಗ್ಯಕ್ಕೆ ಸಹ ಇದು ಅಪಾಯ. ಹಾಗಾಗಿ ಪೋಷಕರು ಮುಂಜಾಗ್ರತೆ ತೆಗೆದುಕೊಳ್ಳುವುದು ಸಹ ಮುಖ್ಯ.
3/ 8
ಮಕ್ಕಳು ಮೊಬೈಲ್ ಅನ್ನು ಯಾವ ಕಾರಣಕ್ಕೆ ಬಳಸುತ್ತಾರೆ ಎಂಬುದು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದರೆ ಮಕ್ಕಳ ಮೇಲೆ ಸ್ವಲ್ಪ ನಿಗಾ ಇಡುವುದು ಸಹಾಯ ಮಾಡುತ್ತದೆ. ಮೊಬೈಲ್ನಲ್ಲಿಏನು ಮಾಡುತ್ತಾರೆ ಎಂಬುದನ್ನ ಗಮನಿಸಿ, ಸಾಧ್ಯವಾದರೆ ಕೆಲ ಆ್ಯಪ್ ಮೇಲೆ ಲಾಕ್ ಇಡಿ.
4/ 8
ಮಕ್ಕಳಿಗೆ ಈ ಮೊಬೈಲ್ ಅತಿಯಾಗಿ ಬಳಸುವುದರಿಂದ ಏನೆಲ್ಲಾ ಸಮಸ್ಯೆ ಬರುತ್ತದೆ ಎಂಬುದನ್ನ ಹೇಳಿ. ಅವರಿಗೆ ಅರ್ಥವಾಗುವ ರೀತಿ ಹೇಳುವುದು ಸಹಾಯ ಮಾಡುತ್ತದೆ. ಕೆಲವೊಮ್ಮೆ ಅನಿವಾರ್ಯವಾಗಿ ಹೆದರಿಸುವುದು ತಪ್ಪಲ್ಲ.
5/ 8
ಟೈಮ್ ಟೇಬಲ್ ಮಾಡಿಕೊಡಿ: ನೀವು ಮಕ್ಕಳಿಗೆ ಒಂದು ಟೈಮ್ ಟೇಬಲ್ ಮಾಡಿಕೊಡುವುದು ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತದೆ. ಮೊಬೈಲ್ ಬಳಕೆಗೆ ದಿನಕ್ಕೆ ಅರ್ಧಗಂಟೆ ಮಾತ್ರ ಇಡಿ. ಹಾಗೆಯೇ ಓದಲು, ಆಟ ಆಡಲು, ಹೊರಗಿನ ಮಕ್ಕಳ ಜೊತೆ ಸೇರಲು ಸಹ ಅವರಿಗೆ ಸಮಯ ಮೀಸಲಿಡಿ. ಇದು ಮೊಬೈಲ್ ಬಳಕೆ ಕಡಿಮೆ ಮಾಡುತ್ತದೆ.
6/ 8
ಅವರಲ್ಲಿ ಹವ್ಯಾಸ ಬೆಳೆಸಿ: ಪ್ರತಿಯೊಬ್ಬ ಮಕ್ಕಳಲ್ಲಿ ಒಂದು ಹವ್ಯಾಸ ಇರುತ್ತದೆ. ಕೆಲವರಿಗೆ ಹಾಡುವುದು, ಚಿತ್ರ ಬಿಡಿಸುವುದು ಹೀಗೆ ಕೆಲವೊಂದು ಇಷ್ಟ ಇರುತ್ತದೆ. ಹಾಗೆಯೇ, ಕ್ರೀಡೆಯಲ್ಲಿ ಸಹ ಆಸಕ್ತಿ ಇರುತ್ತದೆ. ಯಾವುದು ಇಷ್ಟ ಎಂದು ಗುರುತಿಸಿ ಅದರಲ್ಲಿ ಅವರನ್ನು ಹೆಚ್ಚು ಕಾಲ ಸಮಯ ಕಳೆಯಲು ಪ್ರೋತ್ಸಾಹಿಸಿ.
7/ 8
ದೈಹಿಕ ಚಟುವಟಿಕೆ ಹೆಚ್ಚಿಸಿ: ಮಕ್ಕಳು ಮೊಬೈಲ್ ಹಿಡಿದು ಮನೆಯಲ್ಲಿ ಕುಳಿತರೆ ದೈಹಿಕ ಚಟುವಟಿಗೆ ಕಡಿಮೆ ಆಗಿ ರೋಗಗಳು ಸಹ ಬರುತ್ತದೆ. ಅಲ್ಲದೇ ಇತರರ ಜೊತೆ ಬೆರೆಯಲು ಸಹ ಬರುವುದಿಲ್ಲ. ಇದು ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಅದಕ್ಕಾಗಿ ಅವರಿಗೆ ಹೊರಗೆ ಹೋಗಿ ಆಟ ಆಡಲು ಹೇಳಿ, ವ್ಯಾಯಾಮ ಮಾಡಿಸಿ.
8/ 8
ನೀವು ಮಾದರಿ ಆಗಬೇಕು: ಮುಖ್ಯವಾಗಿ ಮಕ್ಕಳು ಪೋಷಕರನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ನಿಮ್ಮ ಫೋನ್ ಬಳಕೆಯ ಮೇಲೆ ಸಹ ನಿಗಾ ಇಡಿ. ನೀವು ಮಕ್ಕಳ ಮುಂದೆ ಅತಿಯಾಗಿ ಫೋನ್ ಬಳಸಿದಾಗ, ಅವರೂ ಸಹ ಅದನ್ನೇ ಮಾಡುತ್ತಾರೆ.