ಗೃಹಿಣಿಯರು ಮನೆಯಲ್ಲಿ ನಾನಾರೀತಿಯ ಅಡುಗೆ, ರೆಸಿಪಿಗಳನ್ನು ಕಂಡುಹಿಡಿದು, ಮನೆಯವರಿಗೆ ಉಣ ಬಡಿಸುತ್ತನೇ ಇರುತ್ತಾರೆ. ನಿಮಗೆ ಹಳ್ಳಿ ಶೈಲಿಯಲ್ಲಿ ಸಾಂಬಾರ್ ಮಾಡುವ ವಿಧಾನದ ಬಗ್ಗೆ ಇಂದು ತಿಳಿಸಿಕೊಡಲಿದ್ದೇವೆ.
2/ 7
ಬಸಳೆ ಸೊಪ್ಪಿನ ಸಾಂಬಾರ್ ಬಗ್ಗೆ ಹೇಳಲಿದ್ದೇವೆ. ಇದಕ್ಕೆ ಬೇಕಾಗುವ ಸಾಮಾಗ್ರಿಗಳು: ಬಸಳೆ ಸೊಪ್ಪು, ತೊಗರಿ ಬೇಳೆ, ಈರುಳ್ಳಿ, ಅರಿಶಿಣ, ಬೆಲ್ಲ, ತುರಿದ ತೆಂಗು, ಹುಳಿ, ಕೊತ್ತೊಂಬರಿ ಸೊಪ್ಫು, ಜೀರಿಗೆ, ಮೆಂತ್ಯೆ ಕಾಳು, ಉಪ್ಪು, ಜೀರಿಗೆ, ಸಾಸಿವೆ, ಕೆಂಪು ಮೆಣಸು.
3/ 7
ಸಾಸಿವೆ, ಮೆಣಸು, ಜೀರಿಗೆ, ಮೆಂತ್ಯೆ ಕಾಳು, ಸಾಸಿವೆ, ತುರಿದ ತೆಂಗಿನ ಕಾಯಿಯನ್ನೆಲ್ಲಾ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇವೆಲ್ಲವೂ ನುಣ್ಣಗೆ ಆಗಬೇಕು. ಇದು ಸಾಂಬಾರ್ನ ಮಸಾಲೆ.
4/ 7
ನಂತರ ಬಸಳೆ ಸೊಪ್ಪನ್ನು ನಿಮಗೆ ಬೇಕಾದ ಹಾಗೆ ಕಟ್ ಮಾಡಿಕೊಳ್ಳಿ. ಇದರ ಜೊತೆಗೆ ಈರುಳ್ಳಿಯನ್ನು ಕೂಡ ಕಟ್ ಸಣ್ಣದಾಗಿ ಕತ್ತರಿಸಿಕೊಳ್ಳಿ. ಕಟ್ ಮಾಡಿದ ಸೊಪ್ಪಿಗೆ ಹುಣಸೆ ಹಣ್ಣು ಬೆರೆಸಿಟ್ಟುಕೊಳ್ಳಿ.
5/ 7
ಸೊಪ್ಪಿಗೆ ನಿಮಗೆ ಬೇಕಾದಷ್ಟು ಪ್ರಮಾಣಕದಲ್ಲಿ ಉಪ್ಪು ಮತ್ತು ಬೆಲ್ಲವನ್ನು ಹಾಕಿ, 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಬಸಳೆ ಸೊಪ್ಪು ಮೆತ್ತಗೆ ಆಗಬೇಕು.
6/ 7
ಈ ಸೊಪ್ಪು ಬೆಂದ ನಂತರದಲ್ಲಿ, ಆಗಲೇ ರುಬ್ಬಿಕೊಂಡ ಮಸಾಲೆ ಪದಾರ್ಥಗಳನ್ನು ಈ ಪಾತ್ರೆಗೆ ಸುರಿಯಬೇಕು. ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸರಿಸುಮಾರು 10 ನಿಮಿಷವಾದ್ರೂ ಕುದಿಸಬೇಕು. ತುಂಬಾ ಗಟ್ಟಿಯಾಗಿದ್ರೆ ಸ್ವಲ್ಪ ನೀರನ್ನು ಹಾಕಿ.
7/ 7
ಇದಾದ ನಂತರ ನೀವು ಒಗ್ಗರಣೆಯನ್ನು ಸಿದ್ಧಪಡಿಸಿಕೊಳ್ಳಿ. ಇಂಗು ಬೇಕಾದ್ರೆ ಹಾಕಬಹುದು. ಕೊನೆಗೆ ಆ ಬೇಯಿಸಿದ ಸಾಂಬಾರ್ ಪಾತ್ರೆಗೆ ಈ ಒಗ್ಗರಣೆಯನ್ನು ಹಾಕಿ ಮಿಶ್ರಣ ಮಾಡಿ. ಇಷ್ಟೆಲ್ಲಾ ಆದ ನಂತರ ರುಚಿ ರುಚಿಯಾದ ಬಸಳೆ ಸೊಪ್ಪಿನ ಸಾಂಬಾರ್ ಸಿದ್ಧವಾಗಿರುತ್ತದೆ. ಈ ಸಾಂಬಾರ್ನ್ನು ಅನ್ನದ ಜೊತೆಗೆ, ಪುಂಡಿ ಅಥವಾ ಮುದ್ದೆಗೆ ಹಾಕಿ ತಿಂದ್ರೆ ಸಖತ್ ಟೇಸ್ಟ್ ಇರುತ್ತೆ.
First published:
17
Vegetarian Recipe: ಬೇಸಿಗೆಗೆ ಈ ಬಸಳೆ ಸೊಪ್ಪಿನ ಸಾಂಬಾರ್ ಬೆಸ್ಟ್, ಈಸಿಯಾಗಿ ಮಾಡಿ ಈ ರೆಸಿಪಿ!