Protein Coffee: ಕಾಫಿಯಲ್ಲಿ ಪೋಷಕಾಂಶ ಇರುವಂತೆ ತಯಾರಿಸಬಹುದು ಗೊತ್ತಾ? ನೀವೂ ಮಾಡಿ ಪ್ರೊಟೀನ್ ಕಾಫಿ!
How to make Protein Coffee: ಕಾಫಿಗೂ ಪ್ರೋಟೀನ್ ಸೇರಿಸಲು ಸಾಧ್ಯವಾ? ಕಾಫಿಗೆ ಪ್ರೋಟೀನ್ ಬೆರೆಸೋದು ಹೇಗೆ? ಇದು ಆರೋಗ್ಯಕ್ಕೆ ಒಳ್ಳೆಯದ್ದಾ, ಕೆಟ್ಟದ್ದಾ? ಪೂರ್ತಿ ವಿವರ ಇಲ್ಲಿದೆ...
ಪ್ರೊಟೀನ್ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಜನ ಇತ್ತೀಚೆಗೆ ಕಾಫಿಗೂ ಪ್ರೋಟೀನ್ ಬೆರೆಸಿಕೊಂಡು ಕುಡಿಯುತ್ತಿದ್ದಾರೆ. ಇದೊಂದು ಹೊಸಾ ಟ್ರೆಂಡ್ ಆಗಿದ್ದು ಇದನ್ನು 'ಪ್ರೋಫಿ' ಎನ್ನುತ್ತಾರೆ. ಹಾಗಿದ್ರೆ ಕಾಫಿಗೆ ಪ್ರೋಟೀನ್ ಬೆರೆಸುವುದು ಒಳ್ಳೆಯದಾ? ಹೇಗೆ ಇದನ್ನು ತಯಾರಿಸುವುದು? ಈ ಬಗ್ಗೆ ಇರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
2/ 6
Prophylaxis ಎನ್ನುವ ಪದ ಇತ್ತೀಚೆಗೆ ಸಾಧಾರಣವಾಗಿ ಕೇಳಿಬರುತ್ತಿದೆ. ವ್ಯಾಯಾಮ ಮಾಡುವವರು, ವರ್ಕೌಟ್ ಮಾಡಿದ ನಂತರ ಪ್ರೋಟೀನ್ ಶೇಕ್ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಕಾಫಿ ಕುಡಿಯುವ ಅಭ್ಯಾಸ ಬಿಡಲು ಅನೇಕರು ತಯಾರಿರುವುದಿಲ್ಲ. ಇವರಿಗೆಲ್ಲಾ ಸೂಪರ್ ಸೊಲ್ಯೂಶನ್ ಆಗಿ ಪ್ರೋಟೀನ್ ಕಾಫಿ ಬಂದಿದೆ.
3/ 6
ಇದನ್ನು ಬಿಸಿ ಪಾನೀಯವಾಗಿ ಮಾಡಲು ಸಾಧ್ಯವಿಲ್ಲ. ಕೋಲ್ಡ್ ಕಾಫಿಗೆ ಪ್ರೋಟೀನ್ ಪುಡಿ ಅಥವಾ ಲಿಕ್ವಿಡ್ ಪ್ರೋಟೀನ್ ಬೆರೆಸಿ ಅದನ್ನು ಪ್ರೊಫಿಯಾಗಿ ಬದಲಾಯಿಸಬಹುದು. ಆಗ ಕಾಫಿಯ ರುಚಿ, ಪ್ರೋಟೀನ್ ಆರೋಗ್ಯ ಪ್ರಯೋಜನ ಎರಡೂ ಸಿಕ್ಕಂತಾಗುತ್ತದೆ.
4/ 6
ನಮ್ಮ ದೇಹ ತೂಕದ ಪ್ರತೀ ಒಂದು ಕೆಜಿಗೆ 0.8 ಗ್ರಾಂಗಳಷ್ಟು ಪ್ರೋಟೀನ್ ಅವಶ್ಯಕತೆ ಇದೆ. ಹಾಗಾಗಿ ಹೆಚ್ಚು ಮಾಂಸಖಂಡವನ್ನು ಬೆಳೆಸಲು ಉದ್ದೇಶಿಸುವವರು ಪ್ರೋಟೀನ್ ನನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರೋಟೀನ್ ಕಾಫಿ ಇಂಥವರಿಗೆಲ್ಲಾ ಬಹಳ ಪ್ರಯೋಜನಕಾರಿ ಪೇಯವಾಗಿದೆ.
5/ 6
ದಏಹತೂಕ ಇಳಿಸಲು ಪ್ರಯತ್ನಿಸುವವರು ಅಥವಾ ಕಡಿಮೆ ಕ್ಯಾಲೊರಿ ಸೇವಿಸುವ ನಿರ್ಧಾರ ಮಾಡಿದವರಿಗೆಲ್ಲಾ ಇದು ಬಹಳ ಪ್ರಯೋಜನಕಾರಿ. ಆದರೆ ಒಂದು ವಿಚಾರ ನೆನಪಿರಲಿ ಪ್ರೋಟೀನ್ ಮತ್ತು ಕಾಫಿ (ಕೆಫೀನ್) ಎರಡೂ ಹಿತಮಿತವಾಗಿಯೇ ಇರಬೇಕು. ಎರಡು ಕೂಡಾ ಹೆಚ್ಚಾದರೆ ಬಹಳ ಸಮಸ್ಯೆ ತಂದೊಡ್ಡುತ್ತದೆ.
6/ 6
ಕಾಫಿ ಕುಡಿಯದೇ ಉಇರಲು ಸಾಧ್ಯವೇ ಇಲ್ಲ ಎನ್ನುವವರು ದಿನಕ್ಕೆ ಹೆಚ್ಚೆಂದರೆ ಒಮ್ಮೆ ಇದನ್ನು ಸೇವಿಸಿ. ಉಳಿದಂತೆ ಪ್ರೋಟೀನ್ ಗಾಗಿ ಮೊಟ್ಟೆ, ಓಟ್ಸ್, ಕಿನೋ ಮುಂತಾದ ಅನೇಕ ಆಹಾರಗಳು ನೈಸರ್ಗಿಕವಾಗಿ ಲಭ್ಯವಿದೆ. ಅವೆಲ್ಲವೂ ಇದಕ್ಕಿಂತ ಉತ್ತಮ ಪ್ರೋಟೀನ್ ಮೂಲಗಳು ಎನ್ನುತ್ತಾರೆ ವೈದ್ಯರು.