ಮಾವಿನ ಕಾಯಿಯನ್ನು ತೊಳೆದು ಚೆನ್ನಾಗಿ ಒರೆಸಿಕೊಳ್ಳಬೇಕು, ನಂತರ ನಿಮಗೆ ಬೇಕಾದ ಗಾತ್ರದಲ್ಲಿ ಮಾವಿನ ಕಾಯಿಯನ್ನು ಕಟ್ ಮಾಡಿಕೊಳ್ಳಿ. ನೀವು ಉಪ್ಪಿನಕಾಯಿಯನ್ನು ಇಡಲು ಒಂದು ಜಾಡಿಯನ್ನು ಇಎಬೇಕು, ಅದ್ರಲ್ಲಿ ನೀರಿನಾಂಶ ಇರಲೇಬಾರದು. ಜಾಡಿಗೆ ಮಾವಿನಕಾಯಿ ಹೋಳುಗಳನ್ನು ಹಾಕಿ ಅದರ ಮೇಲೆ ಒಂದು ಲೇಯರ್ ಉಪ್ಪು ಹಾಕಿ. ಹೀಗೆ ಒಂದರ ಮೇಲೊಂದರಂತೆ ಮಾವಿನಕಾಯಿ ಮತ್ತು ಉಪ್ಪನ್ನು ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿ ಎರಡರಿಂದ ಮೂರು ದಿನಗಳವರೆಗೆ ಇಡಬೇಕು.
ನಂತರ ಮಿಕ್ಸಿ ಜಾರ್‍ಗೆ ಹುರಿದಿಟ್ಟುಕೊಂಡ ಪದಾರ್ಥಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ, ಸ್ವಲ್ಪ ಸಾಸಿವೆ ಮತ್ತು ಪುಡಿ ಮಾಡಿದ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ. ನಂತರ ಮಾವಿನಕಾಯಿ ಹೋಳು ಮತ್ತು ಕುದಿಸಿದ ನೀರನ್ನು ಹಾಕಿ ತಿರುವಿ. ನೀರು ಇಂಗಿದ ನಂತರ ಒಲೆಯಿಂದ ಇಳಿಸಿ ತಣ್ಣಗಾದ ನಂತರ ಒಂದು ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿ ಎರಡು ದಿನಗಳ ನಂತರ ಬಳಸಿ.