ಮೊದಲಿಗೆ ಮರದಿಂದ ಹಸಿರಾದ ಬೆಳೆದ ಹಲಸಿನಕಾಯಿಗಳನ್ನು ಕೊಯ್ದು ತಂದು ನಂತರ ಅದನ್ನು ಸರಿಯಾಗಿ ಕತ್ತರಿಸಿ ಮೇಣ ತೆಗೆಯಿರಿ. ನಂತರ ಅದನ್ನು ಮುಂದಿನ ಹಂತವಾಗಿ ನಾವು ಹೇಳಿರುವಂತೆ ಮಾಡಿ.
2/ 7
ಈ ರೀತಿ ಹಲಸಿನ ತೊಳೆಗಳನ್ನು ಒಂದೊಂದಾಗಿ ಬಿಡಿಸಿ. ಅದರಲ್ಲಿರುವ ಬೀಜವನ್ನು ತೆಗೆಯಿರಿ. ನಂತರ ಅದನ್ನು ಉದ್ದನೆಯ ಆಕಾರದಲ್ಲಿ ಕತ್ತರಿಸಿ.
3/ 7
ನಂತರ ಒಂದು ದೊಡ್ಡ ಬಾಣಲೆಗೆ ತುಂಬಾ ಎಣ್ಣೆ ಹಾಕಿ. ಆ ಎಣ್ಣೆ ಚೆನ್ನಾಗಿ ಕಾಯುವಂತೆ ಮಾಡಿ. ಎಣ್ಣೆ ಕಾದಿದೆಯಾ ನೋಡಲು ಒಂದು ಹಲಸಿನಕಾಯಿ ಚಿಪ್ಸ್ ಚೂರು ಹಾಕಿ.
4/ 7
ನಂತರ ಎಣ್ಣೆ ಕಾದಿದೆ ಎಂದು ತಿಳಿದರೆ ನಂತರ ನೀವು ಕಟ್ ಮಾಡಿದ ಚಿಪ್ಸ್ ತುಂಡುಗಳನ್ನು ಬಾಣಲೆಗೆ ಬಿಡಿ. ನಂತರ ಅದರಲ್ಲಿ ಒಂದು ರೀತಿ ಶಬ್ಧ ಬರುತ್ತದೆ ಆ ಶಬ್ಧ ನಿಂತ ನಂತರ ಅದನ್ನು ಎಣ್ಣೆಯಿಂದ ಹೊರತೆಗೆಯಿರಿ.
5/ 7
ತುಂಬಾ ಹೊತ್ತು ಹಾಗೇ ಬಿಟ್ಟರೆ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಅದಕ್ಕಿಂತ ಮುಂಚಿತವಾಗಿ ಎಣ್ಣೆಯಿಂದ ಹೊರತೆಗೆಯಿರಿ. ಕೆಲವರು ಎಣ್ಣೆಯಲ್ಲೇ ಉಪ್ಪನ್ನು ಹಾಕುತ್ತಾರೆ.
6/ 7
ಇನ್ನು ಕೆಲವರು ಎಣ್ಣೆಗೆ ಹಲಸಿನಕಾಯಿ ತುಂಡುಗಳನ್ನು ಹಾಕಿದ ತಕ್ಷಣ ಬಾಣಲೆಗೆ ಉಪ್ಪು ಹಾಕುತ್ತಾರೆ. ಇದು ರೂಢಿ ಇಲ್ಲದವರಿಗೆ ಕಷ್ಟವಾಗಬಹುದು. ಈ ರೀತಿಯೂ ನೀವು ಮಾಡಬಹುದು.
7/ 7
ಎಣ್ಣೆಯಿಂದ ಹೊರತೆಗೆದ ನಂತರ ನೀವು ಅದಕ್ಕೆ ಉಪ್ಪು, ಅರಶಿನ, ಖಾರದ ಪುಡಿ, ಬೇಕಾದರೆ ಬ್ಲಾಕ್ ಸಾಲ್ಟ್ ಕೂಡಾ ಹಾಕಬಹುದು.
First published:
17
Jackfruit Chips: ಈ ವಿಧಾನ ಬಳಸಿ- ಮನೆಯಲ್ಲೇ ಗರಿಗರಿಯಾದ ಹಲಸಿನಕಾಯಿ ಚಿಪ್ಸ್ ಮಾಡಿ