ಕಾರಣ, ಎಲ್ಲಿ ಇತರರು ತನ್ನನ್ನು ನೋಡಿ ನಕ್ಕು, ಅಪಹಾಸ್ಯ ಮಾಡಿದರೆ ಅಥವಾ ಕೆಟ್ಟ ವಾಸನೆಗೆ ಕೆಟ್ಟದಾಗಿ ರಿಯಾಕ್ಟ್ ಮಾಡಿದರೆ ಅಂತ ತಳಮಳಗೊಳ್ಳುತ್ತಾರೆ. ಸಾಮಾನ್ಯವಾಗಿ ಹೂಸು ಬಿಟ್ಟಾಗ ನಾವು ಗ್ಯಾಸ್ಟ್ರಿಕ್ ಆಗಿದೆ ಎಂದು ಭಾವಿಸುತ್ತೇವೆ. ಆದರೆ ವಾಸ್ತವವಾಗಿ ಹೂಸು ಬಿಡುವುದು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ಅಷ್ಟಕ್ಕೂ ಹೂಸು ಉಂಟಾಗಲು ಕಾರಣವೇನು? ದಿನಕ್ಕೆ ಎಷ್ಟು ಬಾರಿ ಹೂಸು ಬಿಟ್ಟರೆ ಒಳ್ಳೆಯದು ಈ ಎಲ್ಲದರ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.
ಗಾಳಿಯ ಸೇವನೆ: ಜೀರ್ಣಕ್ರಿಯೆ ಮತ್ತು ಉಸಿರಾಟದಿಂದ ಸಣ್ಣ ಕರುಳಿನಲ್ಲಿ ಅನಿಲಗಳ ಸಂಗ್ರಹವಾದಾಗ ವಾಯು ಎಂದು ಕರೆಯಲ್ಪಡುವ ಹೂಸು ಬಿಡುಗಡೆಯಾಗುತ್ತದೆ. ನೀವು ಊಟ ಮಾಡುವಾಗ, ಅಗಿಯುವಾಗ ಅಥವಾ ನುಂಗುವಾಗ ಗಾಳಿಯನ್ನು ಸಹ ನುಂಗುತ್ತೀರಿ. ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಸೇರಿಕೊಳ್ಳುತ್ತದೆ. ಕೆಲವರು ಗಾಳಿಯನ್ನು ಹೀರಿಕೊಳ್ಳುವಾಗ, ಅದು ಹೆಚ್ಚುವರಿ ತೇಗು ಅಥವಾ ಹೂಸಿನ ರೂಪದಲ್ಲಿ ಬಿಡುಗಡೆಯಾಗುತ್ತದೆ.
ದಿನಕ್ಕೆ ಎಷ್ಟು ಬಾರಿ ಹೂಸು ಬರುತ್ತೆ: ಒಬ್ಬ ವ್ಯಕ್ತಿ ಪ್ರತಿದಿನ 14 ರಿಂದ 23 ಬಾರಿ ಹೂಸನ್ನು ಬಿಡುತ್ತಾನೆ. ನೀವು ಫಾಲೋ ಮಾಡುವ ಲೈಫ್ಸ್ಟೈಲ್, ನೀವು ಸೇವಿಸುವ ಆಹಾರದ ಆಧಾರದ ಮೇಲೆ ಹೂಸನ್ನು ಕಡಿಮೆ ಉತ್ಪಾದಿಸಬಹುದು. ಕೆಲವೊಮ್ಮೆ ಬರುವ ಹೂಸು ವಾಸನೆಯಿಂದ ಕೂಡಿರುತ್ತದೆ. ಮತ್ತೆ ಕೆಲವೊಮ್ಮೆ ವಾಸನೆ ಬರುವುದಿಲ್ಲ. ಕೆಲವರು ಹೂಸು ಬಿಡುವಾಗ ಸದ್ದನ್ನು ಕೂಡ ಮಾಡುವುದಿಲ್ಲ. ಮತ್ತೆ ಕೆಲವರು ಹೂಸು ಬಿಟ್ಟರೆ ಸುತ್ತಮುತ್ತಲಿರುವವರಿಗೆಲ್ಲಾ ಕೇಳಿಸುತ್ತದೆ.
ಹೂಸು ಬಿಡುವುದರ ಪ್ರಯೋಜನ: ಹೂಸು ಬಿಡುವುದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಹೊಟ್ಟೆ ನೋವು ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಆಹಾರವು ಆರೋಗ್ಯಕರ ಮತ್ತು ಸಮತೋಲಿತವಾಗಿದೆಯೇ ಎಂದು ಗುರುತಿಸಲು ನಿಮಗೆ ಸಹಾಯ ಮಾಡುತ್ತದೆ. ಆಹಾರ ಅಸಹಿಷ್ಣುತೆಯನ್ನು ಸೂಚಿಸುತ್ತದೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮುಂಚಿನ ಎಚ್ಚರಿಕೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ