Hair Fall Remedy: ಕೂದಲ ಸಮಸ್ಯೆಗೆ ಹಣ ಖರ್ಚು ಮಾಡ್ಬೇಡಿ, ಅಂಗೈನಲ್ಲಿದೆ ಪರಿಹಾರ
How to Stop Hair Fall: ಮಹಿಳೆಯರಿಗೆ ಸಾವಿರಾರು ಸಮಸ್ಯೆಗಳಿರುತ್ತದೆ. ಆದರೆ ಅವರನ್ನು ಹೆಚ್ಚು ಚಿಂತೆಗೀಡು ಮಾಡುವುದು ಕೂದಲು ಉದುರುವ ಸಮಸ್ಯೆ ಎಂದರೆ ತಪ್ಪಲ್ಲ. ಯಾವುದೇ ಉತ್ಪನ್ನಗಳನ್ನು ಬಳಕೆ ಮಾಡಿದರೂ ಸಹ ಕೂದಲು ಉದುರುವುದು ನಿಲ್ಲುತ್ತಿಲ್ಲ ಎಂಬುದು ಎಲ್ಲರ ದೂರು. ಇದಕ್ಕೆ ಚಿಂತೆ ಮಾಡಬೇಕಿಲ್ಲ. ಸುಲಭವಾಗಿ ಸಿಗುವ ವಸ್ತುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಲ್ಯಾವೆಂಡರ್ ಎಣ್ಣೆ: ಈ ಲ್ಯಾವೆಂಡರ್ ಎಣ್ಣೆಯಲ್ಲಿ ಕೂದಲ ಬೆಳವಣಿಗೆಗೆ ಬೇಕಾಗುವ ಅಂಶಗಳಿದೆ. ಇದನ್ನು ನೀವು ಕೂದಲಿಗೆ ಹಚ್ಚುವುದು ಬುಡದಿಂದ ಕೂದಲನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. 2 ದಿನಕ್ಕೆ ಒಮ್ಮೆ ಇದನ್ನು ಹಚ್ಚಿ ಕೂದಲಿಗೆ ಸ್ಟೀಮ್ ತೆಗೆದುಕೊಳ್ಳುವುದು ಉತ್ತಮ
2/ 8
ಪುದೀನಾ ಎಣ್ಣೆ: ಪುದೀನಾ ಎಣ್ಣೆ ಸಹ ಕೂದಲ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ನಿಮಗೆ ಒತ್ತಡ ಹೆಚ್ಚಾದಾಗ ಸಹ ಕೂದಲು ಉದುರುತ್ತದೆ. ಹಾಗಾಗಿ ಮೊದಲು ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಅದಕ್ಕೆ ನಿಮಗೆ ಈ ಪುದೀನಾ ಎಣ್ಣೆ ಸಹಾಯ ಮಾಡುತ್ತದೆ. ಅಲ್ಲದೇ ಇದು ಕೂದಲನ್ನು ಸಹ ಗಟ್ಟಿ ಮಾಡುತ್ತದೆ.
3/ 8
ರೋಸ್ಮೆರಿ ಎಣ್ಣೆ: ಈ ರೋಸ್ಮೆರಿ ಎಣ್ಣೆಯನ್ನು ಸಹ ನೀವು ಕೂದಲಿಗೆ ಹಚ್ಚುವುದು ಕೂದಲ ಬೆಳವಣಿಗೆಗೆ ಹಾಗೂ ಕೂದಲು ಉದುರುವುದನ್ನ ತಡೆಯಲು ಸಹಾಯ ಮಾಡುತ್ತದೆ. ತಲೆಸ್ನಾನ ಮಾಡುವ 1 ಗಂಟೆ ಮೊದಲು ಇದನ್ನು ಹಚ್ಚಿದರೆ ಒಳ್ಳೆಯದು.
4/ 8
ಮೊಟ್ಟೆಯ ಮಾಸ್ಕ್: ಮೊಟ್ಟೆಯ ಹಳದಿ ಭಾಗವನ್ನು ಒಂದು ಬೌಲ್ನಲ್ಲಿ ಹಾಕಿ, ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಜೇನುತುಪ್ಪ ಹಾಕಿ ಕಲಸಿ ತಲೆಗೆ ಹಚ್ಚಿ. ಸುಮಾರು 1 ಗಂಟೆಯ ನಂತರ ತಲೆಸ್ನಾನ ಮಾಡಿ.
5/ 8
ತೆಂಗಿನ ಹಾಲು: ತೆಂಗಿನ ಹಾಲು ಕೂದಲಿಗೆ ಬೇಕಾದ ಅಗತ್ಯ ಕೊಬ್ಬು ಹಾಗೂ ಪ್ರೋಟೀನ್ ಅನ್ನು ಕೂಡ ಹೊಂದಿದೆ. ಈ ತೆಂಗಿನ ಹಾಲಿಗೆ ಪುಡಿ ಮಾಡಿದ ಮೆಂತ್ಯೆ ಬೀಜ ಸೇರಿಸಿ ತಲೆಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ.
6/ 8
ಗ್ರೀನ್ ಟೀ: ಗ್ರೀನ್ ಟೀ ತೂಕ ಇಳಿಸುವುದಕ್ಕೆ ಮಾತ್ರವಲ್ಲದೇ ಕೂದಲಿನ ಸಮಸ್ಯೆಗೆ ಸಹ ಪರಿಹಾರ ನೀಡುತ್ತದೆ. ನಿಮ್ಮ ಕೂದಲಿನ ಉದ್ದಕ್ಕೆ ಅನುಸಾರ ಗ್ರೀನ್ ಟೀ ಬ್ಯಾಗ್ಗಳನ್ನು ಬಿಸಿ ನೀರಿನಲ್ಲಿ ನೆನೆಸಿಡಿ. ಅದನ್ನು ನಿಮ್ಮ ಕೂದಲಿಗೆ ಹಚ್ಚಿ ತೊಳೆಯಿರಿ. ನಂತರ ತಣ್ಣಗಿನ ನೀರಿನಲ್ಲಿ ಮತ್ತೆ ತಲೆಸ್ನಾನ ಮಾಡಿ.
7/ 8
ಬೀಟ್ರೂಟ್ ರಸ: ಬೀಟ್ರೂಟ್ ನಿಮ್ಮ ಕೂದಲಿಗೆ ಸುಂದರವಾದ ಬಣ್ಣ ನೀಡುತ್ತದೆ ಮತ್ತು ನೆತ್ತಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಬೀಟ್ರೂಟ್ ತುರಿ ಮಾಡಿಕೊಂಡು, ಅದನ್ನು ಮಿಕ್ಸ್ ಮಾಡಿ. ಆ ಪೇಸ್ಟ್ ಅನ್ನು ಸೋಸಿಕೊಂಡು ಕೇವಲ ರಸ ತೆಗೆದುಕೊಳ್ಳಿ. ಅದನ್ನು ಕೂದಲಿಗೆ ಹಚ್ಚಿ ಸಾಕು.
8/ 8
ಅಲೋವೆರಾ: ಅಲೋವೆರಾ ಕೂದಲ ಸಮಸ್ಯೆಗಳಿಗೆ ರಾಮಬಾಣ ಎಂದು ಎಲ್ಲರಿಗೂ ಗೊತ್ತಿದೆ. ತಾಜಾ ಅಲೋವೆರಾ ತೆಗೆದುಕೊಂಡು ಅದನ್ನು ಕೂದಲಿಗೆ ವಾರಕ್ಕೆ 3 ಬಾರಿ ಹಚ್ಚುವುದು ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ.