ಹೆಚ್ಚಿನ ಜನರು ಹಲ್ಲು ನೋವು, ಕೊಳೆ, ಊತ, ದವಡೆಗಳಲ್ಲಿನ ನೋವಿಂದ ಬಳಲುತ್ತಾರೆ. ಇದರಿಂದ ಹಲ್ಲುಗಳು ಹಳದಿಯಾಗಿ ಕಾಣುತ್ತವೆ. ಇತರರೊಂದಿಗೆ ಮಾತನಾಡುವಾಗ ಈ ಹಳದಿ ಬಣ್ಣವು ಮುಜುಗರ ಉಂಟು ಮಾಡುತ್ತವೆ. ಹಲ್ಲು ಹಳದಿಯಾಗಲು ಹಲವು ಕಾರಣಗಳಿವೆ. ಇದು ಖನಿಜಗಳು ಮತ್ತು ಜೀವಸತ್ವಗಳ ಕೊರತೆಯಿಂದಾಗಿ ಅಥವಾ ಇತರ ಯಾವುದೇ ರೋಗಗಳ ಕಾರಣದಿಂದಾಗಿರಬಹುದು. ಹಲ್ಲುಗಳ ಹಳದಿ ಬಣ್ಣವನ್ನು ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಸ್ವಚ್ಛಗೊಳಿಸಬಹುದು.
ಹೈಡ್ರೋಜನ್ ಪೆರಾಕ್ಸೈಡ್: ಹೈಡ್ರೋಜನ್ ಪೆರಾಕ್ಸೈಡ್ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿದ್ದು ಅದು ಬ್ಯಾಕ್ಟೀರಿಯಾವನ್ನು ತಕ್ಷಣವೇ ಕೊಲ್ಲುತ್ತದೆ. ಜನರು ಹೈಡ್ರೋಜನ್ ಪೆರಾಕ್ಸೈಡ್ ನಿಂದ ಗಾಯವನ್ನು ಸ್ವಚ್ಛಗೊಳಿಸುತ್ತಾರೆ, ಇದರಿಂದಾಗಿ ಗಾಯದಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲಬಹುದು. ನೀವು ಹೈಡ್ರೋಜನ್ ಪೆರಾಕ್ಸೈಡ್ ನಿಂದ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಬಹುದು.