Beauty Tips: ಕಣ್ಣಿನ ಸುತ್ತಲಿನ ಕಪ್ಪು ಕಲೆ ಅಂದವನ್ನು ಹಾಳು ಮಾಡುತ್ತಿದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ
Dark Spot: ಸೌಂದರ್ಯವನ್ನು ವರ್ಣಿಸಲು ಕಣ್ಣುಗಳ ಬಗ್ಗೆ ಹೇಳುತ್ತಾರೆ. ಅನೇಕ ಕವಿಗಳು ಕಣ್ಣಿನ ಮೇಲೆ ಕವಿತೆಗಳನ್ನು ಬರೆದಿದ್ಧಾರೆ. ಕಣ್ಣುಗಳ ಮೇಲೆ ಅನೇಕ ಸಿನಿಮಾ ಹಾಡುಗಳೂ ಇವೆ. ಅದಕ್ಕಾಗಿಯೇ ಮಾನವ ದೇಹದಲ್ಲಿನ ಕಣ್ಣುಗಳ ವಿಶಿಷ್ಟತೆಯು ವಿಭಿನ್ನವಾಗಿದೆ. ಮತ್ತು ಅಂತಹ ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಕಪ್ಪು ಕಲೆಗಳಿಗೆ ಮನೆಯಲ್ಲಿಯೇ ಪರಿಹಾರ ಪಡೆಯಬಹುದು. ಹಾಗಾದ್ರೆ ಈ ಕಪ್ಪುಗಳಿಗೆ ಪರಿಹಾರವೇನು ಎಂಬುದು ಇಲ್ಲಿದೆ.
ನಿದ್ರಾಹೀನತೆ ಹಾಗೂ ಇತರ ಹಲವು ಸಮಸ್ಯೆಗಳಿಂದ ಡಾರ್ಕ್ ಸರ್ಕಲ್ ಉಂಟಾಗುತ್ತದೆ. ಒತ್ತಡ, ಹಾರ್ಮೋನುಗಳ ಸಮಸ್ಯೆಗಳು, ಅಲರ್ಜಿಗಳು ಮತ್ತು ನಿರ್ಜಲೀಕರಣವು ಸಹ ಕಣ್ಣಿನ ಕೆಳಗೆ ಕಪ್ಪು ಕಲೆಗಳಿಗೆ ಕಾರಣವಾಗಬಹುದು.
2/ 7
ಕಣ್ಣುಗಳ ಕೆಳಗೆ ಮುಖದ ಮೇಲೆ ಕಪ್ಪು ಕಲೆಗಳು ಮುಖದ ಅಂದವನ್ನು ಹಾನಿಗೊಳಿಸುತ್ತವೆ. ಒತ್ತಡ, ನಿದ್ರಾಹೀನತೆ. ಹೀಗೆ ನಾನಾ ಕಾರಣಗಳಿಂದ ಉಂಟಾಗುತ್ತದೆ. ಇವುಗಳನ್ನು ಹೋಗಲಾಡಿಸಲು ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ಕಣ್ಣುಗಳ ಕೆಳಗೆ ಮೃದುವಾಗಿ ಮಸಾಜ್ ಮಾಡಿ. ಇದನ್ನು ಪ್ರತಿದಿನ ಮಾಡುವುದರಿಂದ ಫಲಿತಾಂಶ ಸಿಗುತ್ತದೆ.
3/ 7
ಟೊಮೆಟೊ ರಸದ ಜೊತೆ ನಿಂಬೆ ರಸವನ್ನು ಮಿಶ್ರಣ ಮಾಡಿ ಕಣ್ಣುಗಳ ಕೆಳಗೆ ಹಚ್ಚಿ ಮಸಾಜ್ ಮಾಡಿ. ಇಪ್ಪತ್ತು ನಿಮಿಷಗಳ ನಂತರ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
4/ 7
ಆಲೂಗಡ್ಡೆಯನ್ನು ಹಿಸುಕಿ ಅಥವಾ ಸ್ಲೈಸ್ ಮಾಡಿ ಕಣ್ಣುಗಳ ಮೇಲೆ ಹಚ್ಚಬೇಕು. ಹೀಗೆ ಮಾಡುವುದರಿಂದ ಕಪ್ಪು ಕಲೆಗಳು ಸುಲಭವಾಗಿ ಮಾಯವಾಗುತ್ತದೆ.
5/ 7
ಸ್ವಲ್ಪ ನಿಂಬೆರಸ, ಮಜ್ಜಿಗೆ ತಿರುಳು, ಒಂದು ಚಮಚ ಕೆನೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಹತ್ತಿ ಪ್ಯಾಡ್ನೊಂದಿಗೆ ಕಣ್ಣುಗಳ ಕೆಳಗೆ ನಿಧಾನವಾಗಿ ಹಚ್ಚಿ. ಇಪ್ಪತ್ತು ನಿಮಿಷಗಳ ನಂತರ ಹಾಲಿನಿಂದ ತೊಳೆಯಿರಿ. ನಂತರ ನೀರಿನಿಂದ ತೊಳೆಯಿರಿ.
6/ 7
ಈ ಸಮಸ್ಯೆಗೆ ಪಾಲಕ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಪಾಲಕ್ ಸೊಪ್ಪು, ಸೌತೆಕಾಯಿ ಮತ್ತು ನಿಂಬೆ ರಸವನ್ನು ಸೇರಿಸಿ ಕಣ್ಣಿನ ಕೆಳಗೆ ಮೃದುವಾಗಿ ಹಚ್ಚಿ ಮಸಾಜ್ ಮಾಡಿ. ಹಾಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
7/ 7
ಕಡಲೆಕಾಯಿ ಬೆಣ್ಣೆ ಮತ್ತು ತೆಂಗಿನಕಾಯಿ ತಿನ್ನುವುದರಿಂದ ಉತ್ತಮ ಪ್ರಯೋಜನಗಳಿವೆ. ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.