ಗ್ರೀನ್ ಟೀ, ಜಿಂಜರ್ ಟೀ ಹೀಗೆ ವಿವಿಧ ಬಗೆಯ ಟೀ ಬಗ್ಗೆ ಕೇಳಿರುತ್ತೇವೆ. ಆದರೆ ಬನಾನಾ ಟೀ ಬಗ್ಗೆ ಕೇಳೀದ್ದೀರಾ?. ಹೌದು. ಬಾಳೆ ಹಣ್ಣಿನಿಂದ ಟೀ ಮಾಡುತ್ತಾರೆ. ಮಾತ್ರವಲ್ಲದೆ, ಹಲವಾರು ಪ್ರಯೋಜನಗಳು ಇದರಲ್ಲಿದೆ.
2/ 8
ಬಾಳೆ ಹಣ್ಣು ತಿನ್ನುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಅನೇಕರು ಊಟ ಆದ ನಂತರ ಬಾಳೆ ಹಣ್ಣು ಸೇವಿಸುತ್ತಾರೆ. ಅದರಂತೆ ಬಾಳೆ ಹಣ್ಣಿನ ಟೀ ಕುಡಿದರೆ ಹತ್ತಾರು ಪ್ರಯೋಜನಗಳು ದೇಹಕ್ಕೆ ಸಿಗುತ್ತದೆ..
3/ 8
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಾಳೆ ಹಣ್ಣು ಸೇವಿಸಿದರೆ ಉತ್ತಮ. ಅದರಂತೆ ಬಾಳೆ ಹಣ್ಣಿನ ಟೀ ಕುಡಿದರೆ ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ.
4/ 8
ಅದರಲ್ಲೂ ನಿದ್ರೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಬಾಳೆ ಹಣ್ಣಿನ ಟೀ ಪ್ರಮುಖ ಪಾತ್ರ ವಹಿಸುತ್ತದೆ. ತೂಕ ಹಾಗೂ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮವಾಗಿದೆ.
5/ 8
ಮಧುಮೇಹ, ಹೃದ್ರೋಗ ಹಾಗೂ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆ ಹಣ್ಣಿನ ಚಹಾ ಪ್ರಯೋಜನಕಾರಿಯಾಗಿದೆ.
6/ 8
ನಿದ್ರೆಯ ಕೊರತೆಯಿಂದ ಬಳಲುತ್ತಿರುವವರು ಬಾಳೆ ಹಣ್ಣಿನ ಚಹಾ ಕುಡಿದರೆ ಗಟ್ಟಿಯಾಗಿ ನಿದ್ದೆ ಬರುತ್ತದೆ. ಇದರಲ್ಲಿ ಪೊಟ್ಯಾಸಿಯಂ, ಮೆಗ್ನೀಸಿಯಮ್ ಮತ್ತು ಟ್ರಿಫ್ಟೊಫಾನ್ ಎಂಬ ಮೂರು ಪ್ರಮುಖ ಪೋಷಕಾಂಶಗಳಿವೆ, ಇದು ನಿದ್ರೆ ಸರಿಯಾಗಿ ಬರಲು ಸಹಾಯ ಮಾಡುತ್ತದೆ.
7/ 8
ಬಾಳೆ ಹಣ್ಣಿನ ಚಹಾ ಸೇವನೆಯಿಂದ ದೇಹಕ್ಕೆ ಫೈಬರ್ ಪ್ರಮಾಣ ಸಿಗುತ್ತದೆ. ಇದು ದೇಹವನ್ನು ಸಧೃಡವಾಗಿಡಲು ನೆರವಾಗುತ್ತದೆ. ಪ್ರತಿ ದಿನ 1 ಬಾಳೆಹಣ್ಣು ಸೇವಿಸುವುದರಿಂದ ಹಲವಾರು ಪ್ರಯೋಜನ ಸಿಗಲಿದೆ.
8/ 8
ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ 6 ಡಯಾಬಿಟಿಸ್ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.ಉರಿಯೂತ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.