ಪ್ರತಿದಿನ ಕತ್ತರಿಸಿದ ಹಣ್ಣುಗಳು ಮತ್ತು ಹಸಿ ತರಕಾರಿಗಳನ್ನು ಕೆಲ ಗಂಟೆಗಳಲ್ಲಿ ಸೇವಿಸಬೇಕು. ಇದರಿಂದ ದೇಹಕ್ಕೆ ಪೋಷಕಾಂಶಗಳು ದೊರೆಯುತ್ತದೆ. ಈ ಬಗ್ಗೆ 2006 ರಲ್ಲಿ ನಡೆಸಿದ ಅಧ್ಯಯನವೊಂದು ಕೆಲವು ಗಂಟೆಗಳ ನಂತರ ಕತ್ತರಿಸಿದ ತರಕಾರಿಗಳು ಮತ್ತು ಹಣ್ಣುಗಳಲ್ಲಿ ಕಡಿಮೆ ಪೋಷಕಾಂಶವಿದೆ ಎಂದು ಸೂಚಿಸಿದೆ. ಹಾಗಾದರೆ ಹಣ್ಣು ಮತ್ತು ತರಕಾರಿಗಳನ್ನು ಯಾವ ರೀತಿ ಕಟ್ ಮಾಡಿ ಬಾಕ್ಸ್ಗೆ ಹಾಕಬೇಕು, ಅವುಗಳನ್ನು ಹೇಗೆ ರಕ್ಷಿಸಬೇಕು ಎಂಬುವುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ಇಂದು ನಾವು ನಿಮಗೆ ನೀಡುತ್ತಿದ್ದೇವೆ.