ಅನೇಕ ಮಂದಿಗೆ ಸೂಪ್ಗಳು ಅಂದ್ರೆ ತುಂಬಾ ಇಷ್ಟ. ಹಸಿವನ್ನು ನೀಗಿಸುವ ಮತ್ತು ಬೇಗ ತಯಾರಿಸಬಹುದಾದ ಅಡುಗೆಗಳಲ್ಲಿ ಸೂಪ್ ಕೂಡ ಒಂದು. ಇದಕ್ಕೆ ಸಾಕಷ್ಟು ಪದಾರ್ಥಗಳು ಬೇಕಿಲ್ಲ. ಮನೆಯಲ್ಲಿರುವ ಕೆಲ ಪದಾರ್ಥಗಳನ್ನೇ ಬಳಸಿಕೊಂಡೇ ತುಂಬಾ ಸುಲಭವಾಗಿ ತಯಾರಿಸಬಹುದು. ಇಲ್ಲಿಯವರೆಗೂ ವೆಜಿಟೇಬಲ್, ಟೊಮೆಟೊ, ಮೀನು, ಮಟನ್, ಚಿಕನ್ ಮತ್ತು ಎಗ್ ಸೂಪ್ಗಳನ್ನು ಎಲ್ಲರೂ ಟೇಸ್ಟ್ ಮಾಡಿದ್ದೀರಾ. ಆದರೆ ಮಜ್ಜಿಗೆ ಮತ್ತು ಅನ್ನದೊಂದಿಗೆ ಸೂಪ್ ಮಾಡಿರುವುದನ್ನು ಎಲ್ಲಾದರೂ ಕೇಳಿದ್ದೀರಾ?
ಮಜ್ಜಿಗೆಯ ಪೌಷ್ಟಿಕಾಂಶದ ಪ್ರಯೋಜನವೆಂದರೆ ಅದು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಾವು ಸಾಮಾನ್ಯವಾಗಿ ಕುಡಿಯುವ ಹಾಲಿಗಿಂತ ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನವಿರುವ ಮಜ್ಜಿಗೆ ಸೂಪ್ ಅನ್ನು ಬಹಳ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ, ಫ್ಯಾಮಿಲಿ ಜೊತೆಗೆ ಸವಿಯಿರಿ. ಖಂಡಿತ ಈ ಸೂಪ್ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ.
ನಂತರ ಒಂದು ಕಡಾಯಿಯನ್ನು ಒಲೆಯಲ್ಲಿ ಇಟ್ಟು. ಅದಕ್ಕೆ ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ, 2-3 ನಿಮಿಷಗಳ ಕಾಲ ಫ್ರೈ ಮಾಡಿ, ಪಕ್ಕಕ್ಕೆ ಇಡಿ. ಅದೇ ರೀತಿ ಪುದೀನಾವನ್ನು ಹುರಿದು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಈಗ, ನೆನೆಸಿದ ಅಕ್ಕಿಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಬೇಯಿಸಿ. ಅನ್ನ ಬೆಂದಾಗ ಅದಕ್ಕೆ ಬೇಕಾದಷ್ಟು ಜೋಳದ ಹಿಟ್ಟು, ಉಪ್ಪು, ಮಜ್ಜಿಗೆ ಹಾಕಿ ಮತ್ತೆ ಕುದಿಸಿ. ನಂತರ ಕತ್ತರಿಸಿದ ಮತ್ತು ಹುರಿದ ಪುದೀನಾ, ಜೀರಿಗೆ, ಕರಿಬೇವಿನ ಎಲೆಗಳನ್ನು ಸೇರಿಸಿ. 2 ರಿಂದ 3 ನಿಮಿಷ ಬೇಯಿಸಿ.
ಕೊನೆಗೆ ಕತ್ತರಿಸಿದ ಹಸಿಮೆಣಸಿನಕಾಯಿಯನ್ನು ಹಾಕಿ ಬೆರೆಸಿ, ಒಲೆಯಿಂದ ಇಳಿಸಿದರೆ ರುಚಿಕರವಾದ ಅಕ್ಕಿ ಮಜ್ಜಿಗೆ ಸೂಪ್ ಸವಿಯಲು ಸಿದ್ಧ. ಈ ರುಚಿಕರವಾದ ಸೂಪ್ ಅನ್ನು ಒಂದು ಕಪ್‌ಗೆ ಸುರಿದು, ಅದರ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ ಮತ್ತು ಬಿಸಿ, ಬಿಸಿಯಾಗಿ ತಿನ್ನಿ. ಸಂಜೆ ಇದನ್ನು ಇದನ್ನು ಸೇವಿಸುವುದು ಉತ್ತಮ. ಮಳೆಗಾಲದಲ್ಲೂ ಇದನ್ನು ತಯಾರಿಸಿ ಕುಡಿಯಬಹುದು.