ಏಕೆಂದರೆ ಮಾಂಸಹಾರಿಗಳು ಚಿಕನ್ನಿಂದ ವೆರೈಟಿ ಫುಡ್ ಮಾಡಿ ತಿಂದರೆ, ಚಿಕನ್ನಲ್ಲಿ ಹೇಗೆ ಬಗೆಗೆಯ ಫುಡ್ಗಳನ್ನು ತಯಾರಿಸಲಾಗುತ್ತದೆಯೋ, ಅದೇ ರೀತಿ ಪನೀರ್ನಲ್ಲಿ ಸಸ್ಯಾಹಾರಿಗಳು ತರವೇರಿ ಟೇಸ್ಟಿ ಆಹಾರ ಪದಾರ್ಥಗಳನ್ನು ಮಾಡಿ ಸವಿಯುತ್ತಾರೆ. ಸದ್ಯ ನಾವಿಂದು ಚಿಕನ್ ಮಂಚೂರಿಯಂತೆ, ಸಸ್ಯಾಹಾರಿಗಳಿಗಾಗಿ ಪನೀರ್ನಿಂದ ಮಾಡುವ ಪನೀರ್ ಮಂಚೂರಿಯನ್ನು ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ ಬನ್ನಿ.
ಪನೀರ್ ಮಂಚೂರಿಯನ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು: ಎಣ್ಣೆ - 3 ಟೀಸ್ಪೂನ್, ಕತ್ತರಿಸಿದ ಬೆಳ್ಳುಳ್ಳಿ - 1 ಚಮಚ, ಕತ್ತರಿಸಿದ ಶುಂಠಿ - 1 ಚಮಚ, ಕತ್ತರಿಸಿದ ಈರುಳ್ಳಿ - 1, ಮೆಣಸಿನ ಪುಡಿ - 2 ಚಮಚ, ಕಾಳುಮೆಣಸಿನ ಪುಡಿ - 1/2 ಚಮಚ, ಟೊಮೆಟೊ ಕೆಚಪ್ - 1/2 ಕಪ್, ಸೋಯಾ ಸಾಸ್ - 2 ಟೀಸ್ಪೂನ್, ಕಾರ್ನ್ ಫ್ಲೋರ್ ಮಿಶ್ರಣ - 1/2 ಕಪ್, ಈರುಳ್ಳಿ ಹೂ - 2, ಈರುಳ್ಳಿ ಎಲೆ ಪಾಲಕ್ - ಕಾಲು ಕಪ್.