Egg Smell: ಮೊಟ್ಟೆಯ ಆಮ್ಲೆಟ್ ಅಥವಾ ಇನ್ಯಾವುದೇ ಆಹಾರ ಪದಾರ್ಥಗಳನ್ನು ತಯಾರಿಸಿದ ನಂತರ ಅದರ ಪಾತ್ರೆಯಿಂದ ಮೊಟ್ಟೆಯ ವಾಸನೆ ಸುಲಭವಾಗಿ ಹೋಗುವುದಿಲ್ಲ. ಅದೆಷ್ಟೇ ಬಾರಿ ಉಜ್ಜಿದರೂ ಸಹ ಪಾತ್ರೆಯಿಂದ ವಾಸನೆ ಹೋಗುತ್ತಿಲ್ಲ ಅಂದರೆ ಅದಕ್ಕೆ ಪರಿಹಾರ ಇಲ್ಲಿದೆ.
ಅಡುಗೆ ಸೋಡಾ ಅಡುಗೆ ಮನೆಯ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹಾಗೆಯೇ ಮೊಟ್ಟೆಯ ವಾಸನೆ ಇರುವ ಪಾತ್ರೆಯಲ್ಲಿ ನೀರನ್ನು ಹಾಕಿ, ಅದಕ್ಕೆ ಸ್ವಲ್ಪ ಸೋಡಾ ಹಾಕಿ 2 ಗಂಟೆ ಹಾಗೆಯೇ ಬಿಡಿ. ನಂತರ ತೊಳೆದರೆ ವಾಸನೆ ಹೋಗುತ್ತದೆ.
2/ 8
ಕಾಫಿ ಪುಡಿಯನ್ನು ನೀರಿಗೆ ಹಾಕಿ ವಾಸನೆ ಇರುವ ಪಾತ್ರೆಗೆ ಹಾಕಿ ಇಡಿ ಅಥವಾ ಕೇವಲ ಕಾಫಿ ಪುಡಿಯನ್ನು ತೆಗೆದುಕೊಂಡು ಚನ್ನಾಗಿ ಉಜ್ಜಿದರೆ ಮೊಟ್ಟೆ ವಾಸನೆ ಹೋಗುತ್ತದೆ.
3/ 8
ಒಂದು ಸಣ್ಣ ಬಕೆಟ್ ನೀರಿಗೆ ಸ್ವಲ್ಪ ವಿನೇಗರ್ ಹಾಕಿ ಮಿಶ್ರಣ ಮಾಡಿ, ನೊರೆ ಬಂದ ಮೇಲೆ ಅದರಲ್ಲಿ ವಾಸನೆ ಇರುವ ಪಾತ್ರೆಗಳನ್ನು ಹಾಕಿ ತೊಳೆಯಿರಿ.
4/ 8
ಅಲ್ಲದೇ ನೀವು ಪಾತ್ರೆ ತೊಳೆಯುವ ಜೆಲ್ ಬದಲಾಗಿ ವಿನೇಗರ್ ಅನ್ನು ಸಹ ಬಳಸಿ ತೊಳೆಯಬಹುದು. ಇದು ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
5/ 8
ಆಮ್ಲೆಟ್ ಮಾಡಿದಾಗ ಅದರ ಮೇಲೆ ಕಾಳು ಮೆಣಸಿನ ಪುಡಿ ಉದುರಿಸಿ, ಇದು ಮೊಟ್ಟೆಯ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾಳು ಮೆಣಸಿನ ಪರಿಮಳದ ಮುಂದೆ ಮೊಟ್ಟೆಯ ವಾಸನೆ ಹೋಗುತ್ತದೆ.
6/ 8
ನೀವು ಮೊಟ್ಟೆಯ ಆಹಾರ ಪದಾರ್ಥ ಮಾಡಿರುವ ಪಾತ್ರೆಗೆ ಕಡಲೇ ಹಿಟ್ಟನ್ನು ಹಾಕಿ ಚನ್ನಾಗಿ ಉಜ್ಜಿ. ಸುಮಾರು 2 ರಿಂದ 3 ನಿಮಿಷಗಳ ನಂತರ ತೊಳೆದರೆ ಪಾತ್ರೆಯ ವಾಸನೆ ಹೋಗುತ್ತದೆ.
7/ 8
ಬಟ್ಟೆಯ ಕಲೆಯಿಂದ ಹಿಡಿದು ಹಲ್ಲನ್ನು ಬಿಳುಪಾಗಿಸುವುದರವರೆಗೆ ನಿಂಬೆಹಣ್ಣು ಹಲವಾರು ಪ್ರಯೋಜನಗಳನ್ನು ಹೊಂದಿದೆ. ನಿಮ್ಮ ಪಾತ್ರೆಯಲ್ಲಿ ಬರುವ ಮೊಟ್ಟೆಯ ವಾಸನೆಗೂ ಸಹ ಇದೇ ನಿಂಬೆಹಣ್ಣು ಪ್ರಯೋಜನ.
8/ 8
ಒಂದು ಹೋಳು ನಿಂಬೆಹಣ್ಣನ್ನು ತೆಗೆದುಕೊಂಡು ವಾಸನೆ ಇರುವ ಪಾತ್ರೆಯನ್ನು ಚನ್ನಾಗಿ ಉಜ್ಜಿ. ಅಲ್ಲದೇ ನೀವು ನಿಂಬೆ ರಸವನ್ನು ಬಿಸಿ ನಿರಿಗೆ ಹಾಕಿ ಅದರಲ್ಲಿ ಪಾತ್ರೆಯನ್ನು ಹಾಕಿ 1 ಗಂಟೆಯ ನಂತರ ತೊಳೆದರೆ ವಾಸನೆ ಹೋಗುತ್ತದೆ.