ರಾತ್ರಿ ಆಗುತ್ತಿದ್ದಂತೆಯೇ ಮನೆಯ ಹೆಂಗಸರಿಗೆ ಒಂದೇ ಯೋಚನೆ ಅದುವೇ ನಾಳೆ ಬೆಳಗ್ಗೆ ತಿಂಡಿ ಏನು ಅಂತ. ಹೌದು, ಪ್ರತೀ ನಿತ್ಯವೂ ನಾಳೆ ಬೆಳಗ್ಗೆ ಏನು ತಿಂಡಿ ಮಾಡೋದು ಅನ್ನೋದೆ ದೊಡ್ಡ ಯೋಚನೆ ಆಗಿರುತ್ತೆ.
2/ 8
ನಿಮಗಾಗಿ ಇಂದು ಸೂಪರ್ ಆಗಿರುವ ತಿಂಡಿಯ ಸಲಹೆಯನ್ನು ಕೊಡ್ತೀವಿ ನೋಡಿ. ಇಡ್ಲಿ ಉಪ್ಪಿಟ್ಟು ಇಂದಿನ ರೆಸಿಪಿ.
3/ 8
ಹೌದು, ಇಡ್ಲಿ ಯಾರ ಮನೆಯಲ್ಲಿ ಮಾಡೋದಿಲ್ಲ ಹೇಳಿ? ಸಾಮಾನ್ಯ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಹಾಗೆಯೇ ಮಲ್ಲಿಗೆ ಇಡ್ಲಿ ಎಂದರೆ ಹಲವಾರು ಜನರಿಗೆ ಅಚ್ಚು ಮೆಚ್ಚು, ಇದನ್ನು ಮಾಡುವುದು ಅಪರೂಪ.
4/ 8
ಹೀಗೆ ಮಾಡಿದ ಇಡ್ಲಿ ಉಳಿಯಿತು ಅಂದ್ರೆ ಅದನ್ನು ಎಸೆಯಬೇಡಿ. ಇದರಿಂದ ತಯಾರಿಸಬಹುದು ಸೂಪರ್ ಟೇಸ್ಟಿ ಉಪ್ಪಿಟ್ಟು.
5/ 8
ಉಳಿದ ಇಡ್ಲಿಯನ್ನು ಚೆನ್ನಾಗಿ ನಿಮಗೆ ಬೇಕಾದ ಗಾತ್ರದಲ್ಲಿ ಕಟ್ ಮಾಡ್ಬೋದು ಅಥವಾ ಫುಲ್ ಪುಡಿ ಮಾಡಿ. ನಂತರ ಚಿಕ್ಕದಾಗಿ ಈರುಳ್ಳಿಯನ್ನು ಕತ್ತರಿಸಿಕೊಳ್ಳಿ.
6/ 8
ಮೊದಲು ಒಂದು ಬಾಣಲೆಗೆ ಕೊಂಚ ಅಡುಗೆ ಎಣ್ಣೆಯನ್ನು ಹಾಕಿ. ಅದಕ್ಕೆ ಸಾಸಿವೆ, ಜೀರಿಗೆ, ಕಡಲೆಕಾಯಿ ಹಾಕಿ ಚೆನ್ನಾಗಿ ಹುರಿಯಿರಿ, ನಂತರ ಬೇಕಾದ್ರೆ ಕತ್ತರಿಸಿದ ಹಸಿ ಮೆಣಸಿನ ಕಾಯಿಯನ್ನು ಹಾಕ್ಬೋದು.
7/ 8
ಇದೆಲ್ಲಾ ಹುರಿದ ನಂತರ ಈಗ ನೀವು ಪುಡಿ ಮಾಡಿದ ಇಡ್ಲಿಯ ಹುಡಿಯನ್ನು ಹಾಕಿ. ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ, ನಿಂಬೆ ರಸವನ್ನು ಸ್ವಲ್ಪ ಹಾಕಿ, ಅರಿಶಿಣ ಕೂಡ ಹಾಕಿ ಚೆನ್ನಾಗಿ ಕಲಸಿ.
8/ 8
ಇದೀಗ ರುಚಿ ರುಚಿಯಾದ ಇಡ್ಲಿ ಉಪ್ಪಿಟ್ಟು ತಿನ್ನಲು ಸಿದ್ಧವಾಗಿದೆ. ನೀವು ಇದನ್ನು ಬೆಳಗ್ಗಿನ ತಿಂಡಿಗಾದ್ರೂ ತಿನ್ಬೋದು ಅಥವಾ ಸಂಜೆಯ ವೇಳೆಗಾದ್ರೂ , ಕಾಫಿಯೊಂದಿಗೆ ತಿನ್ನಬಹುದು.