ಬೆಳ್ಳುಳ್ಳಿ ಉಪ್ಪು ದೇಹ ತೂಕ ಕಡಿಮೆ ಮಾಡಲು ಕೂಡ ಸಹಾಯಕ. ಏಕೆಂದರೆ ಇದು ಉತ್ತಮ ಪ್ರಮಾಣದ ಫೈಬರ್ ಅಂಶವನ್ನು ಹೊಂದಿರುತ್ತದೆ. ಇದರಿಂದ ಜೀರ್ಣಕ್ರಿಯೆ ಸಹ ಸುಧಾರಿಸುತ್ತದೆ
| June 28, 2020, 3:00 PM IST
1/ 7
ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಕ್ರಮಗಳ ಮೊರೆ ಹೋಗಬೇಕಾಗುತ್ತದೆ. ಅದರಲ್ಲೂ ನಾವು ದೈನಂದಿನ ಬಳಸುವ ಕೆಲ ಆಹಾರ ಪದಾರ್ಥಗಳ ಬಳಕೆಯಿಂದಲೇ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದು. ಇಂತಹ ಆಹಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಕೂಡ ಒಂದು. ಏಕೆಂದರೆ ಸಾಮಾನ್ಯವಾಗಿ ಅನೇಕ ಮನೆಮದ್ದುಗಳಲ್ಲಿ ಬೆಳ್ಳುಳ್ಳಿಯ ಬಳಕೆ ಅತ್ಯವಶ್ಯಕ.
2/ 7
ಕೂದಲಿನ ಅಥವಾ ಚರ್ಮದ ಸಮಸ್ಯೆಯಿರಲಿ...ಹೀಗೆ ಪ್ರತಿಯೊಂದು ಸಮಸ್ಯೆಗೆ ಚಿಕಿತ್ಸೆ ಬೆಳ್ಳುಳ್ಳಿ ಮೂಲಕ ಪರಿಹಾರ ಕಾಣಬಹುದು. ಹೀಗಾಗಿಯೇ ಆಹಾರದಲ್ಲಿ ಬೆಳ್ಳುಳ್ಳಿ ಉಪ್ಪನ್ನು ಬಳಕೆಯನ್ನು ಹೆಚ್ಚು ಮಾಡುವಂತೆ ಕೆಲ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಬೆಳ್ಳುಳ್ಳಿ ಉಪ್ಪನ್ನು ಸೇರಿಸಿದರೆ ಸಿಗುವ ಅತ್ಯುತ್ತಮ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.
3/ 7
ಬೆಳ್ಳುಳ್ಳಿ ಉಪ್ಪು ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ವಾಸೋಡಿಲೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ, ರಕ್ತದ ಹರಿವು ಉತ್ತಮಗೊಳ್ಳುತ್ತದೆ. ಹಾಗೆಯೇ ರಕ್ತನಾಳಗಳು ಸಹ ತೆರೆದುಕೊಳ್ಳುತ್ತವೆ. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
4/ 7
ಬೆಳ್ಳುಳ್ಳಿ ಉಪ್ಪಿನ ಬಳಕೆಯು ಕೊಲೆಸ್ಟ್ರಾಲ್ ಸಮಸ್ಯೆಗೆ ಪ್ರಯೋಜನಕಾರಿ. ಏಕೆಂದರೆ ಈ ಉಪ್ಪಿನ ಬಳಕೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
5/ 7
ಬೆಳ್ಳುಳ್ಳಿ ಉಪ್ಪು ತೂಕವನ್ನು ಕಡಿಮೆ ಮಾಡಲು ಕೂಡ ಸಹಾಯಕ. ಏಕೆಂದರೆ ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿಯಿಂದ ತಯಾರಿಸಿದ ಉಪ್ಪನ್ನು ಸೇರಿಸಬಹುದು.
6/ 7
ಬೆಳ್ಳುಳ್ಳಿ ಉಪ್ಪು ಆರೊಮ್ಯಾಟಿಕ್ ಉಪ್ಪು. ಈ ಉಪ್ಪನ್ನು ಪಿಜ್ಜಾ, ಪಾಸ್ಟಾ, ಸಲಾಡ್, ಫ್ರೆಂಚ್ ಫ್ರೈಸ್, ಪಾಪ್ಕಾರ್ನ್, ಬ್ರೆಡ್ ಟೋಸ್ಟ್ ಮತ್ತು ಬೇಯಿಸಿದ ತರಕಾರಿಗಳಿಗೆ ಸಿಂಪಡಿಸುವ ಮೂಲಕ ನೀವು ರುಚಿಯನ್ನು ಹೆಚ್ಚಿಸಬಹುದು.
7/ 7
ಬೆಳ್ಳುಳ್ಳಿ ಉಪ್ಪನ್ನು ತಯಾರಿಸುವ ವಿಧಾನ: ಬೆಳ್ಳುಳ್ಳಿ ಉಪ್ಪು ಸಾಮಾನ್ಯ ಉಪ್ಪು ಮತ್ತು ಬೆಳ್ಳುಳ್ಳಿ ಪುಡಿ ಮಿಶ್ರಣ. ಈ ಉಪ್ಪನ್ನು ತಯಾರಿಸಲು, ಮೂರನೇ ಒಂದು ಭಾಗ ಸಾಮಾನ್ಯ ಉಪ್ಪು ಮತ್ತು ಒಂದು ಭಾಗ ಬೆಳ್ಳುಳ್ಳಿ ಪುಡಿಯನ್ನು ಮಿಶ್ರಣ ಮಾಡಿ. ಅದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು 180 ಡಿಗ್ರಿ ಸೆಂಟಿಗ್ರೇಡ್ ಒಲೆಯಲ್ಲಿ ಒಂದು ಗಂಟೆ ಬೇಯಿಸಿ. ಬಳಿಕ ಮತ್ತಷ್ಟು ಪುಡಿಯಾಗಲು ಮಿಕ್ಸಿಯಲ್ಲಿ ಹಾಕಿ ಪೌಡರ್ ರೀತಿ ಮಾಡಿ. ಇಷ್ಟು ಮಾಡಿದ್ರೆ ನಿಮ್ಮ ಬೆಳ್ಳುಳ್ಳಿ ಉಪ್ಪು ಸಿದ್ಧವಾಗಿದೆ. ಇದನ್ನು ಗಾಳಿ ಸೇರದಂತೆ ಬಿಗಿಯಾದ ಪಾತ್ರೆಯಲ್ಲಿ ಸಂಗ್ರಹಿಸಿ, ಬೇಕಾದಾಗ ಬಳಸಿಕೊಳ್ಳಿ.