ಆದರೆ ಇವುಗಳನ್ನೇ ತಿಂದು, ತಿಂದು ಬೋರ್ ಆಗಿದ್ದರೆ, ನಾವಿಂದು ನಿಮಗೆ ಬ್ರೇಡ್ನಲ್ಲಿಯೇ ಮಾಡಬಹುದಾದ ಹೊಸ ಟೇಸ್ಟಿ ರೆಸಿಪಿಯೊಂದನ್ನು ಹೇಳಿಕೊಡುತ್ತೇವೆ. ಅಲ್ಲದೇ ಇದನ್ನು ಬಹಳ ಸರಳವಾಗಿ ಮತ್ತು ಸುಲಭವಾಗಿ ತಯಾರಿಸಬಹುದು. ವಿಶೇಷವೆಂದರೆ ಇದನ್ನು ತಯಾರಿಸಲು ನಿಮಗೆ ಹೆಚ್ಚು ಸಮಯ ಕೂಡ ಬೇಕಿಲ್ಲ. ಅದ್ಯಾವುದು ಅಂತ ಯೋಚಿಸಬೇಡಿ, ಅದುವೇ ಟೇಸ್ಟಿ ಆ್ಯಂಡ್ ಚಿಲ್ಲಿ ಬ್ರೆಡ್ ರೆಸಿಪಿ. ಇದನ್ನು ಮಾಡುವುದೇಗೆ ಎಂಬುವುದರ ಕುರಿತ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಚಿಲ್ಲಿ ಬ್ರೆಡ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು: ಬ್ರೆಡ್ ಪೀಸ್ಗಳು - 5, ಕತ್ತರಿಸಿದ ಬೆಳ್ಳುಳ್ಳಿ - 1 ಟೇಬಲ್ ಸ್ಪೂನ್, ಕತ್ತರಿಸಿದ ಶುಂಠಿ - 1 ಟೇಬಲ್ ಸ್ಪೂನ್, ಕತ್ತರಿಸಿದ ಹಸಿರು ಮೆಣಸಿನಕಾಯಿಗಳು - 2 ಟೇಬಲ್ ಸ್ಪೂನ್, (ಕತ್ತರಿಸಿದ) ಈರುಳ್ಳಿ – 1, (ಕತ್ತರಿಸಿದ) ಮೆಣಸಿನಕಾಯಿ - 1, ಉಪ್ಪು - 1/4 ಚಮಚ, ಕಾಳುಮೆಣಸಿನ ಪುಡಿ - 1/2 ಚಮಚ, ವಿನೆಗರ್ – 1ಟೇಬಲ್ ಸ್ಪೂನ್, ಸೋಯಾ ಸಾಸ್ - 2 ಟೀಸ್ಪೂನ್, ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು. ಚಿಲ್ಲಿ ಪೇಸ್ಟ್ – 1 ಟೇಬಲ್ ಸ್ಪೂನ್, ಟೊಮೆಟೊ ಕೆಚಪ್ - 2 ಚಮಚ, ಜೋಳದ ಹಿಟ್ಟು - 1 1/2 ಚಮಚ, ನೀರು - 1/4 ಕಪ್, ಈರುಳ್ಳಿ ಎಲೆ – 1ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು - ಒಂದು ಗೊಂಚಲು.
ಈಗ ಕತ್ತರಿಸಿದ ಈರುಳ್ಳಿ ಎಲೆಗಳು ಮತ್ತು ಈರುಳ್ಳಿ ಸೇರಿಸಿ, ಅದನ್ನೂ ಮಿಶ್ರಣ ಮಾಡಿ. ನಂತರ ಅದಕ್ಕೆ ನೀರು ಹಾಕಿ ಕುದಿಸಿ. ನಂತರ ಕಾರ್ನ್ ಫ್ಲೋರ್ ಮತ್ತು ನೀರನ್ನು ಹಾಕಿ ಗಂಟುಗಳಿಲ್ಲದಂತೆ ಬಾಣಲೆಗೆ ಸೇರಿಸಿ. ನಂತರ ಟೋಸ್ಟ್ ಮಾಡಿದ ಬ್ರೆಡ್ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಕೊನೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಮಸಾಲೆಯುಕ್ತ ಚಿಲ್ಲಿ ಬ್ರೆಡ್ ಸಿವಿಯಲು ಸಿದ್ಧ.