ಕುಳಿತುಕೊಳ್ಳುವ ಜೀವನಶೈಲಿ. ದೇಹದ ಚಟುವಟಿಕೆ ಕಡಿಮೆ ಇರುವುದು, ಕೆಲಸ ಮಾಡದೆ ಇರುವುದು, ಹೆಚ್ಚು ಹೊತ್ತು ಕುಳಿತೇ ಇರುವುದು ಹೊಟ್ಟೆಯ ಕೊಬ್ಬು ಹೆಚ್ಚಿಸುತ್ತದೆ. ಕಡಿಮೆ ದೈಹಿಕ ಚಟುವಟಿಕೆ, ಜಡ ಜೀವನಶೈಲಿಯು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ. ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಗಂಟೆಗಳ ಕಾಲ ಕೆಲಸ ಮಾಡುವುದು, ಜಡ ಜೀವನಶೈಲಿಯು ಹೊಟ್ಟೆಯ ಕೊಬ್ಬು ಉಂಟು ಮಾಡುತ್ತದೆ.
ಕಳಪೆ ಆಹಾರ ಸೇವನೆ. ಅಧಿಕ ಸಕ್ಕರೆ, ಸಂಸ್ಕರಿಸಿದ ಆಹಾರ ಮತ್ತು ಸ್ಯಾಚುರೇಟೆಡ್ ಕೊಬ್ಬು ಹೊಂದಿರುವ ಆಹಾರ ಸೇವನೆ ಹೊಟ್ಟೆಯ ಕೊಬ್ಬು ಹೆಚ್ಚಿಸುತ್ತದೆ. ನೀವು ಜಂಕ್ ಫುಡ್ ದಾಸರಾಗಿದ್ದರೆ ಇದು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ. ಹೆಚ್ಚು ಕರಿದ ಅಥವಾ ಹೆಚ್ಚು ಸಂಸ್ಕರಿಸಿದ ಆಹಾರ ಸೇವನೆ ತಪ್ಪಿಸಿ. ಜಂಕ್ ಫುಡ್ ಹೆಚ್ಚಿನ ಕ್ಯಾಲೋರಿ ಹೊಂದಿರುತ್ತದೆ. ಸ್ವಲ್ಪ ಪ್ರಮಾಣದ ಜಂಕ್ ಫುಡ್ ಸೇವನೆಯು ಸಹ ಕ್ಯಾಲೊರಿ ಹೆಚ್ಚಿಸುತ್ತದೆ.
ಹೆಚ್ಚು ಆಲ್ಕೊಹಾಲ್ ಸೇವನೆಯು ಕೆಟ್ಟ ಅಭ್ಯಾಸ. ಇದು ಸಹ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ. ಆಲ್ಕೋಹಾಲ್ ಬಹಳಷ್ಟು ಕ್ಯಾಲೊರಿ ಹೊಂದಿರುತ್ತದೆ. ನೀವು ಹೆಚ್ಚು ಕುಡಿದರೆ ತೂಕ ಹೆಚ್ಚಿಸುವ ಅಪಾಯ ಹೆಚ್ಚುತ್ತದೆ. ನಿದ್ರೆಯ ಕೊರತೆಯು ಸಹ ಹೊಟ್ಟೆಯ ಕೊಬ್ಬು ಹೆಚ್ಚುತ್ತದೆ. ಕಳಪೆ ನಿದ್ರೆ ಹಸಿವು ಮತ್ತು ಚಯಾಪಚಯ ನಿಯಂತ್ರಿಸುವ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ.