Skin Care: ಈ ವಸ್ತು ಇದ್ರೆ ಪಾರ್ಲರ್ ಹೋಗೋದೇ ಬೇಡ, ಮನೆಯಲ್ಲೇ ಫೇಶಿಯಲ್ ಮಾಡಿಕೊಳ್ಳಬಹುದು
Facial Tips: ಸಾಮಾನ್ಯವಾಗಿ ಮಹಿಳೆಯರು ತ್ವಚೆಯ ಆರೈಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಫೇಶಿಯಲ್ ಮಾಡಿಸಲು ಪಾರ್ಲರ್ ಹೋಗುತ್ತಾರೆ. ಆದರೆ, ಅಲ್ಲಿ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುತ್ತಾರೆ. ಅದರ ಬದಲು ಮನೆಯಲ್ಲಿಯೇ ಕೇವಲ ಒಂದು ವಸ್ತು ಬಳಸಿ ಫೇಶಿಯಲ್ ಮಾಡಿಕೊಳ್ಳಬಹುದು. ಹೇಗೆ ಎಂಬುದು ಇಲ್ಲಿದೆ.
ಕೆಲಸ, ವೈಯಕ್ತಿಕ ಜೀವನ, ಮನೆ ಹೀಗೆ ಕೆಲಸದ ನಡುವೆ ಮಹಿಳೆಯರಿಗೆ ಬ್ರೇಕ್ ಸಿಗುವುದೇ ಅನುಮಾನ. ಸಿಕ್ಕಾಗ ತ್ವಚೆಯ ಆರೈಕೆ ಮಾಡುವುದು ಅಗತ್ಯ. ಅದಕ್ಕಾಗಿ ಪಾರ್ಲರ್ ಹೋಗುತ್ತೇವೆ. ಆದರೆ, ಅದಕ್ಕೂ ಸಮಯವಿಲ್ಲ ಎಂದರೆ ನೀವು ಮನೆಯಲ್ಲಿಯೇ ಫೇಶಿಯಲ್ ಮಾಡಿಕೊಳ್ಳಬಹುದು.
2/ 8
ಮನೆಯಲ್ಲಿಯೇ ಮಾಡಬಹುದಾದ ವಿವಿಧ ಫೇಶಿಯಲ್ಗಳಿವೆ, ಆದರೆ ಒಂದು ವಸ್ತುವಿದ್ರೆ ವಿವಿಧ ಫೇಶಿಯಲ್ ಮಾಡಬಹುದು. ಅದು ಅಲೋವೆರಾ ಫೇಶಿಯಲ್. ಹೌದು, ನೀವು ಮನೆಯಲ್ಲಿಯೇ ಅಲೋವೆರಾ ಫೇಶಿಯಲ್ ಮಾಡಿಕೊಳ್ಳಬಹುದು. ಹೇಗೆ ಎಂಬುದು ಇಲ್ಲಿದೆ.
3/ 8
ಅಲೋವೆರಾ ಕೇವಲ ಆಲೋವೆರಾವನ್ನು ಬಳಸಿ ನೀವು ತ್ವಚೆಯ ಅಂದವನ್ನು ಹೆಚ್ಚಿಸಬಹುದು. ಈ ಅಲೋವೆರಾ ಜೆಲ್ಗೆ ಸ್ವಲ್ಪ ಅರಿಶಿನ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ, ಸುಮಾರು 30 ನಿಮಿಷಗಳ ನಂತರ ತೊಳೆಯಿರಿ.
4/ 8
ಅಲೋವೆರಾ ಮತ್ತು ಶ್ರೀಗಂಧದ ಪುಡಿ ಅಲೋವೆರಾ ಮತ್ತು ಶ್ರೀಗಂಧದ ಪುಡಿ ಫೇಶಿಯಲ್ ನಿಮಗೆ ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಈ ಶ್ರೀಗಂಧದ ಪುಡಿ ಮತ್ತು ಅಲೋವೆರಾ ಜೆಲ್ ಅನ್ನು ಮಿಕ್ಸ್ ಮಾಡಿ, ಪೂರ್ತಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ.
5/ 8
ಅಲೋವೆರಾ ಮತ್ತು ಜೇನುತುಪ್ಪ ಅಲೋವೆರಾ ಜೆಲ್ಗೆ ಜೇನುತುಪ್ಪದ ಪ್ರಯೋಜನಗಳನ್ನು ನಾವು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಸಾಮಾನ್ಯವಾಗಿ ಇದನ್ನು ಎಲ್ಲರೂ ಬಳಸುತ್ತಾರೆ. ಈ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ, 20 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ.
6/ 8
ಅಲೋವೆರಾ ಮತ್ತು ನಿಂಬೆರಸ ಅಲೋವೆರಾ ಮತ್ತು ನಿಂಬೆರಸ ಕೇವಲ ತ್ವಚೆಯ ಆರೈಕೆಗೆ ಮಾತ್ರ ಅಲ್ಲ ಕೂದಲ ಆರೈಕೆಗೆ ಸಹ ಸಹಾಯ ಮಾಡುತ್ತದೆ. ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಂಡು, ಅದಕ್ಕೆ ನಿಂಬೆರಸ ಮಿಕ್ಸ್ ಮಾಡಿ. ಆ ಮಿಶ್ರಣವನ್ನು ಮುಖಕ್ಕೆ ನೀಟಾಗಿ ಹಚ್ಚಿ. 1 ಗಂಟೆ ಬಿಡಿ.
7/ 8
ಅಲೋವೆರಾ ಮತ್ತು ಅಕ್ಕಿಹಿಟ್ಟು ಅಲೋವೆರಾವನ್ನು ಬಳಸಿ ನಾವು ವಿವಿಧ ರೀತಿಯ ಫೇಶಿಯಲ್ ಮಾಡಬಹುದು. ಅದು ನಿಮ್ಮ ತ್ವಚೆಯ ಸರ್ವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅದರಲ್ಲಿ ಅಕ್ಕಿಹಿಟ್ಟು ಬಳಸಿ ಮಾಡುವುದು ಕೂಡ ಒಂದು. ಅಕ್ಕಿಹಿಟ್ಟನ್ನು ನೀರು ಬಳಸದೇ, ಕೇವಲ ಅಲೋವೆರಾ ಜೆಲ್ ಬಳಸಿ ಪೇಸ್ಟ್ ತಯಾರಿಸಿ ಬಳಸಿ ಸಾಕು.
8/ 8
ಅಲೋವೆರಾ ಮತ್ತು ತುಪ್ಪ ತುಪ್ಪವನ್ನು ತಿನ್ನುವುದರಿಂದ ಮಾತ್ರ ಅಲ್ಲ ಮುಖಕ್ಕೆ ಹಚ್ಚುವುದರಿಂದ ಸಹ ಹಲವು ಪ್ರಯೋಜನವಿದೆ. ಅಲೋವೆರಾ ಜೆಲ್ ಜೊತೆ ತುಪ್ಪವನ್ನು ಮಿಕ್ಸ್ ಮಾಡಿ, ಮುಖಕ್ಕೆ ಮಾಸ್ಕ್ ಹಾಕಿ.